ನಾ ಸಾಮಿ ರಂಗ ಸಕ್ಸಸ್… ವರಾಲು ಪಾತ್ರ ಇಷ್ಟಪಟ್ಟ ಜನರಿಗೆ ಥ್ಯಾಂಕ್ಸ್ ಹೇಳಿದ ಅಶಿಕಾ ರಂಗನಾಥ್

Published : Feb 29, 2024, 03:19 PM IST

ಚುಟು ಚುಟು ಅಂತೈತೆ ಹಾಡಿನ ಮೂಲಕ ಕನ್ನಡಿಗರ ಹೃದಯಕ್ಕೆ ಲಗ್ಗೆ ಇಟ್ಟ ಮಿಲ್ಕಿ ಬ್ಯೂಟಿ ಆಶಿಕಾ ರಂಗನಾಥ್ ಸದ್ಯ ತೆಲುಗು ಸಿನಿಮಾ ನಾ ಸಾಮಿ ರಂಗ ಯಶಸ್ಸಿನ ಖುಷಿಯಲ್ಲಿದ್ದಾರೆ.   

PREV
18
ನಾ ಸಾಮಿ ರಂಗ ಸಕ್ಸಸ್… ವರಾಲು ಪಾತ್ರ ಇಷ್ಟಪಟ್ಟ ಜನರಿಗೆ ಥ್ಯಾಂಕ್ಸ್ ಹೇಳಿದ ಅಶಿಕಾ ರಂಗನಾಥ್

ಸದ್ಯ ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ಪಟಾಕಿ ಪೋರಿ ಆಶಿಕಾ ರಂಗನಾಥ್ (Ashika Ranganath) ಜನಪ್ರಿಯ ನಟ ನಾಗಾರ್ಜುನ್ ಜೊತೆಗೆ ನಟಿಸಿದ ನಾ ಸಾಮಿ ರಂಗ ಸಿನಿಮಾದ ಯಶಸ್ಸಿನ ಸಂಭ್ರಮದಲ್ಲಿದ್ದಾರೆ. 
 

28

ಕನ್ನಡದಲ್ಲಿ ಶರಣ್ ಜೊತೆ ಚುಟು ಚುಟು ಅಂತೈತಿ ಎಂದು ಹಾಡಿದ ಮಿಲ್ಕಿ ಬ್ಯೂಟಿ ಆಶಿಕಾ, ಆ ಮೂಲಕ ಕನ್ನಡಿಗರ ಹೃದಯಕ್ಕೆ ಲಗ್ಗೆ ಇಟ್ಟಿದ್ದಾರೆ. ಅದರ ಜೊತೆಗೆ ಕನ್ನಡದಲ್ಲಿ ಹಲವು ಹಿಟ್ ಸಿನಿಮಾ, ಹಾಡುಗಳನ್ನು ಸಹ ನೀಡಿದ್ದರು. 

38

ಕನ್ನಡದಲ್ಲಿನ ಸಕ್ಸಸ್ ಬಳಿಕ ತೆಲುಗು, ತಮಿಳು ಚಿತ್ರರಂಗದ ಕಡೆಗೆ ಮುಖ ಮಾಡಿರುವ ನಟಿ ಆಶಿಕಾ ನಾ ಸಾಮಿ ರಂಗ (Naa Sami Ranga), ಅಮಿಗೋಸ್, ಪಟ್ತತ್ತು ಅರಸು ಎನ್ನುವ ಸಿನಿಮಾಗಳಲ್ಲಿ ನಟಿಸುವ ಮೂಲಕ ನೆರೆಯ ಸಿನಿಮಾ ರಂಗದಲ್ಲೂ ಸದ್ದು ಮಾಡುತ್ತಿದ್ದಾರೆ. 
 

48

ಸದ್ಯಕ್ಕಂತೂ ಈ ವರ್ಷದ ಆರಂಭದಲ್ಲಿ ಸಂಕ್ರಾಂತಿಗೆ ಬಿಡುಗಡೆಯಲ್ಲಿ ನಾ ಸಾಮಿ ರಂಗ ಸಿನಿಮಾದಲ್ಲಿ ವರಲಕ್ಷ್ಮೀ ಪಾತ್ರದಲ್ಲಿ ನಟಿಸುವ ಮೂಲಕ ತೆಲುಗು ವೀಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದ್ದಾರೆ ಆಶಿಕಾ. 
 

