ಬೋಲ್ಡ್ ಫೋಟೊ ಶೂಟ್ ಮೂಲಕ ಮತ್ತೆ ಇಂಟರ್ನೆಟ್ ಬಿಸಿ ಹೆಚ್ಚಿಸಿದ ಸಂಗೀತಾ ಭಟ್

Published : Mar 20, 2024, 05:34 PM IST

ಕಳೆದ ಕೆಲ ಸಮಯದಿಂದ ಸೋಶಿಯಲ್ ಮೀಡಿಯಾದಲ್ಲಿ ಬೋಲ್ಡ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಸುದ್ದಿಯಾಗಿದ್ದ ನಟಿ ಸಂಗೀತಾ ಭಟ್ ಇದೀಗ ಮತ್ತೆ ತಮ್ಮ ಫೋಟೋಗಳ ಮೂಲಕ ಇಂಟರ್ನೆಟ್‌ಗೆ  ಕಿಚ್ಚು ಹೆಚ್ಚಿಸಿದ್ದಾರೆ.   

PREV
17
ಬೋಲ್ಡ್ ಫೋಟೊ ಶೂಟ್ ಮೂಲಕ ಮತ್ತೆ ಇಂಟರ್ನೆಟ್ ಬಿಸಿ ಹೆಚ್ಚಿಸಿದ ಸಂಗೀತಾ ಭಟ್

ಕನ್ನಡ ಚಿತ್ರರಂಗ ಮತ್ತು ಕನ್ನಡ ಕಿರುತೆರೆಯ ಚಿರಪರಿಚಿತ ಹೆಸರು ಸಂಗೀತಾ ಭಟ್ (Sangeetha Bhat). ತಮ್ಮ ನ್ಯಾಚುರಲ್ ಅಭಿನಯದ ಮೂಲಕ ಜನಪ್ರಿಯತೆ ಪಡೆದ ಈ ನಟಿ ಇದೀಗ ಫೋಟೋ ಶೂಟ್ ಮೂಲಕ ಸುದ್ದಿಯಾಗುತ್ತಿದ್ದಾರೆ. 
 

27

ಸೋಶಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ಸಂಗೀತಾ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಬೋಲ್ಡ್ ಫೋಟೋ (Bold photo) ಗಳನ್ನು ಹಾಕುವ ಮೂಲಕ ಸುದ್ದಿಯಾಗಿದ್ದರು, ಇದೀಗ ಮತ್ತೆ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಳ್ಳುವ ಮೂಲಕ ಕಿಚ್ಚು ಹಚ್ಚಿದ್ದಾರೆ. 
 

37

ಕೆಂಪು ಬಣ್ಣದ ಸ್ಯಾಟಿನ್ ಬ್ರೇಸರ್ ಜೊತೆಗೆ ಮ್ಯಾಚ್ ಆಗುವ ಕಪ್ಪು ಬಣ್ಣದ ಲಾಂಗ್ ಸ್ಕರ್ಟ್ಧರಿಸಿರುವ ಸಂಗೀತಾ ಭಟ್, ನಿರಾಭರಣ ಸುಂದರಿಯಾಗಿ ಗಲ್ಲದ ಮೇಲೆ ಮೂರು ಕಪ್ಪು ಚುಕ್ಕೆ ಇಟ್ಟು ಪೋಸ್ ನೀಡಿದ್ದು, ಅವರ ಲುಕ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
 

47

ಬ್ಲ್ಯಾಕ್ ಆಂಡ್ ವೈಟ್ (black and white) ಮತ್ತು ಕಲರ್ ಫೋಟೋಗಳೆರನ್ನೂ ಹಂಚಿಕೊಂಡಿರುವ ಸಂಗೀತಾ ಭಟ್ ಬೋಲ್ಡ್ ಅವತಾರಕ್ಕೆ ಫ್ಯಾನ್ಸ್ ಉಫ್ ಉಫ್ ಎಂದು ಹೇಳುತ್ತಿದ್ದಾರೆ, ಬೆಂಕಿಯ ಇಮೋಜಿಗಳನ್ನು ಕಾಮೆಂಟ್ ಮಾಡಿದ್ದು, ತುಂಬಾನೆ ಹಾಟ್ ಮತ್ತು ಸೆಕ್ಸಿಯಾಗಿ ಕಾಣಿಸುತ್ತಿದ್ದೀರಿ ಎಂದು ಕಾಮೆಂಟ್ ಮಾಡಿದ್ದಾರೆ. 
 

57

ಕನ್ನಡದ ಜೊತೆಗೆ ತಮಿಳು, ಮಲಯಾಳಂ ಸಿನಿಮಾಗಳಲ್ಲೂ ನಟಿಸಿರುವ ಸಂಗೀತಾ, ಕನ್ನಡದಲ್ಲಿ ಎರಡನೇ ಸಲ, ಪ್ರೀತಿ ಗೀತಿ ಇತ್ಯಾದಿ, ಮಾಮು ಟೀ ಅಂಗಡಿ, ದಯವಿಟ್ಟು ಗಮನಿಸಿ ಸಿನಿಮಾಗಳ ಮೂಲಕ ಜನಮನ ಗೆದ್ದಿದ್ದರು. 
 

67

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಸೀರಿಯಲ್ ತಾಂಡವ್ ಪಾತ್ರಧಾರಿ ಸುದರ್ಶನ್ ರಂಗಪ್ರಸಾದ್ (Sudarshan Rangaprasad) ಅವರ ಪತ್ನಿಯಾಗಿರುವ ಸಂಗೀತಾ ಭಟ್, ಪ್ರೇಮಿಗಳ ದಿನದಂದು ತಮ್ಮ ಲವ್ ಸ್ಟೋರಿ, ಮ್ಯಾರೇಜ್ ಸ್ಟೋರಿ ಬಗ್ಗೆ ಹೇಳುವ ಮೂಲಕ ಸುದ್ದಿಯಲ್ಲಿದ್ದರು. 
 

77

ಸಂಗೀತಾ ಭಟ್ ಅವರು ಈ ಹಿಂದೆ ಬಿಳಿ ಲಂಗ ಬ್ಲೌಸ್ ಹಾಕಿ, ಕೈಯಲ್ಲಿ ಬೀಡಿ ಹಿಡಿದ ಫೋಟೋಗಳು, ಜೊತೆಗೆ ಸೆರಗು ಜಾರಿಸಿ, ಬೋಲ್ಡ್ ಆಗಿ ಪೋಸ್ ನೀಡಿದ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಇದೀಗ ಹೊಸ ಫೋಟೋಗಳ ಮೂಲಕ ಮತ್ತೆ ಕಿಚ್ಚು ಹಚ್ಚುತ್ತಿದ್ದಾರೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories