B Saroja Devi's Husband: ಮಗಳ ಜೊತೆ ಹನಿಮೂನ್‌ಗೆ ಹೋಗ್ತೀನಿ ಎಂದು ಹಠ ಮಾಡಿ ಹೋಗಿದ್ದ ಬಿ ಸರೋಜಾದೇವಿ ತಾಯಿ!

Published : Jul 14, 2025, 01:40 PM ISTUpdated : Jul 14, 2025, 02:19 PM IST

ಕನ್ನಡದ ಅಂದಿನ ಸೂಪರ್‌ ಸ್ಟಾರ್‌ಗಳ ಜೊತೆ ಹೀರೋಯಿನ್‌ ಆಗಿ ಮೆರೆದಿದ್ದ ನಟಿ ಸರೋಜಾದೇವಿ ಅವರು 84ನೇ ವರ್ಷಕ್ಕೆ ನಿಧನರಾಗಿದ್ದಾರೆ. ಸೂಪರ್‌ ಸ್ಟಾರ್‌ ಆಗಿ ಮೆರೆದಿದ್ದ ಪದ್ಮಭೂಷಣ, ಪದ್ಮಶ್ರೀ ಸರೋಜಾದೇವಿ ಅವರು ಹನಿಮೂನ್‌ಗೆ ತಾಯಿ ಕರೆದುಕೊಂಡು ಬಂದಿದ್ದರಂತೆ. 

PREV
17

“ನಾನು ಸಿನಿಮಾ ಮಾಡ್ತಿದ್ದೆ, ಹೆಸರು ಬಂತು. ಆದರೆ ಮದುವೆ ಆಗಬೇಕು ಅಂತ ತಾಯಿ ಹೇಳಿದ್ದರು. ತಾಯಿ ಹೇಳಿದಹಾಗೆ ನಾನು ಕೇಳಬೇಕಿತ್ತು. ನನ್ನ ಡ್ರೆಸ್‌, ಸ್ಟೈಲ್‌ ಎಲ್ಲವೂ ತಾಯಿ ಹೇಳಿದಹಾಗೆ ಕೇಳಬೇಕಿತ್ತು. “ನಾನು ಲವ್‌ ಮಾಡಬಾರದು, ಗೌಡ್ರ ಜಾತಿಯಲ್ಲಿ ಮದುವೆ ಆಗಬೇಕು ಅಂತ ಹೇಳಿದ್ದರು. ನಮ್ಮ ಅಕ್ಕ-ಬಾವ, ತಾಯಿ ಗಡಿ ದಾಟಿ ಲವ್‌ ಮಾಡೋದು ಸಾಧ್ಯವೇ ಇರಲಿಲ್ಲ” ಎಂದು ಬಿ ಸರೋಜಾದೇವಿ ಹೇಳಿದ್ದರು.

27

ಸರೋಜಾದೇವಿ ಅವರು ಸೂಪರ್‌ ಸ್ಟಾರ್‌ ಆಗಿದ್ದ ಟೈಮ್‌ನಲ್ಲೇ, ಇನ್ನೂ ಮಾಡೋ ಸಿನಿಮಾಗಳು ಲೈನ್‌ನಲ್ಲಿ ಇದ್ದರೂ ಕೂಡ ನಾನು ಮದುವೆಯಾಗಿದ್ದರು.

37

ಶ್ರೀಹರ್ಷ ಅವರು ಜರ್ಮನಿಯಲ್ಲಿ ಮೆಕ್ಯಾನಿಕಲ್‌ ಇಂಜಿನಿಯರಿಂಗ್‌ ಆಗಿ ಕೆಲಸ ಮಾಡುತ್ತಿದ್ದರು. “ನೀವು ಸ್ಟಾರ್‌, ನನ್ನ ಮದುವೆ ಆಗೋದು ಓಕೆನಾ? ಮನಸ್ಸಾಕ್ಷಿ ವಿರೋಧ ನಡೆದುಕೊಳ್ಳಬೇಡ” ಎಂದು ಹರ್ಷ ಹೇಳಿದ್ದರು. ನನ್ನ ತಾಯಿ ಓಕೆ ಹೇಳು ಅಂತ ಸನ್ನೆ ಮಾಡಿ ಹೇಳಿದಳು. ನಾನು ಓಕೆ ಅಂದೆ. ಮನೆಯಲ್ಲಿ ನಿಶ್ಚಿತಾರ್ಥ ಆಯ್ತು, ಬೆಂಗಳೂರಿನಲ್ಲಿ ನಡೆಯದೆ ಇರೋವಷ್ಟು ಅದ್ದೂರಿಯಾಗಿ ಮದುವೆ ಆಯ್ತು.

