ನಟ, ನಿರ್ದೇಶಕ, ನಿರ್ಮಾಪಕ ಹಾಗೂ ಕೊಡಗಿನ ಕುವರ ಜೈ ಜಗದೀಶ್ ಮತ್ತು ನಟಿ ಹಾಗೂ ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ 'ರಾಣಿ ಮಹಾರಾಣಿ' ಸಿನಿಮಾ ಸಮಯದಲ್ಲಿ ಮದುವೆಯಾದರು. ಈ ಜೋಡಿ ಲವ್ ಸ್ಟೋರಿ ಸಖತ್ ಕ್ಯೂರಿಯಾಸಿಟಿ ಹುಟ್ಟಿಸಿತ್ತು.
210
ನಾಯಕಿಯಾದ ಮೇಲೆ ವಿಜಯಲಕ್ಷ್ಮಿ ಲವ್ ಸ್ಟೋರಿ ಒಂದು ರೀತಿ ಇದೆ. ಅದಕ್ಕೂ ಮುನ್ನ ಮುನ್ನಿಯಾಗಿ ಪರಿಚಯವಾಗಿದ್ದ ವಿಜಯಲಕ್ಷ್ಮಿ ಮತ್ತೊಂದು ಸ್ಟೋರಿ ಹೇಳಿದ್ದಾರೆ.
310
ನಾನು 7ನೇ ಕ್ಲಾಸ್‌ನಲ್ಲಿದ್ದೆ ಜಗದೀಶ್ ಅವರು ಪಿಯುಸಿ ಓದುತ್ತಿದ್ದರು. ಮೈಸೂರಿನ ವುಡ್‌ಲ್ಯಾಂಡ್ ಥಿಯೇಟರ್‌ನಲ್ಲಿ ಸಿನಿಮಾ ನೋಡಲು ಹೋಗಿದ್ದೆ. ಜಗದೀಶ್ ಸ್ನೇಹಿತರ ಜೊತೆ ಬಂದಿದ್ದರು ನಾನು ನನ್ನ ಸ್ನೇಹಿತೆ ಜೊತೆ ಹೋಗಿದ್ದೆ...intervalನಲ್ಲಿ ಪಾಪ್ ಕಾರ್ನ್ ಮತ್ತು ಟಾಫಿ ತಂದು ನನ್ನ ಸ್ನೇಹಿತೆಗೆ ಕೊಟ್ಟರು ನಾನು ಬೇಡ ಅಂತ ತಿರುಗಿ ನೋಡಲಿಲ್ಲ ಆಕೆ ಇರಲಿ ಬಿಡಿ ಕೊಟ್ಟಿದ್ದಾರೆ ಅಂತ ಸುಮ್ಮನಾದೆವು.
410
ಅದಾದ ಮೇಲೆ ಸಿನಿಮಾ ಮುಗಿಯುತ್ತಿದ್ದಂತೆ ಜಗದೀಶ್ ನಮ್ಮನ್ನು ಫಾಲೋ ಮಾಡಲು ಶುರು ಮಾಡಿದರು. ಇವರಿಂದ ತಪ್ಪಿಸಿಕೊಳ್ಳಲು ಓಡಿದಾಗ ಜೀಪ್ ಅಡ್ಡ ಬಂದಿತ್ತು ತಕ್ಷಣ ಜಗದೀಶ್ ಕೈ ಹಿಡಿದು ಬೇಬಿ ಸ್ಟಾಪ್ ಮಾಡು ಅಂದ್ರು. ಆ ಕಾಲದಲ್ಲಿ ಬೇಬಿ ಅನ್ನೋದು ಲವರ್ಸ್ ಹೆಚ್ಚಿಗೆ ಬಳಸುತ್ತಿದ್ದರು.
510
ಅಲ್ಲಿಂದ ಎಕ್ಸೇಪ್ ಆಗಿ ಐಸ್ ಕ್ರೀಂ ತಿನ್ನಲು ಹೋಗಿದ್ದಾಗ ಅಲ್ಲಿಗೂ ಬಂದ್ದರು. ಬಿಲ್ ಕೊಡಲು ಹೋದಾಗ ಆ ಹುಡುಗರು ಕೊಟ್ರು ಅಂತ ಹೇಳಿದರು ಈಗ ನಾವು ಥ್ಯಾಂಕ್ಸ್ ಹೇಳುವ ಪರಿಸ್ಥಿತಿ ಬಂತು. ಮರದ ಬಳಿ ನಿಂತಿದ್ದರು ಅಲ್ಲಿ ಹೋಗಿ ಹೇಳಿದೆ...ಆಗ ಜಗದೀಶ್ ನಿಮ್ಮ ಮನೆಯಲ್ಲಿ ಎಲ್ಲಿದೆ ಎಂದು ಕೇಳಿದರು.
