ಹೀರೋಯಿನ್ ಆಗಿಲ್ಲ, ಆದರೆ ಟ್ರೆಂಡಿಂಗ್ ನಲ್ಲಿದ್ದಾರೆ. ಸದ್ಯ ಕನ್ನಡ ಚಿತ್ರಕ್ಕೆ ಎಂಟ್ರಿ ಕೊಡಲು ಸ್ಟಾರ್ ಕಿಡ್ ತಯಾರಿ ನಡೆಸುತ್ತಿದ್ದಾರೆ. ಇವರು ಸಿನಿ ಪಯಣ ಆರಂಭ ಮಾಡುವ ಮುನ್ನವೇ ಸೋಶಿಯಲ್ ಮೀಡೀಯಾದಲ್ಲಿ ಫೇಮಸ್. ಯಾರು ಆ ಸ್ಟಾರ್ ಕಿಡ್ ಗೊತ್ತಾಯ್ತ?
ಕನ್ನಡ ಚಿತ್ರರಂಗದಲ್ಲಿ ಕಳೆದ ಮೂರು ದಶಕಗಳಿಂದ ತಮ್ಮ ಅಭಿನಯದ ಮೂಲಕ ಮಿಂಚುತ್ತಿರುವ ನಟಿ ಶ್ರುತಿ. ಕನ್ನಡಿಗರನ್ನು ಅಳಿಸಿ, ನಗಿಸಿ, ತಮ್ಮ ಆಕ್ಷನ್ ಮೂಲಕ ರಂಜಿಸಿ, ವಿಲನ್ ಪಾತ್ರದ ಮೂಲಕ ಮನರಂಜಿಸಿದ ನಟಿ ಶ್ರುತಿ ಜೊತೆ ಇದೀಗ ಅವರ ಮಗಳು ಸಿನಿಮಾ ರಂಗಕ್ಕೆ ಎಂಟ್ರಿ ಕೊಡಲು ತಯಾರಿ ನಡೆಸಿದ್ದಾರೆ. ಈ ಬಗ್ಗೆ ನಟಿ ಹಾಗೂ ಅವರ ಪುತ್ರಿ ಸಾಕಷ್ಟು ಬಾರಿ ಮೀಡಿಯಾ ಮುಂದೆ ಮಾತನಾಡಿದ್ದು ಆಗಿದೆ.
26
ಗೌರಿ ಶ್ರುತಿ
ಅಮ್ಮ ಶ್ರುತಿಯ ನಟನೆಯನ್ನು ಬಾಲ್ಯದಿಂದಲೇ ನೋಡಿಕೊಂಡು ಬಂದ ಹಾಗೂ ಪೂರ್ತಿಯಾಗಿ ನಟರೇ ತುಂಬಿಕೊಂಡಿರುವ ಕುಟುಂಬದಿಂದ ಬಂದ ಗೌರಿ ಶ್ರುತಿಗೆ ತಾನು ನಟಿಯಾಗಬೇಕೆಂಬ ಮಹದಾಸೆ ಹುಟ್ಟಿಕೊಂಡಿದ್ದು, ಅದಕ್ಕಾಗಿ ಸಕಲ ತಯಾರಿ ನಡೆಸುತ್ತಿದ್ದಾರೆ. ಅದ್ಭುತವಾದ ಹಾಡುಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಗಳಿಸಿರುವ ಗೌರಿ ಸದ್ಯದಲ್ಲಿ ತಮ್ಮ ನಟನಾ ಕೌಶಲ್ಯ ತೋರಿಸಲು ತಯಾರಾಗಿದ್ದಾರೆ.
36
ಫೋಟೊ ಶೂಟ್ ವೈರಲ್
ಇದೀಗ ಗೌರಿ ಶ್ರುತಿ ದಸರಾ ಹಬ್ಬದ ಪ್ರಯುಕ್ತ ಒಂದಷ್ಟು ಫೋಟೊ ಶೂಟ್ ಮಾಡಿ ಶೇರ್ ಮಾಡಿದ್ದು, ತುಂಬಾನೆ ರಾಯಲ್ ಆಗಿ ಬಂದಿದೆ. ಬಿಳಿ ಸೀರೆ, ಟ್ಯೂಬ್ ಬ್ಲೌಸ್ ಧರಿಸಿ, ಕೈಯಲ್ಲಿ ಕಮಲದ ಹೂವು ಹಿಡಿದು. ದೊಡ್ಡದಾದ ಮೂಗುತ್ತಿ, ಕಿವಿಯೋಲೆ, ನೆಕ್ಲೆಸ್ ಧರಿಸಿ, ಸುರ ಲೋಕದ ಅಪ್ಸರೆಯಂತೆ ಕಾಣಿಸುತ್ತಿದ್ದಾರೆ.
ತಮ್ಮ ಫೋಟೊಗಳ ಜೊತೆಗೆ ಗೌರಿ ‘ಪ್ರತಿಯೊಬ್ಬ ಮಹಿಳೆಯೊಳಗೆ ದೇವಿಯ ಆತ್ಮ ಮತ್ತು ಶಕ್ತಿಯ ಅಗ್ನಿ ಹರಿಯುತ್ತದೆ’ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ತಮ್ಮನ್ನು ಸ್ಟೈಲ್ ಮಾಡಿದ್ದು, ಅಮ್ಮ ಶ್ರುತಿ ಕೃಷ್ಣ ಅಂತಾನೂ ಬರೆದುಕೊಂಡಿದ್ದು, ಗೌರಿಯವರ ಈ ರಾಯಲ್ ಲುಕ್ ಗೆ ಮೇಘನಾ ರಾಜ್ ಸರ್ಜಾ, ಅರ್ಚನಾ ಕೊಟ್ಟಿಗೆ ಸೇರಿ ಸಿನಿತಾರೆಯರು ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.
56
ಐಎಎಸ್ ಬಯಕೆಯಿಂದ ನಟಿಯಾಗುವ ಆಸೆವರೆಗೂ
ಶ್ರುತಿ ಬರ್ತ್ ಡೇ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಗೌರಿ ’ನನ್ನ ಮುತ್ತಜ್ಜಿ ಇಂದ ಹಿಡಿದು ಎಲ್ಲರೂ ಇರೋದು ಚಿತ್ರರಂಗದಲ್ಲಿ. ಕಲೆಯಲ್ಲೇ ಜೀವನವನ್ನ ಕಂಡುಕೊಂಡಿರೋರು. ಚಿಕ್ಕವಯಸ್ಸಿನಲ್ಲಿ ನನಗೆ ಗೈನಕಾಲಜಿಸ್ಟ್ ಆಗಬೇಕು, ಐಎಎಸ್ ಮಾಡಬೇಕು, ಡಾಕ್ಟರ್ ಆಗಬೇಕು ಅಂತ ಆಸೆ ಇತ್ತು. ಆದರೆ, ಬರ್ತಾ ಬರ್ತಾ ಮನಸ್ಸು ನಟನೆ ಕಡೆಗೆ ಸೆಳೆಯುತ್ತಿದೆ’ ಎಂದು ಹೇಳಿದ್ದರು.
66
ಮೇಕಪ್ ಕಿಟ್ ಗೆ ಪೂಜೆ
ಗೌರಿ ಆಯುಧ ಪೂಜೆಯ ದಿನ ತಮ್ಮ ಎಲ್ಲಾ ಮೇಕಪ್ ಕಿಟ್ ಹೊರತೆಗೆದು, ಎಲ್ಲಾದಕ್ಕೂ ಪೂಜೆ ಮಾಡಿದ್ದು, ಆ ಫೋಟೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಗೌರಿ ಸಿನಿಮಾ ನಟಿಯಾಗಬೇಕೆಂಬ ಹೆಬ್ಬಯಕೆಗೆ ಇದೇ ಉದಾಹರಣೆ. ಸದ್ಯದಲ್ಲೇ ಹಿರಿತೆರೆಯೆ ಬರಲಿದ್ದಾರೆ ಎಂದು ಶ್ರುತಿ ಕೂಡ ಹೇಳಿದ್ದರು. ಆದರೆ ಯಾವ ಅನ್ನೋದನ್ನು ಕಾದು ನೋಡಬೇಕು.