ಝೈದ್‌ ಖಾನ್‌ ಕಲ್ಟ್‌ ಸಿನಿಮಾದಲ್ಲಿ ಉಪಾಧ್ಯಕ್ಷ ನಾಯಕಿ ಮಲೈಕಾ ವಸುಪಾಲ್‌: ರಚಿತಾ ರಾಮ್ ಇದ್ರೂ ಇವರ್ಯಾಕೆ ಗೊತ್ತಾ?

First Published | Sep 5, 2024, 5:59 PM IST

ಕಿರುತೆರೆ ನಟಿ ಮಲೈಕಾ ವಸುಪಾಲ್ ‘ಉಪಾಧ್ಯಕ್ಷ’ ಸಿನಿಮಾ ಮೂಲಕ ಜನರ ಮನ ಗೆದ್ದ ಮೇಲೆ ಹೊಸ ಸಿನಿಮಾಗಳ ಆಫರ್‌ಗಳು ಅರಸಿ ಬರುತ್ತಿವೆ. ‘ಬನಾರಸ್’ ಹೀರೋ ಝೈದ್ ಖಾನ್ ನಟನೆಯ ಹೊಸ ಚಿತ್ರಕ್ಕೆ ಮಲೈಕಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

‘ಉಪಾಧ್ಯಕ್ಷ’ ಸಿನಿಮಾದ ನಾಯಕಿ ಮಲೈಕಾ ವಸುಪಾಲ್‌ ಇದೀಗ ಝೈದ್‌ ಖಾನ್‌ ನಟನೆಯ ‘ಕಲ್ಟ್‌’ ಸಿನಿಮಾ ಟೀಮ್‌ ಸೇರಿಕೊಂಡಿದ್ದಾರೆ. ಅನಿಲ್‌ ಕುಮಾರ್‌ ನಿರ್ದೇಶನದ ಈ ಸಿನಿಮಾದಲ್ಲಿ ಎರಡು ಶೇಡ್‌ ಇರುವ ಪಾತ್ರದಲ್ಲಿ ಮಲೈಕಾ ನಟಿಸಿದ್ದಾರೆ.
 

ಕಲ್ಟ್‌ ಸಿನಿಮಾದ ನಾಯಕಿಯಾಗಿ ರಚಿತಾ ರಾಮ್‌ ಹೆಸರು ಈಗಾಗಲೇ ಘೋಷಣೆಯಾಗಿದ್ದು, ಮತ್ತೊಬ್ಬ ನಾಯಕಿಯಾಗಿ ಮಲೈಕಾ ವಸುಪಾಲ್‌ ನಟಿಸುತ್ತಿದ್ದಾರೆ. 
 

Tap to resize

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಲೈಕಾ, ಈ ಸಿನಿಮಾದಲ್ಲಿ ನನ್ನ ಪಾತ್ರಕ್ಕೆ ಎರಡು ಶೇಡ್‌ ಇದೆ. ಅದರಲ್ಲಿ ಒಂದು ಸಾಂಪ್ರದಾಯಿಕ ಲುಕ್‌. ಅದಕ್ಕಾಗಿ ಭರತನಾಟ್ಯ, ಕಥಕ್‌ ನೃತ್ಯಗಳ ಎಕ್ಸ್‌ಪ್ರೆಶನ್‌ಗಳನ್ನು ಪ್ರಾಕ್ಟೀಸ್‌ ಮಾಡುತ್ತಿದ್ದೇನೆ. 

ಉಳಿದಂತೆ ನನ್ನ ಫಿಟ್‌ನೆಸ್‌ ಚೆನ್ನಾಗಿಯೇ ಇರುವ ಕಾರಣ ತೂಕ ಕಡಿಮೆ ಅಥವಾ ಹೆಚ್ಚು ಮಾಡುವ ಅವಶ್ಯಕತೆ ಇಲ್ಲ ಎಂದು ನಿರ್ದೇಶಕರೇ ಹೇಳಿದ್ದಾರೆ. 

ಅನಿಲ್‌ ಸರ್‌ ನಿರ್ದೇಶನದ ಉಪಾಧ್ಯಕ್ಷ ಸಿನಿಮಾದಲ್ಲಿ ನಾನು ನಟಿಸಿರುವ ಕಾರಣ ಅವರಿಗೆ ನನ್ನ ನಟನೆಯ ಶಕ್ತಿಯ ಬಗ್ಗೆ ಗೊತ್ತಿತ್ತು. ನನ್ನ ಸ್ಕಿಲ್‌ ಗುರುತಿಸುವ ಜೊತೆಗೆ ನಟನೆಯಲ್ಲಿ ಸ್ವಾತಂತ್ರ್ಯವನ್ನೂ ಕೊಟ್ಟಿದ್ದರು. 

ಅವರ ಜೊತೆಗೆ ಮತ್ತೆ ಕೆಲಸ ಮಾಡಲು ಖುಷಿ ಇದೆ. ಸೆಪ್ಟೆಂಬರ್, ಅಕ್ಟೋಬರ್‌ನಲ್ಲಿ ನನ್ನ ಭಾಗದ ಶೂಟಿಂಗ್‌ ನಡೆಯಲಿದೆ ಎಂದಿದ್ದಾರೆ. ರಚಿತಾ ರಾಮ್‌ ಅವರಂಥಾ ಕಲಾವಿದೆಯ ಜೊತೆಗೆ ತೆರೆ ಹಂಚಿಕೊಳ್ಳಲು ಖುಷಿ ಇದೆ. ಅವರು ಇಂಡಸ್ಟ್ರಿಯಲ್ಲಿ ಸಾಕಷ್ಟು ಜನಪ್ರಿಯರಾಗಿರುವ ನಟಿ. 
 

ಈಗಷ್ಟೇ ಅಂಬೆಗಾಲಿಡುತ್ತಿರುವ ನನ್ನಂಥವರಿಗೆ ಅವರ ಜೊತೆ ನಟಿಸಲು ಅವಕಾಶ ಸಿಕ್ಕರೆ ಅದಕ್ಕಿಂತ ಖುಷಿ ಸಂಗತಿ ಇಲ್ಲ. ನಾನು ಕೇಳಿರುವ ಕಥೆಗಳಲ್ಲೇ ಈ ಸಿನಿಮಾ ಕಥೆ ವಿಭಿನ್ನ, ಇಂಟರೆಸ್ಟಿಂಗ್‌ ಆಗಿದೆ’ ಎಂದೂ ಮಲೈಕಾ ಹೇಳಿದ್ದಾರೆ. ಲೋಕಿ ಸಿನಿಮಾ ಲಾಂಛನದಲ್ಲಿ ‘ಕಲ್ಟ್‌’ ಸಿನಿಮಾ ನಿರ್ಮಾಣವಾಗುತ್ತಿದೆ.

Latest Videos

click me!