Rukmini Vasanth: ‘ಈ ಸಿನಿಮಾ ನನ್ನ ಜೀವನವನ್ನೇ ಬದಲಿಸಿದೆ’… ಕಾಂತಾರ ಚಾಪ್ಟರ್ 1 ಕುರಿತು ರುಕ್ಮಿಣಿ ವಸಂತ್ ಭಾವನಾತ್ಮಕ ಪತ್ರ

Published : Oct 03, 2025, 10:11 AM IST

ಕಾಂತಾರಾ ಚಾಪ್ಟರ್ 1 ರಿಲೀಸ್ ಆಗಿದ್ದು, ಈ ವರ್ಷದ ಬ್ಲಾಕ್ ಬಸ್ಟರ್ ಸಿನಿಮಾ ಆಗಿ ಈಗಾಗಲೇ ಹೊರಹೊಮ್ಮಿದೆ. ಸಿನಿಮಾ ಬಗ್ಗೆ ಎಲ್ಲೆಡೆಯಿಂದ ಪಾಸಿಟಿವ್ ರೆಸ್ಪಾನ್ಸ್ ಬರುತ್ತಿದೆ. ಈ ಸಿನಿಮಾದಲ್ಲಿ ರಾಣಿ ಕನಕವತಿ ಪಾತ್ರದಲ್ಲಿ ಮಿಂಚಿದ ನಟಿ ರುಕ್ಮಿಣಿ ವಸಂತ್ ಈ ಕುರಿತು ಭಾವನಾತ್ಮಕ ಪತ್ರ ಬರೆದಿದ್ದಾರೆ.

PREV
17
ಕಾಂತಾರಾ ಚಾಪ್ಟರ್ 1

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಕಾಂತಾರ ಚಾಪ್ಟರ್ 1 ಬಿಡುಗಡೆಯಾಗಿ ಭಾರಿ ಸದ್ದು ಮಾಡುತ್ತಿದೆ. ಕಥೆ, ಚಿತ್ರಕಥೆ, ಅಬ್ಬರಕ್ಕೆ ಸಿನಿರಸಿಕರು ಮನಸೋತಿದ್ದಾರೆ. ಇನ್ನು ಈ ಸಿನಿಮಾದಲ್ಲಿ ರಾಣಿ ಕನಕವತಿಯಾಗಿ ನಟಿಸಿದ್ದು ರುಕ್ಮಿಣಿ ವಸಂತ್ (Rukmini Vasanth). ಸಿನಿಮಾ ಟ್ರೈಲರ್ ರಿಲೀಸ್ ಆದಂದಿನಿಂದ ರುಕ್ಮಿಣಿ ಟ್ರೆಂಡಿಂಗ್ ನಲ್ಲಿದ್ದಾರೆ. ಇದೀಗ ಕಾಂತಾರಾ ಸಿನಿಮಾ ಕುರಿತು ರುಕ್ಮಿಣಿ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

27
ನನ್ನ ಜೀವನವನ್ನೇ ಬದಲಾಯಿಸಿದ ಚಿತ್ರ

ಎಲ್ಲರಿಗೂ ನಮಸ್ಕಾರ. ಒಂದು ವರ್ಷದ ಹಿಂದೆ ಕನ್ನಡದ ಹೆಮ್ಮೆ ಎನಿಸಿರುವ ಕಾಂತಾರ ಚಾಪ್ಟರ್ 1 (Kantara Chapter 1) ತಂಡ ಸೇರುವ ಅವಕಾಶ ನನಗೆ ಸಿಕ್ಕಿತು. ಈ ಚಿತ್ರದಲ್ಲಿ ಕೆಲಸ ಮಾಡುವುದು ಒಂದು ದೊಡ್ಡ ಜವಾಬ್ದಾರಿಯು ಹೌದು, ಸಾಹಸವು ಹೌದು. ಈ ಚಿತ್ರ ನನ್ನ ಜೀವನವನ್ನೇ ಬದಲಾಯಿಸಿದೆ. ನಾನು ತುಂಬಾ ಕಲಿತಿದ್ದೀನಿ ಮತ್ತು ಅದಕ್ಕಾಗಿ ನಾನು ಬಹಳ ಕೃತಜ್ಞಳಾಗಿದ್ದೇನೆ.

