ವಸಿಷ್ಠ ಸಿಂಹ-ಹರಿಪ್ರಿಯಾ ನಿಶ್ಚಿತಾರ್ಥ ಫೋಟೋ ರಿವೀಲ್; ಮದುವೆ ಯಾವಾಗ?

Published : Dec 03, 2022, 03:51 PM IST

ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ನಿಶ್ಚಿತಾರ್ಥದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

PREV
16
ವಸಿಷ್ಠ ಸಿಂಹ-ಹರಿಪ್ರಿಯಾ ನಿಶ್ಚಿತಾರ್ಥ ಫೋಟೋ ರಿವೀಲ್; ಮದುವೆ ಯಾವಾಗ?

ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ ನಟ ವಸಿಷ್ಠ ಸಿಂಹ ಜೊತೆ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಇತ್ತೀಚಿಗಷ್ಟೆ ಅಂದರೆ ಡಿಸೆಂಬರ್ 2 ರಂದು ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಈ ಬಗ್ಗೆ ಹರಿಪ್ರಿಯಾ ಅಥವಾ ವಸಿಷ್ಠ ಕಡೆಯಿಂದ ಯಾವುದೇ ಮಾಹಿತಿ ರಿವೀಲ್ ಆಗಿರಲಿಲ್ಲ. ಇದೀಗ ಇಬ್ಬರ ನಿಶ್ಚಿತಾರ್ಥದ ಫೋಟೋಗಳು ರಿವೀಲ್ ಆಗಿದೆ. 

26

ಬೆಂಗಳೂರಿನ ಹರಿಪ್ರಿಯಾ ನಿವಾಸದಲ್ಲಿಯೇ ನಿಶ್ಚಿತಾರ್ಥ ಸಮಾರಂಭ ನಡೆದಿದೆ. ಸಿಂಪಲ್ ಆಗಿ ನಡೆದ ನಿಶ್ಚಿತಾರ್ಥದ ಸಂಭ್ರಮದಲ್ಲಿ ಹರಿಪ್ರಿಯಾ ಮತ್ತು  ವಸಿಷ್ಠ ಇಬ್ಬರೂ ಉಂಗುರ ಬದಲಾಯಿಸಿಕೊಂಡಿದ್ದಾರೆ. ಈ ಸಮಾರಂಭದಲ್ಲಿ ವಸಿಷ್ಠ ಮತ್ತು ಹರಿಪ್ರಿಯಾ ಕುಟುಂಬದವರು ಮಾತ್ರ ಹಾಜರಿದ್ದರು. 

36

ನಿಶ್ಚಿತಾರ್ಥ ಸುದ್ದಿ ವೈರಲ್ ಆದ ಬಳಿಕ ಹರಿಪ್ರಿಯಾ ಸಾಮಾಜಿಕ ಜಾಲತಾಣದಲ್ಲಿ ಸಿಂಹದ ಪೋಟೋ ಶೇರ್ ಮಾಡಿ ಚಿನ್ನ ನಿನ್ನ ತೋಳಿನಲ್ಲಿ ಕಂದ ನಾನು ಎನ್ನುವ ಸಾಲನ್ನು ಶೇರ್ ಮಾಡಿದ್ದರು. ಈ ಮೂಲಕ ಹರಿಪ್ರಿಯಾ ಪರೋಕ್ಷವಾಗಿ ವಸಿಷ್ಠ ಸಿಂಹ ಜೊತೆ ಎಂಗೇಜ್ ಆದ ವಿಚಾರವನ್ನು ಹೇಳಿದ್ದರು. ಅಭಿಮಾನಿಗಳು ಕಾಮೆಂಟ್ ಮಾಡಿ ಇಷ್ಟು ಹಿಂಟ್ ಕೊಟ್ಟರೆ ಸಾಕು ಗೊತ್ತಾಗುತ್ತೆ. ಇಬ್ಬರಿಗೂ ಅಭಿನಂದನೆಗಳು ಎಂದು ಹೇಳಿದ್ದರು. 

46

ಸರಳವಾಗಿ ನಡೆದ ನಿಶ್ಚಿತಾರ್ಥ ಸಮಾರಂಭದಲ್ಲಿ ಹರಿಪ್ರಿಯಾ ಹಳದಿ ಬಣ್ಣದ ಜೆರೆ ಸೀರಿಯಲ್ಲಿ ಕಂಗೊಳಿಸಿದ್ದರು. ವಸಿಷ್ಠ ಕೂಡ ಹಳದಿ ಬಣ್ಣದ ಮಾಡ್ರನ್ ದೋತಿ ಧರಿಸಿದ್ದರು. ಸದ್ಯ ಇಬ್ಬರ ನಿಶ್ಚಿತಾರ್ಥದ ಫೋಟೋಗಳು ವೈರಲ್ ಆಗಿವೆ. 

56

ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಪ್ರೀತಿ ವಿಚಾರ ಬಹಿರಂಗವಾದ ನಂತರ ಇಬ್ಬರೂ ದುಬೈ ಪ್ರವಾಸಕ್ಕೆ ಹಾರಿದ್ದರು. ಇಬ್ಬರೂ ಕೈ ಕೈ ಹಿಡಿದು ಏರ್ಪೋರ್ಟ್ ನಲ್ಲಿ ಕಾಣಿಸಿಕೊಂಡ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇಬ್ಬರೂ ಮದುವೆ ಶಾಪಿಂಗ್ ಮಾಡಲು ದುಬೈಗೆ ಹಾರಿದ್ದರು ಎನ್ನಲಾಗಿದೆ. 

66

ದುಬೈನಿಂದ ವಾಪಾಸ್ ಬರುತ್ತಿದ್ದಂತೆ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕುಟುಂಬದವರ ಸಮ್ಮುಮುಖದಲ್ಲಿ ಇಬ್ಬರೂ ಉಂಗುರ ಬದಲಾಯಿಸಿಕೊಂಡಿದ್ದಾರೆ. ಈ ಬಗ್ಗೆ ಹರಿಪ್ರಿಯಾ ಮತ್ತು ವಸಿಷ್ಠ ಕಡೆಯಿಂದ ಇನ್ನೂ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಸದ್ಯ ನಿಶ್ಚಿತಾರ್ಥ ಮಾಡಿಕೊಂಡಿರುವ ಈ ಜೋಡಿ ಮುಂದಿನ ವರ್ಷ ಜನವರಿ ಅಥವಾ ಫೆಬ್ರವರಿಯಲ್ಲಿ ಮದುವೆಯಾಗುವ ಸಾಧ್ಯತೆ ಇದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories