ದರ್ಶನ್ ತೂಗ್ ದೀಪ್ ಗೆ ನಾಯಕಿಯಾಗಿ ಕಾಟೇರ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಭರ್ಜರಿ ಎಂಟ್ರಿ ಕೊಟ್ಟ ಖ್ಯಾತ ನಟಿ ಮಾಲಾಶ್ರೀ ಮಗಳು ಆರಾಧನಾ ರಾಮ್ (Aradhana Ram) ಅಂದ, ಚೆಂದ, ಸ್ಟೈಲ್ ಗೆ ಹುಡುಗರು ಮನಸೋತಿದ್ದಾರೆ.
ಕನ್ನಡ ಚಿತ್ರರಂಗ ನಿರ್ಮಾಪಕ ರಾಮ್ ಹಾಗೂ ನಟಿ ಮಾಲಾಶ್ರೀ ಮಗಳು ಆರಾಧನಾ ಮೊದಲ ಸಿನಿಮಾ ಮೂಲಕವೇ ಕನ್ನಡದ ಭರವಸೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಅದರ ಜೊತೆಗೆ ತಮ್ಮ ಸ್ಟೈಲ್ ನಿಂದಾಗಿ ಕೂಡ ಸದಾ ಸುದ್ದಿಯಲ್ಲಿರುತ್ತಾರೆ.
ಸೋಶಿಯಲ್ ಮೀಡಿಯಾದಲ್ಲಿ (Social media) ಆಕ್ಟೀವ್ ಆಗಿರುವ ಆರಾಧನಾ ರಾಮ್ ಇಂದು ಲಂಗ, ಬ್ಲೌಸ್ ತೊಟ್ಟ ಫೋಟೋ ಅಪ್ ಲೋಡ್ ಮಾಡಿದ್ದು, ಜನರಂತೂ ನೋಡ್ತಾ ನೋಡ್ತಾ ಶಾನೆ ಪ್ರೀತಿ ಆಗ್ಬಿಟೈತೆ ಎಂದು ಆರಾಧನಾ ಅಂದವನ್ನು ಹೋಗಳ್ತಿದ್ದಾರೆ.
ಹಳದಿ, ನೀಲಿ ಮಿಕ್ಸ್ಡ್ ಬಣ್ಣದ ಲಂಗ ಜೊತೆಗೆ ಸ್ಟ್ರಾಪ್ ಬ್ಲೌಸ್ ಧರಿಸಿ, ಅದಕ್ಕೊಪ್ಪುವ ಕಿವಿಯೋಲೆ ಮತ್ತು ಮುಂದಾಲೆ ಧರಿಸಿ, ಫೋಟೋಕ್ಕೆ ಪೋಸ್ ನೀಡಿದ್ದು, ಯಾವಾಗಲೂ ಜೀವನದ ಬ್ರೈಟ್ ಸೈಡ್ ಮಾತ್ರ ನೋಡಿ ಎಂದು ಕ್ಯಾಪ್ಶನ್ ಕೂಡ ಕೊಟ್ಟಿದ್ದಾರೆ.
ಕಾಟೇರ ಕ್ವೀನ್ ನ (Katera) ಕಿಲ್ಲರ್ ಲುಕ್, ತುಂಬಾನೆ ಚೆನ್ನಾಗಿ ಕಾಣಿಸ್ತಿದ್ದೀರಿ, ಬೋಲ್ಡ್ ಆಂಡ್ ಬ್ಯೂಟಿ ಫುಲ್ ಸುಂದರಿ ಆರಾಧಾನ, ನಿಮ್ಮ ಅಂದ ಬೆಂಕಿ ಥರಾ ಇದೆ ಎಂದೆಲ್ಲಾ ಜನ ಏನೇನೋ ಕಾಮೆಂಟ್ ಮಾಡಿ, ದರ್ಶನ್ ಜೊತೆ ಇನ್ನೊಂದು ಸಿನಿಮಾ ಮಾಡಿ ಎಂದು ಸಹ ಸಲಹೆ ಕೊಟ್ಟಿದ್ದಾರೆ.
ಮುಂಬೈನಲ್ಲಿ ಆ್ಯಕ್ಟಿಂಗ್ ತರಬೇತಿ ಪಡೆದ ಆರಾಧನಾ, ತಮ್ಮ ಮೊದಲ ಸಿನಿಮಾದಲ್ಲಿ ಕನ್ನಡಿಗರ ಮನಗೆದ್ದರು. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಇವರು ಸಿಕ್ಕಾಪಟ್ಟೆ ಫೋಟೊ ಶೇರ್ ಮಾಡುತ್ತಿರುತ್ತಾರೆ.
ಕಾಟೇರ ಸಿನಿಮಾದಲ್ಲಿನ ಆರಾಧನಾ ಅಭಿನಯಕ್ಕಾಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಕೆಗೆ ಪ್ರಶಸ್ತಿಗಳು ಬಂದಿದ್ದವು. ಮುಂದೆ ಯಾವ ಸಿನಿಮಾದಲ್ಲಿ ನಟಿಸಬಹುದು ಎನ್ನುವ ಕುತೂಹಲವು ಜನರಲ್ಲಿ ಹೆಚ್ಚಾಗಿದೆ. ಆದರೆ ಇದುವರೆಗೂ ಹೊಸ ಸಿನಿಮಾ ಕುರಿತು ಯಾವುದೇ ಮಾಹಿತಿ ಸಿಕ್ಕಿಲ್ಲ.