ಸ್ಯಾಂಡಲ್ ವುಡ್ ಪ್ರಿನ್ಸೆಸ್ ರಾಧಿಕಾ ಪಂಡಿತ್ (Radhika Pandith) ಮತ್ತು ರಾಕಿಂಗ್ ಸ್ಟಾರ್ ಯಶ್ (Yash) ಬೆಸ್ಟ್ ಸೆಲೆಬ್ರಿಟಿ ಕಪಲ್, ಇವರಿಬ್ಬರ ಪ್ರೀತಿ ಹಲವರಿಗೆ ಪ್ರೇರಣೆಯಾಗಿದೆ ಅನ್ನೋದು ತಪ್ಪಲ್ಲ, ಯಾಕಂದ್ರೆ ಸಿನಿಮಾ ಇಂಡಸ್ಟ್ರಿಯಲ್ಲಿದ್ರೂ ಸಹ ಎಂದಿಗೂ ಗಾಸಿಪ್ ಗೆ ಆಹಾರವಾಗದೆ ಪ್ರೀತಿಸಿದ ಹುಡುಗಿಯನ್ನೇ ಕೈಹಿಡಿದು, ಇಂದಿಗೂ ಸಹ ಈ ಜೋಡಿ ಪ್ರೀತಿ ಅಂದ್ರೆ ಹೀಗಿರಬೇಕು ಅನ್ನೋದಕ್ಕೆ ಉದಾಹರಣೆಯಾಗಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಸದ್ಯ ಟಾಕ್ಸಿಕ್ ಸಿನಿಮಾ ಶೂಟಿಂಗ್ ಗಾಗಿ ದೇಶ, ವಿದೇಶ ಸುತ್ತುತ್ತಾ ಬ್ಯುಸಿಯಾಗಿದ್ದರೆ, ನಟಿ ರಾಧಿಕಾ ಪಂಡಿತ್ ಸದ್ಯ ಸಿನಿಮಾ, ನಟನೆಯಿಂದ ದೂರವಿದ್ದು, ಮಕ್ಕಳು ಸಂಸಾರ ಎಂದು ಬ್ಯುಸಿಯಾಗಿದ್ದಾರೆ. ಇದರ ಮಧ್ಯೆ ಒಂದಷ್ಟು ಸಮಯ ತೆಗೆದುಕೊಂಡು ತಮ್ಮ ಸೋಶಿಯಲ್ ಮೀಡಿಯಾದಲ್ಲಿ Ask me Anything ಸೆಷನ್ ಮಾಡಿದ್ದು, ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಮನಸು ಬಿಚ್ಚಿ ಉತ್ತರಿಸಿದ್ದಾರೆ.
ಅಭಿಮಾನಿಯೊಬ್ಬರು ರಾಧಿಕಾ ಬಳಿ ಗಂಡ ಮತ್ತು ಹೆಂಡತಿ ಸಂಬಂಧ ತುಂಬಾನೆ ಸ್ಟ್ರಾಂಗ್ ಆಗೋದಕ್ಕೆ ಯಾವ ಒಂದು ವಿಷ್ಯ ತುಂಬಾನೆ ಮುಖ್ಯ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ರಾಧಿಕಾ ಪಂಡಿತ್, ಯಶ್ ಮತ್ತು ಮಕ್ಕಳ ಜೊತೆಗಿನ ಫೋಟೋ ಹಾಕಿ, ಫ್ರೆಂಡ್ ಶಿಪ್ (friendship) ಅನ್ನೋದು ಎಲ್ಲಾ ಸಂಬಂಧಗಳ ಅಡಿಪಾಯ, ಅದು ಗಂಡ ಹೆಂಡತಿ ಸಂಬಂಧ ಇರಲಿ ಅಥವಾ ಪೋಷಕರು ಮತ್ತು ಮಕ್ಕಳ ಸಂಬಂಧ ಇರಲಿ ಫ್ರೆಂಡ್’ಶಿಪ್ ಮುಖ್ಯ ಎಂದಿದ್ದಾರೆ.
ಟಿವಿ ಸೀರಿಯಲ್ ನಲ್ಲಿ ಜೊತೆಯಾಗಿ ನಟಿಸಿದ್ದ ಯಶ್ ಮತ್ತು ರಾಧಿಕಾ ಪಂಡಿತ್ ಒಂದೇ ಸಿನಿಮಾದ ಮೂಲಕವೇ ಸಿನಿಮಾಕ್ಕೆ ಎಂಟ್ರಿ ಕೊಟ್ಟರು. ಇಬ್ಬರೂ ಕೂಡ ಜನಪ್ರಿಯತೆಯನ್ನು ಪಡೆದರು. ಇಬ್ಬರ ಸ್ನೇಹ ಹಲವು ವರ್ಷದ್ದು. ಇಬ್ಬರು ಎಲ್ಲೂ ಸಹ ತಾವು ಪ್ರೀತಿ ಮಾಡುತ್ತಿರುವ ಬಗ್ಗೆ ಹೇಳಿಕೊಂಡಿರಲಿಲ್ಲ, ಆ ರೀತಿ ಸಂಶಯ ಬರೋಹಾಗೆ ನಡೆದುಕೊಂಡು ಇಲ್ಲ. ಇಬ್ಬರ ಗಲಾಟೆ ಬಗ್ಗೆಯಂತೂ ಅವತ್ತೂ ಕೇಳಿಲ್ಲ, ಇವತ್ತಿಗೂ ಕೇಳಿ ಬಂದಿಲ್ಲ.
ಈ ಬಗ್ಗೆ ಮತ್ತೊಬ್ಬರು ಪ್ರಶ್ನಿಸಿದ್ದು, ನೀವಿಬ್ಬರು ಈ 10 ವರ್ಷಗಳ ಪ್ರೀತಿಯನ್ನು ಯಾವುದೇ ಜಗಳ ಇಲ್ಲದೇ ಹೇಗೆ ಮುನ್ನಡೆಸಿಕೊಂಡು ಬಂದಿದ್ದೀರಿ, ನಮಗೂ ಟಿಪ್ಸ್ ಕೊಡಿ ಎಂದಿದ್ದಾರೆ. ಇದಕ್ಕೆ ಪ್ರಬುದ್ಧತೆಯ ಉತ್ತರ ನೀಡಿರುವ ರಾಧಿಕಾ ಪಂಡಿತ್, ನಮ್ಮಿಬ್ಬರ ನಡುವೆ ಕೂಡ ಜಗಳ -ವಾದ ನಡೆಯುತ್ತೆ. ಇದು ಎಲ್ಲಾ ರೀತಿಯ ಸಂಬಂಧಗಳಲ್ಲಿ ಸಾಮಾನ್ಯವಾಗಿರೋದೆ.
ನಮ್ಮ ನಡುವೆ ಎಷ್ಟೇ ಜಗಳ ಆದಾರೂ, ಕೊನೆಗೆ ಇದು ಫೈಟ್ ಬಗ್ಗೆ ಅಲ್ಲ, ಇದು ಹೇಗೆ ಈ ಜಗಳ ಪ್ಯಾಚ್ ಅಪ್ ಆಗಿ ಇಬ್ಬರು ಜೊತೆಯಾಗೋದು ಹೇಗೆ? ಇಬ್ಬರ ಸಂಬಂಧ ಸ್ಟ್ರಾಂಗ್ ಮತ್ತು ಉತ್ತಮವಾಗೋದು ಹೇಗೆ ಅನ್ನೋದು ಮುಖ್ಯ. ಎಲ್ಲಾಕ್ಕಿಂತ ಮುಖ್ಯವಾಗಿ ಇಬ್ಬರ ನಡುವೆ ಅಹಂ, ಜಡ್ಜ್ ಮೆಂಟ್ ಇರಬಾರದು ಎಂದು ಹೇಳಿದ್ದಾರೆ.
ರಾಧಿಕಾ ಪಂಡಿತ್ ಹಾಗೂ ಯಶ್ 2016ರ ಡಿಸೆಂಬರ್ 9ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಸ್ಯಾಂಡಲ್ ವುಡ್ ನ ಈ ಮುದ್ದಾದ ಜೋಡಿಗಳಿಗೆ ಆಯ್ರಾ ಹಾಗೂ ಯಥರ್ವ್ ಹೆಸರಿನ ಮಕ್ಕಳಿದ್ದಾರೆ. ರಾಧಿಕಾ ಹೆಚ್ಚಾಗಿ ತಮ್ಮ ಮಕ್ಕಳ ಜೊತೆಗಿನ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಸದ್ಯ ಮಕ್ಕಳ ಆರೈಕೆಯಲ್ಲೇ ಬ್ಯುಸಿಯಾಗಿದ್ದಾರೆ ನಟಿ