47

ಮದುವೆಯಲ್ಲಿ ಅಂತರಪಟ ತೆರೆದಾಗ ನಾನೇ ಅವರ ತಲೆ ಮೇಲೆ ಅಕ್ಕಿ, ಜೀರಿಗೆ ಹಾಕಿದೆ. ಯಾರು ಮೊದಲು ಅಕ್ಕಿ ಹಾಕ್ತಾರೋ ಅವರ ಮಾತು ನಡೆಯುತ್ತದೆ. ಹರ್ಷನ ಫ್ರೆಂಡ್ಸ್‌ ಎಲ್ಲರೂ ನೀನು ಹಾಕಬೇಕಿತ್ತು ಕಣೋ ಅಂದ್ರು. ಆಗ ಹರ್ಷ ಮಾತ್ರ ಪರವಾಗಿಲ್ಲ ಎಂದರು.

57

ಇನ್ನೇನು ಸರೋಜಾದೇವಿ, ಹರ್ಷ ಅವರನ್ನು ಹನಿಮೂನ್‌ಗೆ ಕಳಿಸಬೇಕು ಅಂದಾಗ ಅವರ ತಾಯಿ ನಾನು ಕೂಡ ಬರ್ತೀನಿ, ಮೂರು ಟಿಕೆಟ್‌ ಮಾಡಿ ಅಂತ ಹೇಳಿದ್ದರಂತೆ. “ನನ್ನ ಮಗಳು ಯಾವ ಸೀರೆ ಧರಿಸಬೇಕು ಅಂತ ನಾನೇ ಹೇಳಬೇಕು, ನಾನೇ ಕಾಫಿ ತಿಂಡಿ ಕಳಿಸಬೇಕು ಎಂದು ಹೇಳಿದ್ದರು. ಅದರಂತೆ ನಾವು ಮೂವರು ಹನಿಮೂನ್‌ಗೆ ಹೋದೆವು. ಒಂದು ರೂಮ್‌ನಲ್ಲಿ ನಾನು, ಹರ್ಷ, ಇನ್ನೊಂದು ರೂಮ್‌ನಲ್ಲಿ ನನ್ನ ತಾಯಿ ಇದ್ದರು” ಎಂದು ಹೇಳಿದ್ದರು.

67

ಹೃದಯಾಘಾತದಿಂದ ಪತಿ ನಿಧನರಾದಾಗ ಸರೋಜಾದೇವಿ ಅವರು ಸಿಕ್ಕಾಪಟ್ಟೆ ಅತ್ತಿದ್ದರಂತೆ, ಅತ್ತು ಅತ್ತು ಕಣ್ಣು ಸಣ್ಣ ಆಗಿತ್ತು. ಪತಿ ನಿಧನದ ಬಳಿಕ ವಿಧವೆ ಎಂದು ಸರೋಜಾದೇವಿ ಅವರಿಗೆ ಸಿಕ್ಕಾಪಟ್ಟೆ ಅವಮಾನ ಮಾಡಿದ್ದರು. ಸರೋಜಾದೇವಿಗೆ ಇಂದಿರಾ, ಗೌತಮ್‌ ರಾಮಚಂದ್ರ ಎಂಬ ಮಕ್ಕಳಿದ್ದಾರೆ.

77

ಬಿ ಸರೋಜಾದೇವಿ ಅವರ ಅಂತ್ಯಕ್ರಿಯೆಯು ಜುಲೈ 15ರಂದು ಬೆಂಗಳೂರಿನ ಕೊಡಿಗೆಳ್ಳಿಯಲ್ಲಿ ಪತಿ ಹರ್ಷ ಅವರ ಸಮಾಧಿ ಪಕ್ಕ ನಡೆಯಲಿದೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories