ಬಿಕಿನಿಯಲ್ಲಿ ಕನ್ನಡದ ಬೋಲ್ಡ್ ಬ್ಯೂಟಿ; ಮಾದಕತೆಯ ರೂಪಕವಾಗಿ ನಿಂತ ಚೈತ್ರಾ

First Published | May 30, 2024, 11:02 AM IST

ನಟಿ, ಗಾಯಕಿ ಚೈತ್ರಾ ಜೆ ಆಚಾರ್ ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಬೋಲ್ಡ್ ಆಗುತ್ತಲೇ ಇದ್ದಾರೆ. ಈ ಬಾರಿ ಅವರ ಬಿಕಿನಿ ಫೋಟೋ‌ಗಳಲ್ಲಿ ನೋಡುಗರನ್ನು ಕೆಣಕುತ್ತಿದ್ದಾರೆ. 

ನಟಿ ಚೈತ್ರಾ ಜೆ ಆಚಾರ್ ಎಂದರೆ ಪ್ರತಿಭೆ, ಸೌಂದರ್ಯಗಳ ಹೂರಣ. ನಟನೆ, ಗಾಯನ, ಫಿಟ್ನೆಸ್, ಬೋಲ್ಡ್‌ನೆಸ್ ಎಲ್ಲದರಲ್ಲೂ ತಮ್ಮದೇ ಛಾಪು ಮೂಡಿಸುತ್ತಿರುವ ಬೆಡಗಿ.

ಸದಾ ಬೋಲ್ಡ್ ಫೋಟೋಶೂಟ್ ಮೂಲಕ ಗಮನ ಸೆಳೆವ ಚೈತ್ರಾ ಈ ಬಾರಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬಿಕಿನಿ ಫೋಟೋಶೂಟ್ ಮಾಡಿಸಿದ್ದಾರೆ. 

Tap to resize

ಬಿಕಿನಿ, ಒದ್ದೆ ಕೂದಲು, ಮಾದಕ ನೋಟದ ನಡುವೆ ಅವರ ಆತ್ಮವಿಶ್ವಾಸ ಪ್ರದರ್ಶಿಸುವ ಬಾಡಿ ಲಾಂಗ್ವೇಜ್ ಮತ್ತು ಕಣ್ಣುಗಳು ಹೆಚ್ಚು ಆಕರ್ಷಕವಾಗಿ ಕಾಣಿಸುತ್ತಿವೆ. 

ಈಜನ್ನು ಮುಂದೊಂದು ದಿನ ಕಲಿಯುತ್ತೇನೆ, ಅಲ್ಲಿಯವರೆಗೆ ಪೋಸ್‌ಗಳೊಂದಿಗೆ ಮ್ಯಾನೇಜ್ ಮಾಡುತ್ತೇನೆ ಎಂದು ನಟಿ ಈ ಪೋಟೋಗಳಿಗೆ ಕ್ಯಾಪ್ಶನ್ ನೀಡಿದ್ದಾರೆ. 

ತಮ್ಮ ಸಿಕ್ಕಾಪಟ್ಟೆ ಹಾಟ್ ಫೋಟೋಗಳಿಗೆ ನೆಗೆಟಿವ್ ಕಾಮೆಂಟ್‌ಗಳನ್ನು ದೂರವಿರಿಸಲು ನಟಿ, ಕಾಮೆಂಟ್ ಸೆಕ್ಷನ್ ಸೀಮಿತರಿಗೆ ಮಾತ್ರ ಪ್ರತಿಕ್ರಿಯಿಸಲು ಅನುವಾಗುವಂತೆ ಮಾಡಿದ್ದಾರೆ. 

ಚೈತ್ರಾ ಫೋಟೋಗಳಿಗೆ ನಟಿ ಶಾನ್ವಿ ಶ್ರೀವಾಸ್ತವ್ ಕಾಮೆಂಟ್ ಮಾಡಿದ್ದು, 'ಮ್ಯಾಡಮ್ ಬಿಕಿನಿ ಪಿಕ್ಸ್ 🔥🔥🔥🔥 😬🦋🤗' ಎಂದಿದ್ದಾರೆ. 

ಫೋಟೋಗಳಲ್ಲಿ ನೀರೆ ನೀರಿನೊಳಗೆ ನಿಂತಿದ್ದರೂ ನೋಡುಗರ ಮೈ ಬಿಸಿ ಏರಿಸುತ್ತಿದ್ದಾರೆ. ಅಂದ ಹಾಗೆ, ಈ ಪೋಟೋಗಳು ಬ್ಲ್ಯಾಕ್ ಆ್ಯಂಡ್ ವೈಟ್‌ನಲ್ಲಿವೆ. 

ಇದೇ ವಾರದಲ್ಲಿ ಟೋಬಿ ನಟಿಯು, ಎಂಬ್ರಾಯಿಡರಿ ಡೀಪ್ ನೆಕ್ ಬ್ಲೌಸ್ ಮತ್ತು ಲೆಹೆಂಗಾ ಧರಿಸಿ, ಆಭರಣಗಳು ಹಾಗೂ ಎರಡು ಜೆಡೆಯಲ್ಲಿನ ಫೋಟೋಗಳನ್ನು ಶೇರ್ ಮಾಡಿ ಸಾಕಷ್ಟು ಪ್ರಶಂಸೆ ಗಳಿಸಿದ್ದರು. 

Latest Videos

click me!