ಸ್ಯಾಂಡಲ್‌ವುಡ್ ನಟ ಅಜಯ್ ರಾವ್ ಮತ್ತು ಸ್ವಪ್ನಾ ರಾವ್ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಕೌಟುಂಬಿಕ ಹಿಂಸೆ ಆರೋಪದ ಮೇಲೆ ಸ್ವಪ್ನಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಸ್ಯಾಂಡಲ್‌ವುಡ್‌ನ ಕೃಷ್ಣ ಎಂದೇ ಫೇಮಸ್ ಆಗಿದ್ದ ನಟ ಅಜಯ್ ರಾವ್ ಅವರ ಸಂಸಾರ ಮುರಿದುಬಿದ್ದಿದೆ. ಪತ್ನಿ ಸ್ವಪ್ನಾ ರಾವ್ ಕೌಟುಂಬಿಕ ಹಿಂಸೆಯ ಕಾರಣ ನೀಡಿ ಅಜಯ್ ರಾವ್ ಜೊತೆಗಿನ ವಿವಾಹದ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೆಂದು ವರದಿಯಾಗಿದೆ.
27
ಇದರ ನಡುವೆ ಅಜಯ್ ರಾವ್ ಹಾಗೂ ಸ್ವಪ್ನ ಅಜಯ್ ರಾವ್ ಅವರ ವಿವಾಹದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
37
2014ರ ಡಿಸೆಂಬರ್ 18 ರಂದು ಅಜಯ್ ರಾವ್ ಹಾಗೂ ಸ್ವಪ್ನಾ ರಾವ್ ವಿವಾಹವಾಗಿದ್ದು, ದಂಪತಿಗೆ ಚೆರಿಷ್ಮಾ ಹೆಸರಿನ ಮಗಳೂ ಇದ್ದಾರೆ.
ಮದುವೆಗೂ ಮುನ್ನ ಹಲವು ವರ್ಷಗಳ ಕಾಲ ಪ್ರೀತಿಯಲ್ಲಿದ್ದ ಜೋಡಿ, ಕೊಪ್ಪಳದ ದೇವಸ್ಥಾನವೊಂದರಲ್ಲಿ ಅತ್ಯಂತ ಸರಳವಾಗಿ ವಿವಾಹವಾಗಿದ್ದರು. ಇವರ ಮದುವೆಯನ್ನು ಅಜಯ್ ರಾವ್ ಹಾಗೂ ಸ್ವಪ್ನಾ ಅವರ ಆಪ್ತರು ಮಾತ್ರವೇ ಭಾಗವಹಿಸಿದ್ದರು.
57
ಅಜಯ್ ರಾವ್ ವಿರುದ್ಧ ಸ್ವಪ್ನಾ, ಕೌಟುಂಬಿಕ ದೌರ್ಜನ್ಯದ ಕೇಸ್ ಕೂಡ ಹಾಕಿದ್ದಾರೆ. ಅದರೊಂದಿಗೆ ವಿಚ್ಛೇದನಕ್ಕೂ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
67
ಇತ್ತೀಚೆಗೆ ಯುದ್ಧಕಾಂಡ ಸಿನಿಮಾ ಮಾಡಿದ್ದ ಅಜಯ್ ರಾವ್, ಅದಕ್ಕಾಗಿ ಸಾಕಷ್ಟು ಸಾಲ ಮಾಡಿದ್ದೇನೆ ಎಂದು ಹೇಳಿದ್ದರು. ಆದರೆ, ಎಲ್ಲಿಯೂ ತಮ್ಮ ಸಂಸಾರದಲ್ಲಿ ಮನಸ್ತಾಪಗಳು ಇರುವ ಬಗ್ಗೆ ಮಾತನಾಡಿರಲಿಲ್ಲ.
77
ಇಬ್ಬರ ಒಪ್ಪಿಗೆಯೊಂದಿಗೆ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೋ ಇಲ್ಲವೋ ಅನ್ನೋದು ಗೊತ್ತಾಗಿಲ್ಲ. ಕೌಟುಂಬಿಕ ದೌರ್ಜನ್ಯ ಕೇಸ್ ಹಾಕಿರುವ ಕಾರಣ ಇಬ್ಬರ ನಡುವಿನ ಸಂಸಾರ ಸರಿ ಇರಲಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.