37
ನನ್ನನ್ನು ನಂಬಿದ ರಿಷಬ್ ಸರ್ ಗೆ ಥ್ಯಾಂಕ್ಯೂ

ನಮ್ಮ ತಂಡದ ನಾಯಕರು, ನಿರ್ದೇಶಕರು ಆದ ರಿಷಬ್ (Rishab Shetty)ಸರ್ ಅವರಿಗೆ ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಕಠಿಣ ಪರಿಶ್ರಮ ದಯೆ ಮತ್ತು ಛಲ ಈ ಚಿತ್ರವನ್ನು ತುಂಬಾ ವಿಶೇಷವಾಗಿಸಿದೆ. ನನ್ನನ್ನು ನಂಬಿದ್ದಕ್ಕೆ ಮತ್ತು ನಾನು ಬೆಳೆಯಲು ಸಹಾಯ ಮಾಡಿದ್ದಕ್ಕೆ ಧನ್ಯವಾದಗಳು. ಹೊಂಬಾಳೆ ತಂಡ ನನ್ನನ್ನು ನಿಮ್ಮ ಕುಟುಂಬದಲ್ಲಿ ಒಬ್ಬಳನ್ನಾಗಿಸಿಕೊಂಡಿದ್ದೀರಿ. ನಿಮಗೆ ನಾನು ಸದಾ ಚಿರಋಣಿ. ವಿಜಯ ಸರ್, ಚೆಲುವ ಸರ್, ಆದರ್ಶ್ ಮತ್ತು ತೆರೆ ಮರೆಯಲ್ಲಿರುವ ಎಲ್ಲರಿಗೂ ಹಾಗೂ ನಾನು ಭೇಟಿಯಾಗಲು ಸಾಧ್ಯವಾಗದ ತಂಡದ ಇತರರಿಗೂ ತುಂಬಾ ಧನ್ಯವಾದಗಳು.

47
ಪ್ರಗತಿ ಶೆಟ್ಟಿ- ಅರವಿಂದ್’ಗೆ ಧನ್ಯವಾದಗಳು

ನಮ್ಮ ಸೂಪರ್ ಕೂಲ್ ಕ್ಯಾಮೆರಾ ಮ್ಯಾನ್ ಅರವಿಂದ್ ಮತ್ತು ಬೆಸ್ಟ್ ಆಫ್ ದಿ ಬೆಸ್ಟ್ ಕಾಸ್ಟ್ಯೂಮ್ ಡಿಸೈನರ್ ಪ್ರಗತಿ, ನೀವು ನನಗೆ ಸಂಪೂರ್ಣ ಹೊಸ ಲುಕ್ ಕೊಟ್ಟಿದ್ದೀರಿ ಮತ್ತು ನಾನು ಸುಂದರವಾಗಿ ಕಾಣುತ್ತಿದ್ದೇನೆ ಅಂತ ಕಾಂಪ್ಲಿಮೆಂಟ್ಸ್ ಬರ್ತಿದೆ. ಅದಕ್ಕೆ ಪ್ರಮುಖ ಕಾರಣ ನೀವೇ. ನಿಮಗೆ ವಿಶೇಷವಾದ ಧನ್ಯವಾದಗಳು. ಕಾಂತಾರದ ಅತ್ಯದ್ಭುತ ಲೋಕವನ್ನು ಸೃಷ್ಟಿ ಮಾಡಿ, ನನ್ನನ್ನು ಅದರ ಒಂದು ನೈಜ್ಯ ಭಾಗವಾಗಿರುವಂತೆ ನೋಡಿಕೊಂಡ ಕಲಾ ನಿರ್ದೇಶಕರಾದ ಬಾಂಗ್ಲಾನ್ ಅವರಿಗೆ ವಿಶೇಷ ಧನ್ಯವಾದಗಳು.

57
ಗುಲ್ಶನ್ ಮತ್ತು ಜಯರಾಂ ಜೊತೆ ಸ್ಕ್ರೀನ್ ಶೇರ್

ಅಜನೀಶ್ ಸರ್, ನಿಮ್ಮ ಸಂಗೀತಕ್ಕೆ ‘ರೋಮಾಂಚನ’ ಅನ್ನೋದು ಬಿಟ್ಟು ಬೇರೆ ಏನೂ ಹೇಳೋಕೆ ಸಾಧ್ಯ ಇಲ್ಲ. ಥ್ಯಾಂಕ್ಯೂ! ಅನಿ, ಗುರು ಮತ್ತು ನಿರ್ದೇಶನ ತಂಡ ಎಲ್ಲರೂ ನನ್ನ ಡೈಲಾಗ್ಸ್ ಅಲ್ಲಿ ಎಷ್ಟು ಸಹಾಯ ಮಾಡಿದ್ದೀರಾ ಅಂದ್ರೆ ನಿಮಗೆ ಈಗ ಥ್ಯಾಂಕ್ಸ್ ಹೇಳೋಕು ಯಾವ ಪದ ಬಳಸಿ ಹೇಗೆ ಹೇಳಬೇಕು ಅಂತ ನಿಮಗೆ ಕಾಲ್ ಮಾಡೋಣ ಅನಿಸಿದೆ. ನನ್ನ ಹೃದಯವು ನಿಮಗೆ ಧನ್ಯವಾದಗಳಿಂದ ತುಂಬಿದೆ. ನಮ್ಮ ನೃತ್ಯ ಸಂಯೋಜಕರು, ಘೋಷಣ್ ಮಾಸ್ಟರ್ ಗೆ ಹಾಗೂ ನಮ್ಮ ಫೈಟ್ ಮಾಸ್ಟರ್ಸ್ ಆದ ಜೂಜಿ ಮಾಸ್ಟರ್ ಮತ್ತು ಅರ್ಜುನ್ ಮಾಸ್ಟರ್ ಅವರಿಗೆ ತುಂಬಾ ಧನ್ಯವಾದಗಳು. ಗುಲ್ಶನ್ ಸರ್ ಮತ್ತು ಜಯರಾಮ್ ಸರ್ ಜೊತೆ ಸ್ಕ್ರಿನ್ ಶೇರ್ ಮಾಡಿದ್ದು ತುಂಬಾ ಖುಷಿ ಇದೆ.

67
ನನ್ನ ತುಂಟಾಟ-ಹುಚ್ಚಾಟ ಸಹಿಸಿಕೊಂಡದ್ದಕ್ಕೆ ಥ್ಯಾಂಕ್ಯೂ

ಕೆಟರಿಂಗ್ ತಂಡ ನಿಮ್ಮ ಶುಚಿಯಾದ ರುಚಿಯಾದ ಆಹಾರ ಮತ್ತು ನೆವರ್ ಎಮ್ಡಿಂಗ್ ಕಾಫಿ ನಮ್ಮನ್ನು ಮುನ್ನಡೆಸಿತು. ನನ್ನದೇ ಆದ ಪುಟ್ಟ ಮೇಕಪ್ ತಂಡ, ಬಿಸಿಲಿರಲಿ, ಮಳೆ ಇರಲಿ ಸದಾ ನನ್ನನ್ನು ಹೊಳೆಯುವಂತೆ ನೋಡಿಕೊಂಡವರು. ನೀವು ನನ್ನ ಹುಚ್ಚಾಟ ತುಂಟಾಟುಳೆಲ್ಲದರಲ್ಲೂ ನನ್ನ ಜೊತೆಯಾಗಿ ನಿಂತಿದ್ದೀರಿ. ಥ್ಯಾಂಕ್ಯೂ ಎಂದರೆ ಕಮ್ಮಿ ಎನಿಸುತ್ತದೆ.

77
ಕನ್ನಡ ಚಲನಚಿತ್ರ ಅಭಿಮಾನಿಗಳಿಗೆ ಧನ್ಯವಾದಗಳು

ಮತ್ತು ಕೊನೆಯದಾಗಿ ಎಲ್ಲರಿಗೂ ವಿಶೇಷವಾಗಿ ನನ್ನನ್ನು ಹರಸಿ, ಹುರಿದುಂಬಿಸುತ್ತಿರುವ ಎಲ್ಲಾ ಕನ್ನಡ ಚಲನಚಿತ್ರ ಅಭಿಮಾನಿಗಳಿಗೆ ತುಂಬು ಹೃದಯದ ಅನಂತಾನಂತ ಧನ್ಯವಾದಗಳು. ನೀವು ನಾನು ಸಿಕ್ಕಾಗಿಲ್ಲ ಕನ್ನಡ ಫಿಲಂ ಯಾವಾಗ? ಅಂತ ಕೇಳ್ತಾ ಇದ್ರಿ ಇಲ್ಲಿದೆ ಉತ್ತರ. ಅಕ್ಟೋಬರ್ ಎರಡರಂದು ಚಿತ್ರಮಂದಿರದಲ್ಲಿ ನಿಮ್ಮನ್ನು ನೋಡಲು ಕಾಯ್ತಾ ಇರ್ತೀನಿ. ಎಂದು ರುಕ್ಮಿಣಿ ವಸಂತ್ ಬರೆದುಕೊಂಡಿದ್ದಾರೆ.

Read more Photos on
click me!

Recommended Stories