ಸೀರೆಯುಟ್ಟ ಬಂಗಾರದ ಗೊಂಬೆ.. ದೃಷ್ಟಿ ತೆಗೆಸಿಕೊಳ್ಳಿ: ರಾಧಿಕಾ ಪಂಡಿತ್‌ ಬ್ಯೂಟಿಗೆ ಮನಸೋತ ನೆಟ್ಟಿಗರು!

First Published | Apr 8, 2024, 10:37 AM IST

ಚಂದನವನದ ಬ್ಯೂಟಿಫುಲ್ ನಟಿ ರಾಧಿಕಾ ಪಂಡಿತ್ ಬಣ್ಣದ ಲೋಕದಿಂದ ದೂರ ಉಳಿದಿದ್ರೂ ಹೊಸ ಫೋಟೋಶೂಟ್‌ನಲ್ಲಿ ಬಂಗಾರದ ಗೊಂಬೆಯಂತೆ ಮಿಂಚಿದ್ದಾರೆ. 
 

ಸ್ಯಾಂಡಲ್‌ವುಡ್‌ ಸಿಂಡ್ರೆಲಾ ಆಗಿರುವ ಯಶ್ ಪತ್ನಿಯ ನಯಾ ಲುಕ್ ನೋಡಿ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಸದ್ಯ ರಾಧಿಕಾ ಹೊಸ ಫೋಟೋಶೂಟ್ ಸದ್ಯ ಭಾರೀ ಸದ್ದು ಮಾಡುತ್ತಿದೆ. 

ಗಂಧದ ಬಣ್ಣದ ರೇಷ್ಮೆ ಸೀರೆಯುಟ್ಟ ನಟಿ ರಾಧಿಕಾ ಪಂಡಿತ್​, ಹೆವಿ ಜ್ಯುವೆಲ್ಲರಿ ಧರಿಸಿದ್ದು, ಚೆಂದದ ನಗುವಿನೊಂದಿಗೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಫೋಟೋಗಳನ್ನು ನಟಿ ತಮ್ಮ ಇನ್ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿದ್ದಾರೆ.

Tap to resize

ರಾಧಿಕಾ ಪಂಡಿತ್ ಫೋಟೋಗಳನ್ನು ಪೋಸ್ಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಲೈಕ್​ಗಳ ಸುರಿಮಳೆಯಾಗಿದೆ. ಚಂದನವದ ಸಿಂಡ್ರೆಲಾ ಎಂದು ಕೆಲವರು ಕಮೆಂಟ್​ ಮಾಡಿದ್ದಾರೆ ಇನ್ನು ಕೆಲವರು ಸೀರೆಯುಟ್ಟ ಗೊಂಬೆ ನೀನು ದೃಷ್ಟಿ ತೆಗೆಸಿಕೊಳ್ಳಿ ಎಂದು ಕಮೆಂಟ್ ಮಾಡ್ತಿದ್ದಾರೆ.

‘ಮೊಗ್ಗಿನ ಮನಸ್ಸು’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ನಟಿ ಕಡೆಯದಾಗಿ ‘ಆದಿಲಕ್ಷ್ಮಿ ಪುರಾಣ’ ಸಿನಿಮಾದಲ್ಲಿ ನಟಿಸಿದ್ದರು. ಯಶ್ ಜೊತೆ ದಾಂಪತ್ಯ ಬದುಕಿನಲ್ಲಿ ನಟಿ ಖುಷಿಯಾಗಿದ್ದಾರೆ. 

ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಫೋಟೋಶೂಟ್‌ನಲ್ಲಿ ರಾಧಿಕಾ ಸಖತ್ ಫಿಟ್ ಆಗಿರೋದನ್ನು ನೋಡಿ, ಮತ್ತೆ ಸ್ಯಾಂಡಲ್‌ವುಡ್‌ಗೆ ಬರಲು ತಯಾರಿ ಮಾಡಿಕೊಳ್ತಿದ್ದಾರಾ ಎಂಬ ಮಾತುಗಳು ಕೇಳಿ ಬರುತ್ತಿದೆ.

ಯಶ್​ ಹಾಗೂ ರಾಧಿಕಾ ಪಂಡಿತ್‌ಗೆ ಅಪಾರ ಅಭಿಮಾನಿಗಳಿದ್ದಾರೆ. ಯಶ್​ ಸಿನಿಮಾ ಕೆಲಸದಲ್ಲಿ ಬ್ಯುಸಿ ಆಗಿದ್ದು, ರಾಧಿಕಾ ಮಕ್ಕಳ ಲಾಲನೆ-ಪಾಲನೆಯಲ್ಲಿ ಬ್ಯುಸಿ ಆಗಿದ್ದಾರೆ.

Latest Videos

click me!