ಮೇ 19ರಂದು ಚೆನ್ನೈನಲ್ಲಿ ಅದ್ಧೂರಿಯಾಗಿ ಹಿಂದು ಸಂಪ್ರದಾಯದ ಪ್ರಕಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ನಿಕ್ಕಿ ಗಲ್ರಾನಿ ಮತ್ತು ಆದಿ ಪಿನಿಸೆಟ್ಟಿ
27
ಆಪ್ತ ಸ್ನೇಹತರು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಾರಣ ಅದ್ಧೂರಿಯಾಗಿ ಆರತಕ್ಷತೆ ಮಾಡಿಕೊಂಡಿದ್ದಾರೆ.
37
ಆರತಕ್ಷತೆ ಕಾರ್ಯಕ್ರಮದಲ್ಲಿ ರಾಧಿಕಾ ಶರತ್‌ಕುಮಾರ್, ನಾಸಿರ್, ಐಶ್ವರ್ಯ ರಾಜೇಶ್, ಅರ್ನ ವಿಜಯ್, ಇಳಿಯರಾಜಾ ಸೇರಿದಂತೆ ಅನೇಕರು ಭಾಗಿಯಾಗಿದ್ದರು.
47
ಆರತಕ್ಷತೆಯಲ್ಲಿ ಆದಿ ಪಿನಿಸೆಟ್ಟಿ ಬಿಳಿ ಬಣ್ಣದ ಸೂಟ್ ಧರಿಸಿ ಮಿಂಚಿದ್ದರೆ ನಿಕ್ಕಿ ಸಿಲ್ವರ್ ಬಣ್ಣದ ಗೌನ್ ಧರಿಸುವ ಮೂಲಕ ಇಡೀ ಕಾರ್ಯಕ್ರಮಕ್ಕೆ ರಂಗು ತುಂಬಿದ್ದಾರೆ.
57
ಸೋಷಿಯಲ್ ಮೀಡಿಯಾದಲ್ಲಿ ಇಬ್ಬರೂ ಆಕ್ಟೀವ್ ಆಗಿರುವ ಕಾರಣ ಪ್ರತಿಯೊಂದು ಕಾರ್ಯಕ್ರಮದ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.
67
ಇಬ್ಬರೂ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದು, ಪೋಷಕರ ಒಪ್ಪಿಗೆ ಪಡೆದುಕೊಂಡು ದಾಂಪತ್ಯ ಜೀವನ ಶುರು ಮಾಡಿದ್ದಾರೆ.ಮದುವೆ ಅದ್ಧೂರಿಯಾಗಿ ನಡೆದರೂ ಕಡಿಮೆ ಜನ ಭಾಗಿಯಗಿದ್ದರು.
77
ನಿಕ್ಕಿ ಮತ್ತು ಆದಿ ಡೇಟಿಂಗ್ ವಿಚಾರ ದೊಡ್ಡ ಸುದ್ದಿಯಾಗಿತ್ತು. 2020ರಲ್ಲಿ ಆದಿ ತಂದೆ ಹುಟ್ಟುಹಬ್ಬ ಆಚರಣೆಯಲ್ಲಿ ನಿಕ್ಕಿ ಭಾಗಿಯಾಗಿದ್ದರು ಅಂದೇ ಅಭಿಮಾನಿಗಳಿಗೆ ಸಣ್ಣ ಸುಳಿವು ಸಿಕ್ಕಿತ್ತು. ಕೆಲವು ದಿನಗಳ ಹಿಂದೆ ಇಬ್ಬರು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು.