'ಕೂಲಿ' ಚಿತ್ರದಲ್ಲಿ ಖಳನಾಯಕಿ ಕಲ್ಯಾಣಿ ಪಾತ್ರದ ಮೂಲಕ ಗಮನ ಸೆಳೆದಿರುವ ಡಿಂಪಲ್ ಕ್ವೀನ್ ರಚಿತಾ ರಾಮ್, ಅಕ್ಟೋಬರ್ 3 ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವಿಶೇಷ ದಿನದಂದು, ಅವರು ತಮ್ಮ ರಾಜರಾಜೇಶ್ವರಿ ನಗರದ ನಿವಾಸದಲ್ಲಿ ಅಭಿಮಾನಿಗಳೊಂದಿಗೆ ಸಂಭ್ರಮಿಸಲು ಆಹ್ವಾನ ನೀಡಿದ್ದಾರೆ.
ಸ್ಯಾಂಡಲ್‌ವುಡ್‌ನಲ್ಲಿ ಡಿಂಪಲ್ ಕ್ವೀನ್ (Dimple Queen) ಎಂದೇ ಫೇಮಸ್ ಆಗಿರೋ ನಟಿ ರಚಿತಾ ರಾಮ್ 'ಕೂಲಿ' ಚಿತ್ರದಲ್ಲಿ ಖಡಕ್ ವಿಲನ್ ಪಾತ್ರ ಮಾಡಿ ಎಲ್ಲರ ಹುಬ್ಬೇರಿಸಿದ್ದಾರೆ. ರಜನಿಕಾಂತ್, ಉಪೇಂದ್ರ, ನಾಗಾರ್ಜುನ ಸೇರಿದಂತೆ ಘಟಾನುಘಟಿ ತಾರೆಯರು ಮುಖ್ಯ ಭೂಮಿಕೆಯಲ್ಲಿರುವ ಈ ಸಿನಿಮಾದಲ್ಲಿ ರಚಿತಾ ರಾಮ್, ಕಲ್ಯಾಣಿ ಎಂಬ ಚಾಲಾಕಿ ಪಾತ್ರವನ್ನು ಮಾಡಿ ಭೇಷ್ ಎನ್ನಿಸಿಕೊಂಡಿದ್ದಾರೆ.
26
ಕೂಲಿ ಚಿತ್ರದ ಖುಷಿಯಲ್ಲಿ
'ಕೂಲಿ' (Coolie) ಚಿತ್ರದಲ್ಲಿ ಇವರ ರೋಲ್ ಸಖತ್ ಟ್ವಿಸ್ಟ್ ಮತ್ತು ರೋಚಕ ಟರ್ನ್‌ಗಳಿಂದ ಕೂಡಿದೆ. ಆರಂಭದಲ್ಲಿ ಒಂದು ಪುಟ್ಟ ಪಾತ್ರ ಏನಿಸಿದರೂ, ಎರಡನೆಯ ಭಾಗದಲ್ಲಿ ಇಡೀ ಸಿನಿಮಾದ ಮೇನ್ ವಿಲನ್ ಎಂಬಂತೆ ಕಲ್ಯಾಣಿ ಪಾತ್ರವನ್ನು ರಚಿಸಿದ್ದಾರೆ ನಿರ್ದೇಶಕರು. ರಚಿತಾ ರಾಮ್ ಕೂಡ ಮೊದಲ ಬಾರಿಗೆ ಬೇರೆ ಥರದ ಇಮೇಜ್‌ನಲ್ಲಿ ಕಾಣಿಸಿಕೊಂಡು, ನೋಡುಗರಿಗೆ ಶಾಕ್ ನೀಡಿದ್ದಾರೆ.
36
ನಾಳೆ ಡಿಂಪಲ್ ಕ್ವೀನ್ ಹುಟ್ಟುಹಬ್ಬ
ಇಂತಿಪ್ಪ ಡಿಂಪಲ್ ಕ್ವೀನ್ ನಾಳೆ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. 1992ರ ಅಕ್ಟೋಬರ್ 3ರಂದು ಹುಟ್ಟಿರೋ ನಟಿಗೆ ಈಗ 33 ವರ್ಷ ವಯಸ್ಸು. ಈ ಸಲ ಅಭಿಮಾನಿಗಳ ಜೊತೆ ಹುಟ್ಟುಹಬ್ಬವನ್ನು ಸೆಲೆಬ್ರೇಟ್ ಮಾಡಲು ನಟಿ ಇಷ್ಟಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ, ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅವರು ಅಭಿಮಾನಿಗಳಿಗೆ ಆಹ್ವಾನ ಇತ್ತಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಈ ಕುರಿತು ಬರೆದುಕೊಂಡಿರುವ ನಟಿ, ಎಲ್ಲರಿಗೂ ನಮಸ್ಕಾರ, ನನ್ನ ಬದುಕಿನಲ್ಲಿ ನೀವು ತೋರಿದ ಪ್ರೀತಿ, ಪ್ರೋತ್ಸಾಹ, ಕಾಳಜಿ ಹಾಗೂ ನನ್ನ ಪ್ರತಿಯೊಂದು ಹಂತದಲ್ಲಿ ನನ್ನ ಜೊತೆ ನಿಂತು ಬೆಂಬಲಿಸಿದ ನಿಮ್ಮೆಲ್ಲರಿಗೂ ನಾನು ಸದಾ ಋಣಿಯಾಗಿದ್ದೇನೆ. ಅಭಿಮಾನಿಗಳ ಒತ್ತಾಯ ಹಾಗೂ ನನ್ನ ಕುಟುಂಬದ ಒತ್ತಾಯದ ಮೇರೆಗೆ, ಅಕ್ಟೋಬರ್ 3ರಂದು ನನ್ನ ಮನೆಯ ಬಳಿ ನಿಮ್ಮೆಲ್ಲರೊಂದಿಗೆ ಈ ವಿಶೇಷ ದಿನವನ್ನು ಹಂಚಿಕೊಳ್ಳಲು ನಾನು ಕಾಯುತ್ತಿದ್ದೆನೆ. ಇದು ಕೇವಲ ಹುಟ್ಟುಹಬ್ಬದ ಆಚರಣೆ ಅಲ್ಲ, ಇದು ನಮ್ಮ ಸಂಬಂಧದ ಸಂಭ್ರಮ, ನಿಮ್ಮ ಪ್ರೀತಿಯ ರಚ್ಚು ಎಂದು ಬರೆದುಕೊಂಡಿದ್ದಾರೆ.
56
ನಟಿಯ ಮನೆ ಎಲ್ಲಿದೆ?
ಅಂದಹಾಗೆ ರಚಿತಾ ರಾಮ್ ಅವರ ಮನೆಯು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಇದೆ. ಅಲ್ಲಿ ನಟಿ ಅಭಿಮಾನಿಗಳಿಗಾಗಿ ಕಾಯುತ್ತಿದ್ದಾರೆ. ಈ ಇನ್ವಿಟೇಷನ್ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದು, ಕಮೆಂಟ್ಗಳ ಸುರಿಮಳೆಯೇ ಆಗಿದೆ. ಸೂಕ್ತ ವ್ಯವಸ್ಥೆ ಮಾಡಿಸಿ ಮೇಡಂ ಎಂದು ಕೆಲವರು ನಟಿಗೆ ಮನವಿಯನ್ನೂ ಮಾಡಿಕೊಂಡಿದ್ದಾರೆ.
66
ಆಗಸ್ಟ್ 14ರಂದು ರಿಲೀಸ್
ಲೋಕೇಶ್ ಕನಗರಾಜ್ ನಿರ್ದೇಶನದ, ರಜನಿಕಾಂತ್ ನಟನೆಯ ‘ಕೂಲಿ’ ಸಿನಿಮಾ ಆಗಸ್ಟ್ 14ರಂದು ರಿಲೀಸ್ ಆಯಿತು. ಈ ಚಿತ್ರ ಒಳ್ಳೆಯ ಕಲೆಕ್ಷನ್ ಮಾಡಿದೆ. ರಚಿತಾ ರಾಮ್ ಅವರು ಈ ಸಿನಿಮಾದಲ್ಲಿ ಕಲ್ಯಾಣಿ ಹೆಸರಿನ ಪಾತ್ರ ಮಾಡಿದ್ದಾರೆ. ತಮಿಳು ನಟ ಕಣ್ಣ ರವಿ ಅವರು ಅರ್ಜುನ್ ಸೈಮನ್ ಹೆಸರಿನ ಪಾತ್ರ ಮಾಡಿದ್ದಾರೆ. ಸೈಮನ್ ಮಗ ಅರ್ಜುನ್, ಕಲ್ಯಾಣಿಯನ್ನು ಪ್ರೀತಿಸುತ್ತಾ ಇರುತ್ತಾನೆ. ಆದರೆ, ಕಲ್ಯಾಣಿಯು ಅರ್ಜುನ್ಗೆ ಮೋಸ ಮಾಡುತ್ತಾಳೆ. ಅಷ್ಟೇ ಅಲ್ಲ, ಆತನನ್ನು ಸಾಯಿಸಿಯೂ ಬಿಡುತ್ತಾಳೆ. ಇದು ಈ ಸಿನಿಮಾದ ಸ್ಟೋರಿ.