ನಟಿ ರಚಿತಾ ರಾಮ್ ದಕ್ಷಿಣ ಕನ್ನಡದ ಬೆಂಜನಪದವು ಕೊರಗಜ್ಜ ದೈವ ಸನ್ನಿಧಿಯಲ್ಲಿ ಕುಟುಂಬದೊಂದಿಗೆ ಕೋಲ ಸೇವೆ ನೆರವೇರಿಸಿದ್ದಾರೆ. ‘ಸ್ವಾಮಿ ಕೊರಗಜ್ಜ ಕಾಪುಲೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
‘ಕಾಂತಾರ’ ಸಿನಿಮಾ ಬಂದಮೇಲೆ ಅವಿಭಜಿತ ದಕ್ಷಿಣ ಕನ್ನಡದ ಹೊರಗಿನ ಮಂದಿಗೂ ಭೂತಕೋಲ, ದೈವಾರಾಧನೆ ಬಗ್ಗೆ ವಿಶ್ವಾಸ ಹೆಚ್ಚಾಗಿದೆ. ಸಿನಿಮಾ ತಾರೆಯರೂ ದೈವಸ್ಥಾನಕ್ಕೆ ಭೇಟಿ ನೀಡುವುದು, ಕೋಲ ಸೇವೆ ನೀಡುವುದು ಸಾಮಾನ್ಯವಾಗುತ್ತಿದೆ.
24
ಕೋಲ ಸೇವೆ
ಇದಕ್ಕೆ ಪೂರಕವಾಗಿ ಇದೀಗ ನಟಿ ರಚಿತಾ ರಾಮ್ ತುಳುನಾಡಿದ ಪ್ರಸಿದ್ಧ ಕೊರಗಜ್ಜ ದೈವಕ್ಕೆ ಕೋಲ ಸೇವೆ ನೆರವೇರಿಸಿದ್ದಾರೆ. ದ.ಕ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಬೆಂಜನಪದವಿನ ಕೊರಗಜ್ಜ ಸನ್ನಿಧಿಯಲ್ಲಿ ರಚಿತಾ ರಾಮ್ ತನ್ನ ಕುಟುಂಬಸ್ಥರೊಂದಿಗೆ ಪಾಲ್ಗೊಂಡು ಕೋಲ ನೆರವೇರಿಸಿದ್ದಾರೆ.
34
ಪೋಸ್ಟ್ ವೈರಲ್
ಕೊರಗಜ್ಜ ದೈವಕ್ಕೆ ಕೋಲ ಸೇವೆ ನೀಡುತ್ತಿರುವ ವೀಡಿಯೋವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ‘ಸ್ವಾಮಿ ಕೊರಗಜ್ಜ ಕಾಪುಲೆ’ (ಸ್ವಾಮಿ ಕೊರಗಜ್ಜ, ನಮ್ಮನ್ನು ರಕ್ಷಿಸಿರಿ) ಎಂದು ಭಕ್ತಿಪೂರ್ವಕ ನೋಟ್ ಹಾಕಿದ್ದಾರೆ.
ಇತ್ತೀಚೆಗಷ್ಟೇ ಸಿನಿಮಾರಂಗದಲ್ಲಿ 14 ವರ್ಷ ಪೂರೈಸಿದ ರಚಿತಾ ಸದ್ಯ ಸತೀಶ್ ನೀನಾಸಂ ಜೊತೆಗೆ ‘ಅಯೋಗ್ಯ 2’ ಹಾಗೂ ಧ್ರುವ ಸರ್ಜಾ ಜೊತೆಗೆ ‘ಕ್ರಿಮಿನಲ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.