43 ವರ್ಷದ ಈ ನಟಿ ಮದುವೆಯಾಗಿದ್ದು ತಮಿಳು ನಟ ಕೃಷ್ಣ ಅವರನ್ನು....!
ಈಗಾಗಲೇ ಕನ್ನಡ, ತೆಲುಗು, ತಮಿಳು ಭಾಷೆಯ ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿ, ಈಗ ʼಅಮೃತಧಾರೆʼ ಧಾರಾವಾಹಿಯಲ್ಲಿ ನಟಿಸುತ್ತಿರುವ ಛಾಯಾ ಸಿಂಗ್ ಅವರಿಗೆ ಈಗ 43 ವರ್ಷ ವಯಸ್ಸು. ಇವರಿಗೆ ತಮಿಳು ನಟ ಕೃಷ್ಣ ಜೊತೆ ಮದುವೆಯಾಗಿದೆ.
25
ಕಲಾವಿದೆ ಆಗಿದ್ದಕ್ಕೆ ಸೌಂದರ್ಯಕ್ಕೆ ಗಮನ ಕೊಡುವ ಛಾಯಾ ಸಿಂಗ್!
ಛಾಯಾ ಸಿಂಗ್ ಅವರು ಬ್ಯೂಟಿ ಬಗ್ಗೆ ಹೆಚ್ಚು ಗಮನಕೊಡುವವರಲ್ಲ. ಆದರೆ ಕಲಾವಿದರಾಗಿದ್ದಕ್ಕೆ ಒಂದಷ್ಟು ಗಮನ ಕೊಡಲೇಬೇಕು ಎಂದು ಗಮನಕೊಡುತ್ತಾರಂತೆ. ಛಾಯಾ ಸಿಂಗ್ ಅವರು ಎಲ್ಲ ರೀತಿಯ ಆಹಾರವನ್ನು ಸೇವಿಸುತ್ತಾರೆ, ಆದರೆ ಅದು ಮಿತಿಯಲ್ಲಿರುತ್ತದೆ. ಇದೇ ಅವರ ಡಯೆಟ್ ಎನ್ನಬಹುದು.
35
ಛಾಯಾ ಸಿಂಗ್ ಅವ್ರು ಹೆಚ್ಚು ನೀರು ಕುಡಿಯುತ್ತಾರೆ!
ಛಾಯಾ ಸಿಂಗ್ ಅವರು ಸಿಕ್ಕಾಪಟ್ಟೆ ನೀರು ಕುಡಿಯುತ್ತಾರೆ. ಇದರಿಂದ ದೇಹದ ಕಲ್ಮಶಗಳು ಹೊರಹೋಗುತ್ತವೆ ಎಂದು ಅವರು ನಂಬುತ್ತಾರೆ. "ನೀರು ಜಾಸ್ತಿ ಕುಡಿದರೆ ವಾಶ್ ರೂಮ್‌ಗೆ ಹೋಗಬೇಕಾಗುತ್ತದೆ ಅಂತ ಹೇಳ್ತಾರೆ, ಆದರೆ ನಮಗೆ ನೀರು ಕುಡಿಯೋದು ರೂಢಿ ಆದರೆ ಆ ಸಮಸ್ಯೆ ಬರೋದಿಲ್ಲ" ಎಂದು ಛಾಯಾ ಸಿಂಗ್ ಹೇಳಿದ್ದಾರೆ.
ಛಾಯಾ ಸಿಂಗ್ ಅವರಿಗೆ ದಪ್ಪನೆಯ, ಕಪ್ಪನೆಯ ತಲೆಕೂದಲಿದೆ. ಛಾಯಾ ಸಿಂಗ್ ಅವರು ತಲೆಸ್ನಾನ ಮಾಡುವ ಮುನ್ನ ಎಣ್ಣೆ ಹಚ್ಚಿ ಬಿಡುತ್ತಾರೆ. ಇದು ದೊಡ್ಡ ರಹಸ್ಯ ಅಂತೆ. ಇನ್ನು ಪತಿಯ ಬೆಂಬಲದಿಂದ ವ್ಯಾಯಾಮ ಕೂಡ ಮಾಡುತ್ತಾರೆ. ವ್ಯಾಯಾಮದಿಂದ ನಮ್ಮ ಮೈಯೊಳಗಿನ ಬೆವರು ಕೂಡ ಹೋಗುವುದು, ಇದು ತುಂಬ ಒಳ್ಳೆಯದು ಎನ್ನುತ್ತಾರೆ ಛಾಯಾ ಸಿಂಗ್.
55
ಸುಂದರ ಚರ್ಮಕ್ಕೆ ಛಾಯಾ ಸಿಂಗ್ ಫಾಲೋ ಮಾಡುವ ಮಂತ್ರ ಏನು?
ಛಾಯಾ ಸಿಂಗ್ ಅವರು ರೋಸ್ ವಾಟರ್ ಜೊತೆಗೆ ಅಥವಾ ನೀರಿನ ಜೊತೆಗೆ ಮುಲ್ತಾನಿ ಮುಟ್ಟಿಯನ್ನು ಮುಖಕ್ಕೆ ಹಚ್ಚುತ್ತಾರೆ. ಇದರಿಂದ ಅವರಿಗೆ ಮುಖದ ಮೇಲಿರುವ ಎಣ್ಣೆ ಹೋಗುತ್ತದೆಯಂತೆ.