610
ನಾನು ಏನೂ ಹೇಳಲಿಲ್ಲ. ಅವರ ಸ್ನೇಹಿತರಿಗೆ ಹೇಳಿ ಫಾಲೋ ಮಾಡಿಸಿದರು. ಸರಸ್ವತಿ ಪುರಂ ಮೊದಲ ಹಂತದಲ್ಲಿ ಮನೆ ಇತ್ತು ಮನೆ ಗೊತ್ತಾಗಬಾರದು ಎಂದು 9ನೇ ಹಂತದಲ್ಲಿ ಇಳಿದುಕೊಂಡೆ. ಅದು ನಮ್ಮ ಮೊದಲ ಭೇಟಿ. ಸಂಗ್ರಾಮ್ ಮತ್ತು ಜಗದೀಶ್ ಸ್ನೇಹಿತರು.
710
ನಾನು ಸಂಗ್ರಾಮ ತಂಗಿ ಎಂದು ಗೊತ್ತಾಗುತ್ತಿದ್ದಂತೆ ಇದೆಲ್ಲಾ ಬಿಟ್ಟರು ಎಂದು ವಿಜಯ್ ಲಕ್ಷ್ಮಿ ಸಿಂಗ್ ಜೀ ಕನ್ನಡ ವೀಕೆಂಡ್ ವಿತ್ ರಮೇಶ್‌ನಲ್ಲಿ ಮಾತನಾಡಿದ್ದರು.
810
ಸಿನಿಮಾ ಅವಕಾಶಗಳು ಹೆಚ್ಚಿಗೆ ಬರುತ್ತಿದ್ದ ಕಾರಣ ಬೆಂಗಳೂರಿಗೆ ಹೋಗುವುದಾಗಿ ಹೇಳಿದರು. ಬೇಸರ ಆಗಿದ್ದು ನಿಜ ಆದರೆ ಸುಮ್ಮನೆ ಆದೆ. ಕೆಲವು ದಿನಗಳ ನಂತರ ವಿಚಾರ ಕಿವಿ ಬಿತ್ತು ಜಗದೀಶ್ ಮದುವೆ ಆಗಿದ್ದಾರೆ ಎಂದು. ರೂಪಾ ಅನ್ನೋ ಸುಂದರವಾಗಿರುವ ಹುಡುಗಿಯರನ್ನು ಜಗದೀಶ್ ಮದುವೆಯಾಗಿದ್ದಾರೆ ಅಂತ ಅಂಬರೀಶ್ ಬಂದು ಹೇಳಿದರು.
910
ಹನಿಮೂನ್‌ಗೆ ಹೋಗುವಾಗ ಮೈಸೂರಿಗೆ ಬಂದು ನಮ್ಮ ಮನೆಯಲ್ಲಿ ಊಟ ಮಾಡಿದ್ದರು ..ಅವರ ಲೈಫ್ ನಡೆಯುತ್ತಿತ್ತು. ಅದಾದ ಮೇಲೆ ನಾನು ಇಂಡಸ್ಟ್ರಿಗೆ ಬಂದೆ ನಾವೆಲ್ಲ ವುಡ್‌ಲ್ಯಾಂಡ್ ಹೋಟೆಲ್‌ನಲ್ಲಿ ಉಳಿದುಕೊಂಡಿದ್ವಿ. ಮದ್ವೆ ಆದ್ಮೇಲೆ ಯಾಕೆ ಜಗದೀಶ್ ಹೋಟೆಲ್‌ನಲ್ಲಿ ಉಳಿದುಕೊಳ್ಳುತ್ತಿದ್ದರು ಯಾಕೆ ಎಂದು ತಿಳಿದುಕೊಂಡಾಗ ಫ್ಯಾಮಿಲಿಯಿಂದ ದೂರ ಉಳಿದುಬಿಟ್ಟಿದ್ದಾರೆ ಎಂದು ತಿಳಿಯಿತ್ತು.
1010
ಬಂಧನ ಸಿನಿಮಾ ಮೂಲಕ ನಮ್ಮಿಬ್ಬರ ಬಂಧನ ಶುರುವಾಯ್ತು. 8 ವರ್ಷಗಳ ಕಾಲ ನಡೆಯಿತ್ತು ಅವರ ಡಿವೋರ್ಸ್ ಎಲ್ಲಾ ಅವರಿಗೆ ಅರ್ಪಿತಾ ಅನ್ನೋ ಮಗಳು ಇದ್ದಾಳೆ ನನ್ನ ಜೊತೆ ಚೆನ್ನಾಗಿದ್ದಾಳೆ. ರಾಣಿ ಮಾಹರಾಣಿ ಸಿನಿಮಾ ಸಮಯದಲ್ಲಿ ನಾವು ಮದುವೆ ಮಾಡಿಕೊಂಡೆವು ಈಗ 33 ವರ್ಷಗಳ ದಾಂಪತ್ಯ ಜೀವನ ಎಂದು ವಿಜಯ್ ಲಕ್ಷ್ಮಿ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.