ಎದೆ ಮೇಲೆ 'Love' ಟ್ಯಾಟು ಹಾಕಿಸಿಕೊಂಡ ನಟಿ ಶ್ರದ್ಧಾ ಶ್ರೀನಾಥ್; ಯಾರು ಆ ಲವರ್?

Published : Jul 29, 2024, 11:24 AM IST

ವೈರಲ್ ಆಯ್ತು ನಟಿ ಶ್ರದ್ಧಾ ಶ್ರೀನಾಥ್‌ ವೈಟ್‌ ಔಟ್‌ಫಿಟ್ ಡ್ರೆಸ್‌. ಟ್ಯಾಟೂ ಮೇಲೆ ನೆಟ್ಟಿಗರ ಕಣ್ಣು....

PREV
19
ಎದೆ ಮೇಲೆ 'Love' ಟ್ಯಾಟು ಹಾಕಿಸಿಕೊಂಡ ನಟಿ ಶ್ರದ್ಧಾ ಶ್ರೀನಾಥ್; ಯಾರು ಆ ಲವರ್?

2016ರಲ್ಲಿ ಯು ಟರ್ನ್ ಮತ್ತು ಉರ್ವಿ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಅದ್ಭುತ ನಟಿಯಾಗಿ ಗುರುತಿಸಿಕೊಂಡಿರುವ ಶ್ರದ್ಧಾ ಶ್ರೀನಾಥ್‌ ಈಗ ಬಹುಭಾಷಾ ನಟಿಯಾಗಿದ್ದಾರೆ.

29

 ತಮಿಳು, ತೆಲುಗು ಮತ್ತ ಮಲಯಾಳಂ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಶ್ರದ್ಧಾ ಶ್ರೀನಾಥ್ ಸುಮಾರು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಪಡೆದಿದ್ದಾರೆ.

39

ಇತ್ತೀಚಿಗೆ ಶ್ರದ್ಧಾ ವೈಟ್ ಆಂಡ್ ವೈಟ್ ಔಟ್‌ಫಿಟ್‌ ಧರಿಸಿ ಫೋಟೋಶೂಟ್ ಮಾಡಿಸಿದ್ದರು. ಈ ಫೋಟೋದಲ್ಲಿ ಎದೆಯ ಮೇಲಿರುವ ಟ್ಯಾಟೂ ಹೈಲೈಟ್ ಆಗಿದೆ.

49

ಬಣ್ಣದ ಪ್ರಪಂಚಕ್ಕೆ ಕಾಲಿಡುವ ಮುನ್ನ ಮ್ಯೂಸಿಕ್ ಬ್ಯಾಂಡ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದ ಶ್ರದ್ಧಾ ಶ್ರೀನಾಥ್ ಸಾಕಷ್ಟು ಹಾಡುಗಳನ್ನು ಹಾಡುತ್ತಿದ್ದರಂತೆ.

59

 'ಈ ಟ್ಯಾಟೂ ಹಾಕಿಸಿಕೊಂಡು ಹಲವು ವರ್ಷಗಳೇ ಆದವು. ನಾನು ಸಿನಿಮಾ ಜಗತ್ತಿಗೂ ಬರುವ ಮುನ್ನದಿನಗಳವು. ಆಗ ನಾನೊಂದು 'ದಿ ಬೀಟಲ್ಸ್' ಹೆಸರಿನ ಮ್ಯೂಸಿಕ್ ಬ್ಯಾಂಡ್‌ನಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದೆ'

69

'ಸಂಗೀತ ನನ್ನ ಆಸಕ್ತಿಯ ಕ್ಷೇತ್ರ. ಹಾಗಾಗಿ ಬೀಟಲ್ಸ್ ಮ್ಯೂಸಿಕ್ ಬ್ಯಾಂಡ್ ಆಯೋಜಿಸುತ್ತಿದ್ದ ಸ್ಟೇಜ್ ಶೋಗಳಲ್ಲಿ ಆಗಾಗ ಹಾಡುವುದು ನನ್ನ ಅಭ್ಯಾಸ'

79

 'ಹಾಗೆ ಹಾಡಿದ ಕಾರಣಕ್ಕೆ ಮೊಟ್ಟ ಮೊದಲ ಬಾರಿಗೆ ದಿ ಬೀಟಲ್ಸ್ ಮ್ಯೂಸಿಕ್ ಟೀಮ್ ವತಿಯಿಂದ ನನಗೆ ಎರಡು ಸಾವಿರ ರೂಪಾಯಿ ಚೆಕ್ ಕೊಟ್ಟರು. ನನಗೆ ಆಗ ಟ್ಯಾಟೂ ಹುಚ್ಚು.

89

'ಮೊದಲ ಸಂಭಾವನೆ ಎನ್ನುವುದು ನನ್ನೊಳಗೆ ಸದಾ ಕಾಲ ಇರಬೇಕು ಅಂತಲೇ ಯೋಚಿಸುತ್ತಾ ಟ್ಯಾಟೋ ಹಾಕಿಸಿಕೊಳ್ಳಲು ಮುಂದಾದೆ. ಅದು ಸರಿ, ಅದು ಯಾವ ರೀತಿಯಲ್ಲಿರಬೇಕು ಎನ್ನುವುದು ನನಗೆ ಎದುರಾದ ಪ್ರಶ್ನೆ'

99

 'ಆಗ ನನಗೆ ಹೊಳೆದಿದ್ದು ಮ್ಯೂಜಿಕ್ ಮೇಲಿನ ಪ್ರೀತಿ ಮತ್ತು ಆಸಕ್ತಿ. ಆ ಟೀಮ್ ನೆನಪು ಸದಾ ಇರಬೇಕು, ಸಂಗೀತದ ಮೇಲಿನ ಪ್ರೀತಿಯೂ ಉಳಿಯಬೇಕು ಅಂತ ಯೋಚಿಸಿ,ಟ್ಯಾಟೂ ಹಾಕುವವನಿಗೆ ಹೇಳಿದಾಗ ಆತನ ಕುಂಚದಲ್ಲಿ ಅರಳಿದ್ದೇ ಈ ಚಿತ್ರ.' ಎಂದು ಹಲವು ವರ್ಷಗಳ ಹಿಂದಿನ ಸಂದರ್ಶನದಲ್ಲೂ ಹೇಳಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories