ಸಪ್ತಮಿ ಗೌಡ : ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು ಎನ್ನುತ್ತಾ ಕಾಂತಾರಾ ಚೆಲುವೆ ಸಪ್ತಮಿ ಗೌಡ ಜನರಿಗೆ ಸಂಕ್ರಾಂತಿ ಶುಭಾಶಯ ಕೋರಿದ್ದಾರೆ.
ರಚನಾ ರೈ : ತುಳು ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ನಟಿ ರಚನಾ ರೈ, ಸಂಕ್ರಾಂತಿಯ ಶುಭಾಶಯಗಳು. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಶುಭ ಕೋರಿದ್ದಾರೆ.
ರಂಜನಿ ರಾಘವನ್ : ಸೂರ್ಯದೇವನು ಪಥ ಬದಲಿಸುವ ಸಂಕ್ರಮಣದ ಸಂದರ್ಭದಲ್ಲಿ ಎಲ್ಲರಿಗೂ ಶುಭವಾಗಲಿ. ಎಳ್ಳು-ಬೆಲ್ಲದ ಜೊತೆಗೆ ಪ್ರೀತಿ ಸೌಹಾರ್ದತೆಯನ್ನು ಹಂಚೋಣ, ಎಲ್ಲೆಡೆ ಸುಖ-ಶಾಂತಿ, ಸಮೃದ್ಧಿ ನೆಲೆಸಲಿ. ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು...
ರುಕ್ಮಿಣಿ ವಸಂತ್ : ಸಪ್ತಸಾಗರದಾಚೆ ಚೆಲುವೆ ರುಕ್ಮಿಣಿ ವಸಂತ್, ಹೂವಿನ ಮಾರುಕಟ್ಟೆಯಲ್ಲಿ ನಿಂತುಕೊಂಡು ವಿವಿಧ ರೀತಿಯಲ್ಲಿ ಪೋಸ್ ಕೊಡುವ ಮೂಲಕ ಸಂಕ್ರಾಂತಿಯನ್ನು ಸಂಭ್ರಮಿಸಿದ್ದಾರೆ.
ಅಶ್ವಿನಿ : ಕನ್ನಡ ಕಿರುತೆರೆ ನಟಿ ಅಶ್ವಿನಿ ಸಾಂಪ್ರದಾಯಿಕ ಸೀರೆಯುಟ್ಟು ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು ಎಂದಿದ್ದಾರೆ.
ರಿಷಭ್ ಶೆಟ್ಟಿ : ನಿಮಗೆ ಹಾಗೂ ನಿಮ್ಮ ಕುಟುಂಬದವರಿಗೆ ಮಕರ ಸಂಕ್ರಾಂತಿಯ ಶುಭಾಶಯಗಳು ಎಂದು ರಿಷಭ್ ಶೆಟ್ಟಿ ಪತ್ನಿ ಮತ್ತು ಮಕ್ಕಳೊಂದಿಗಿನ ಫೋಟೊ ಶೇರ್ ಮಾಡಿದ್ದಾರೆ.
ಅನುಷಾ ರೈ : ಎಲ್ಲಾ ಸ್ನೇಹಿತರಿಗೆ, ಹಿರಿಯರಿಗೆ, ಗುರುಗಳಿಗೆ… ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು* ಸಂಕ್ರಾಂತಿ ಎಲ್ಲರ ಕಷ್ಟಗಳನ್ನುದೂರವಾಗಿಸಲಿ, ಸುಖ , ಸಮೃದ್ಧಿಯ ಸುಗ್ಗಿ ಪ್ರತಿ ಮನೆ - ಮನ ತುಂಬಲಿ ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ಸಂತೋಷ ನೆಮ್ಮದಿ ಹಾಗೂ ಸಕಲ ಐಶ್ವರ್ಯವನ್ನು ಕರುಣಿಸಲಿ, ನವಚೈತನ್ಯವನ್ನು ತರಲೆಂದು ಪ್ರಾರ್ಥಿಸುತ್ತೇವೆ...
ಅಮೃತಾ ರಾಮಮೂರ್ತಿ : ಎಳ್ಳು ಬೆಲ್ಲ ತಿಂದು ಸಿಹಿಯಾದ ಮಾತಾಡೋಣ.. ಎಲ್ಲಾ ಕಹಿ ಮರೆತು ಮಧುರವಾದ ಬಾಂಧವ್ಯ ವೃದ್ಧಿಸೋಣ.. ಮಕರ ಸಂಕ್ರಾಂತಿ 2025ರ ಶುಭಾಶಯಗಳು
ಶರಣ್ : ನಟ ಶರಣ ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಸುಗ್ಗಿ ಸಂಭ್ರಮ ಎಲ್ಲೆಡೆ ಮನೆ ಮಾಡಲಿ. ನಿಮ್ಮ ಪ್ರಯತ್ನಗಳೆಲ್ಲವೂ ಫಲ ಕೊಡಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.
ಮೌನ ಗುಡ್ಡೆಮನೆ : ರಾಮಾಚಾರಿ ಖ್ಯಾತಿಯ ನಟಿ ಮೌನ ಗುಡ್ಡೆಮನೆ ಸೀರಿಯಲ್ ಸಂತೆಯಲ್ಲಿಯೇ ಸಂಭ್ರಮದಿಂದ ಸಂಕ್ರಾಂತಿ ಹಬ್ಬವನ್ನು ಆಚರಿಸಿದ್ದಾರೆ.
ರಾಮಾಚಾರಿ ಫ್ಯಾಮಿಲಿ : ರಾಮಾಚಾರಿ ಸೀರಿಯಲ್ ನ ಎಲ್ಲರೂ ಜೊತೆಯಾಗಿ ಸಂಕ್ರಾಂತಿ ಆಚರಿಸಿದ್ದು, ರಾಮಾಚಾರಿ ಖ್ಯಾತಿಯ ರಿತ್ವಿಕ್ ಕೃಪಾಕರ್, ಅಂಜಲಿ ಸುಧಾಕರ್, ಮೌನ ಗುಡ್ಡೆಮನೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.
ಸಾನ್ಯಾ ಅಯ್ಯರ್ : ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ ಆಯ್ತಾ ಎನ್ನುತ್ತಾ ನೀಲಿ ಬಣ್ಣದ ಸೀರೆಯುಟ್ಟು ಪೋಸ್ ನೀಡಿದ್ದಾರೆ ಸಾನ್ಯಾ ಅಯ್ಯರ್.
ಸಂಯುಕ್ತ ಹೆಗ್ಡೆ : ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು. May this new year bring us all the joy and peace of life ಎನ್ನುತಾ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ ಕಿರಿಕ್ ಬೆಡಗಿ ಸಂಯುಕ್ತ ಹೆಗ್ಡೆ.