ತಾಯಿ ಅಗಲಿದ 5 ತಿಂಗಳಲ್ಲೇ Shubha Poonja ಮನೆಯಲ್ಲಿ ಮತ್ತೊಂದು ಸಾವು… ಕಣ್ಣೀರಿಟ್ಟ ನಟಿ

Published : Nov 24, 2025, 02:13 PM IST

ಕನ್ನಡ Actress Shubha Poonja ಅವರ ತಾಯಿ ಅಗಲಿ ಐದು ತಿಂಗಳು ಕಳೆಯುವಷ್ಟರಲ್ಲಿ ನಟಿಯ ಮನೆಯ ಮತ್ತೊಬ್ಬ ಸದಸ್ಯರು ಇದೀಗ ಸಾವನ್ನಪ್ಪಿದ್ದಾರೆ. ದುಃಖದ ಮಡುವಿನಲ್ಲಿರುವ ನಟಿ, ಮರೆಯಾದ ಜೀವದ ಕುರಿತು ಭಾವುಕರಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

PREV
17
ಶುಭ ಪೂಂಜಾ

ಕನ್ನಡ ಚಿತ್ರರಂಗದ ಖ್ಯಾತ ನಟಿ ಶುಭ ಪೂಂಜಾ ಅವರ ತಾಯಿ ಕಳೆದ ಐದು ತಿಂಗಳ ಹಿಂದಷ್ಟೇ ನಿಧನರಾಗಿದ್ದರು. ಆ ದುಃಖದಲ್ಲಿ ಇನ್ನೂ ಕೊರಗುತ್ತಿರುವ ಶುಭ ಪೂಂಜಾ ಮನೆಯಲ್ಲಿ ಇದೀಗ ಮತ್ತೊಬ್ಬ ಸದಸ್ಯರು ಸಾವನ್ನಪ್ಪಿದ್ದು. ನಟಿ ಆ ದುಃಖವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

27
ನಟಿಯ ಅತ್ತಿಗೆ ನಿಧನ

ಈ ಕುರಿತು ತಮ್ಮ ಇನ್’ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಶುಭಾ ಪೂಂಜಾ ‘ಈ ಸುಂದರ ವ್ಯಕ್ತಿ ನನ್ನ ಪ್ರೀತಿಯ ಅತ್ತಿಗೆ... .. ನಮ್ಮ ಕುಟುಂಬಕ್ಕೆ ಪಂಜಾಬಿಯಾಗಿ ಬಂದವರು.. ನನ್ನ ಸಹೋದರನನ್ನು ಮದುವೆಯಾದರು. ಆದರೆ ಸ್ವಲ್ಪ ಸಮಯದಲ್ಲೇ ಪರಿಪೂರ್ಣ ಮಂಗಳೂರಿನವರು ಮತ್ತು ಕನ್ನಡ ಹುಡುಗಿ ಆದರು... ನನಗೆ ಸಹೋದರಿ ಮತ್ತು ನನ್ನ ತಾಯಿಗೆ ಮಗಳು.

37
ನವಂಬರ್ 10ರಂದು ಅತ್ತಿಗೆ ನಿಧನ

ನಾವು ಆತ್ಮೀಯ ಸ್ನೇಹಿತರಂತೆ ಇದ್ದೆವು.. ಗಾಸಿಪ್ ಮಾಡುತ್ತಾ... ಶಾಪಿಂಗ್ ಮಾಡುತ್ತಾ... ಮತ್ತು ಎಲ್ಲಾ ಹುಡುಗಿಯರ ಕೆಲಸಗಳನ್ನು ಒಟ್ಟಿಗೆ ಮಾಡುತ್ತಿದ್ದೆವು ಏಕೆಂದರೆ ನಾವು ಹುಡುಗರೇ ತುಂಬಿದ ಕುಟುಂಬದಲ್ಲಿದ್ದ ಇಬ್ಬರೇ ಹುಡುಗಿಯರು... ನವೆಂಬರ್ 10 ರಂದು ನಾವು ಅವರನ್ನು ಕಳೆದುಕೊಂಡೆವು.. ಮತ್ತು ನನ್ನ ಕುಟುಂಬದ ಹೃದಯವು ಒಡೆದು ಚೂರಾಗಿದೆ. ಪದಗಳಲ್ಲಿ ಹೇಳಲಾರದಷ್ಟು ನೋವು ಅನುಭವಿಸುತ್ತಿದ್ದೇವೆ.

47
ದೀರ್ಘಕಾಲದ ಕಾಯಿಲೆಯಿಂದ ಸಾವು

ನನ್ನ ತಾಯಿಯ ಮರಣದ ಕೇವಲ 5 ತಿಂಗಳ ನಂತರ ನಾನು ನನ್ನ ಒಬ್ಬಳೇ ಸಹೋದರಿಯನ್ನು ಕಳೆದುಕೊಂಡೆ ... ಅವರು ನಮ್ಮ ಜೀವನದಲ್ಲಿ ಅತಿದೊಡ್ಡ ಶೂನ್ಯವನ್ನು ಬಿಟ್ಟುಹೋದರು .. ಅವರು ತಮ್ಮ ಜೀವನವನ್ನು ನಗುವಿನಿಂದ ತುಂಬಿದ್ದರು .. ಅವರು ಹಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರೂ .. ಆದರೆ ಎಂದಿಗೂ ಅದರ ಬಗ್ಗೆ ದೂರು ನೀಡಲಿಲ್ಲ ಅಥವಾ ಒಮ್ಮೆಯೂ ದುಃಖಿತರಾಗಿರಲಿಲ್ಲ .. ಅವರು ಯಾವಾಗಲೂ ಸಂತೋಷವಾಗಿರಲು ಬಯಸಿದರು. ಅತ್ಯಂತ ಉದಾರ ವ್ಯಕ್ತಿ.. ನೃತ್ಯ ಮಾಡುತ್ತಾ, ಹಾಡು ಹೇಳುತ್ತಾ .. ಅವರು ನಮಗೆ ಖುಷಿಯಿಂದ ಇರುವುದು ಹೇಗೆ ಎಂದು ಕಲಿಸಿದರು .. ಜೀವನದಲ್ಲಿ ಏನೇ ಬಂದರೂ ಖುಷಿಯಾಗಿರಬೇಕು ಅನ್ನೋದನ್ನು ತಿಳಿಸಿದರು..

57
ಭಾವುಕರಾದ ಶುಭ ಪೂಂಜಾ

ಇವತ್ತು ನಾನು ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ.. ಆಕೆ ನಗುತ್ತಾ ನನ್ನ ಹೆಸರು ಕರೆಯುತ್ತಾ ಮನೆಯೊಳಗೆ ನಡೆದ ರೀತಿ.. ಇಂದು ನನ್ನ ಹೃದಯ ಚೂರಾಗಿ ಕಣ್ಣೀರಿಡುವಾಗ, ಆಕೆ ನನಗೆ ಕಲಿಸಿದ ಶಕ್ತಿ ಮತ್ತು ಧೈರ್ಯ ನನಗೆ ನೆರವಾಯಿತು. ಅದು ನನ್ನ ತಾಯಿಯ ಸಾವನ್ನು ಮತ್ತು ಶ್ರುತಿಯ ಸಾವನ್ನು ಎದುರಿಸುವಷ್ಟು ಶಕ್ತಿಯನ್ನು ನೀಡಿದೆ.. ಐ ಲವ್ ಯೂ ಮತ್ತು ಐ ಮಿಸ್ ಯು ಸೋ ಮಚ್ ಶ್ರು.. ಯಾವಾಗಲೂ ಮತ್ತು ಎಂದೆಂದಿಗೂ... ನಿನ್ನ ಹುಡುಗಿ... ನೀನು ಅಮ್ಮನೊಂದಿಗೆ ಇದ್ದೀಯಾ ಎಂದು ನನಗೆ ತಿಳಿದಿದೆ, ಈಗ ಅವಳು ನಿನ್ನನ್ನು ನೋಡಿಕೊಳ್ಳುತ್ತಾಳೆ… ಎಂದು ಭಾವುಕರಾಗಿ ಶುಭಾ ಪೂಂಜಾ ಬರೆದುಕೊಂಡಿದ್ದಾರೆ.

67
ಶುಭ ಪೂಂಜಾ ತಾಯಿ

ಇದೇ ವರ್ಷ ಮಾರ್ಚ್ ತಿಂಗಳಲ್ಲಿ ಶುಭ ಪೂಂಜಾ ಅವರ ತಾಯಿ ಅನಾರೋಗ್ಯದಿಂದಾಗಿ ಸಾವನ್ನಪ್ಪಿದ್ದರು. ನಟಿ ಹಲವಾರು ಸಮಯದಿಂದ ಅದೇ ನೋವಿನಿಂದ ಹೊರಗೆ ಬರಲು ಕಷ್ಟ ಪಡುತ್ತಿದ್ದರು. ಇದೀಗ ಶುಭ ಕುಟುಂಬದಲ್ಲಿ ಮತ್ತೊಂದು ಸಾವು ನಟಿಯ ಹೃದಯವನ್ನು ಛಿದ್ರ ಮಾಡಿದೆ.

77
ನ್ಯುಮೋನಿಯಾದಿಂದಾ ತಾಯಿ ಸಾವು

ಶುಭಾ ಪೂಂಜಾ ತಾಯಿ ನ್ಯುಮೋನಿಯಾ ಅಟ್ಯಾಕ್ ಆಗಿ ಲಂಗ್ಸ್ ನಲ್ಲಿ ನೀರು ತುಂಬಿದ್ದ ಕಾರಣ ಆರೋಗ್ಯದಲ್ಲಿ ಏರುಪೇರಾಗಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.. ಶುಭ ಪೂಂಜಾ ತಾಯಿಗೆ 70 ವರ್ಷ ವಯಸ್ಸಾಗಿತ್ತು. ನಾಲ್ಕು ತಿಂಗಳಿನಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ತಾಯಿ ಮಾರ್ಚ್ ತಿಂಗಳಲ್ಲಿ ನಿಧನರಾಗಿದ್ದರು.

Read more Photos on
click me!

Recommended Stories