58

ಆಶಿಕಾ ಜೊತೆಗೆ ನಾಗಾರ್ಜುನ್, ಅಲ್ಲರಿ ನರೇಶ್, ರಾಜ್ ತರುಣ್, ನಾಸರ್ ಅಭಿನಯದ ನಾ ಸಾಮಿ ರಂಗ ಸಿನಿಮಾ ಭಾರಿ ಯಶಸ್ಸು (Success) ಗಳಿಸಿದ್ದು, ಸದ್ಯ ಆಶಿಕಾ ಅದೇ ಸಂಭ್ರಮದಲ್ಲಿದ್ದೂ, ಸಿನಿಮಾದಲ್ಲಿನ ತನ್ನ ಪಾತ್ರದ ಹಲವು ಫೋಟೋಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. 
 

68

ಲಂಗ ದಾವಣಿ ಧರಿಸಿದ ಫೋಟೋಗಳನ್ನು ಶೇರ್ ಮಾಡಿರುವ ಆಶಿಕಾ ತನ್ನ ಪಾತ್ರವನ್ನು ಮೆಚ್ಚಿಕೊಂಡ, ಜನರಿಗೆ ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಿದ್ದಾರೆ. ಆಶಿಕಾ ಅಂದವನ್ನು ಹೊಗಳಿದ ಅಭಿಮಾನಿಗಳು ವರಲು ಪಾತ್ರದ ಮೂಲಕ ನೀವು ನಮ್ಮ ಹೃದಯ ಕದ್ದಿದ್ದೀರಿ ಎಂದು ಹೇಳಿದ್ದಾರೆ. 
 

78

ನಿಮ್ಮ ಕ್ಯೂಟ್ ನೆಸ್ ಮತ್ತು ನಟನೆಗೆ ಫಿದಾ ಆಗಿದ್ದೀವಿ, ವರಲು ಕಣ್ಣುಗಳೇ ನಮ್ಮ ಮನಸಲ್ಲಿ ಫಿಕ್ಸ್ ಆಗಿದೆ. ಆಶಿಕಾ ಅಂದ್ರೆನೆ ವರಾಲು ಪಾತ್ರ ಜ್ಞಾಪಕಕ್ಕೆ ಬರುತ್ತೆ. ಇನ್ನೆಷ್ಟು ಜನರ ನಿದ್ದೆ ಕೆಡೀಸ್ತೀರಾ ಎಂದು ಸಹ ಕೇಳಿದ್ದಾರೆ. 
 

88

ಆದರೆ ಕೆಲವು ಕನ್ನಡಿಗರು ಮಾತ್ರ ಸ್ವಲ್ಪ ಗರಂ ಆಗಿದ್ದು, ಕನ್ನಡ ಬಿಟ್ಟು ಬೇರೆ ಭಾಷೆಗೆ ಹೋದ್ರಲ್ವಾ ಅಲ್ಲೇ ಇರಿ ಅಂದಿದ್ದಾರೆ, ಇನ್ನೊಬ್ಬರು ಕನ್ನಡ ಸಿನಿಮಾಗೆ ಇಷ್ಟೊಂದು ಪ್ರೊಮೋಷನ್ ಮಾಡಿದ್ದು ನೋಡಿಲ್ಲ ಅಂದಿದ್ದಾರೆ. ಅದಕ್ಕೆ ಉತ್ತರಿಸುತ್ತಾ ಮತ್ತೊಬ್ಬ ಅಭಿಮಾನಿ ಕನ್ನಡದಲ್ಲಿ ಒಳ್ಳೊಳ್ಳೆ ಪಾತ್ರ ಸಿಕ್ಕಿದ್ರೆ ಬೇರೆ ಸಿನಿಮಾಕೆ ಯಾಕೆ ಹೋಗ್ತಿದ್ರು, ಪಾಪ ಬೆಳಿತಿದ್ದಾರೆ, ಬೆಳಿಯಲಿ ಬಿಡಿ ಎಂದಿದ್ದಾರೆ. 

Read more Photos on
click me!

Recommended Stories