ನಟ ದರ್ಶನ್ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ನಿರಾಕರಣೆ ಮಾಡಿದೆ. ಪರಿಣಾಮ ಇನ್ನೊಂದು ವರ್ಷ ಜೈಲಿನಿಂದ ಅಲುಗಾಡುವಂತಿಲ್ಲ. ಇದೀಗ ಪತ್ನಿ ವಿಜಯಲಕ್ಷ್ಮಿ ತೀವ್ರವಾಗಿ ನೊಂದಿದ್ದಾರೆ. ಭಾವುಕ ಪೋಸ್ಟ್ ಮಾಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಆರೋಪಿ ನಟ ದರ್ಶನ್ ಜಾಮೀನಿಗಾಗಿ ಶತಪ್ರಯತ್ನ ಮಾಡಿ ಕೊನೆಗೆ ನಿರಾಸೆ ಅನುಭವಿಸಿದ್ದಾರೆ. ನಟ ದರ್ಶನ್ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ಇದೀಗ ಒಂದು ವರ್ಷಗಳ ಕಾಲ ದರ್ಶನ್‌ಗೆ ಜೈಲೆ ಗತಿಯಾಗಿದೆ. ಬೇಲ್ ನಿರಾಕರಣೆ ಬಳಿಕ ಪತ್ನಿ ವಿಜಯಲಕ್ಷ್ಮಿ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಜಾಮೀನು ನಿರಾಕರಣೆಯಿಂದ ವಿಜಯಲಕ್ಷಿ ತೀವ್ರ ನೊಂದಿದ್ದಾರೆ.
26
ಭಾವುಕ ಪೋಸ್ಟ್ ಹಾಕಿ ವಿಜಯಲಕ್ಷ್ಮಿ ಕಣ್ಣೀರು
ದರ್ಶನ್ ನೆನಪಿನಲ್ಲಿ ಕೊರಗುತ್ತಿರುವ ಪತ್ನಿ ವಿಜಯಲಕ್ಷ್ಮಿ ಸೋಶಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್ ಹಾಕಿದ್ದಾರೆ. ನಟ ದರ್ಶನ್ ಫೋಟೋ ಹಾಕಿ ಹಾರ್ಟ್ ಬ್ರೇಕ್ ಇಮೋಜಿ ಹಾಕಿ ಕಣ್ಣೀರಿಟ್ಟಿದ್ದಾರೆ. ಪತಿಯ ಬಿಡುಗಡೆಗಾಗಿ ಪತ್ನಿ ವಿಜಯಲಕ್ಷ್ಮಿ ತೀವ್ರ ಹೋರಾಟ ನಡೆಸಿದ್ದರು. ಆದರೆ ಈ ಹೋರಾಟಗಳಿಗೆ ಫಲ ಸಿಗಲಿಲ್ಲ.
36
ನೋವು ತೋಡಿಕೊಂಡ ವಿಜಯಲಕ್ಷ್ಮಿ
ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಜಯಲಕ್ಷ್ಮಿ ನೋವು ತೋಡಿಕೊಂಡಿದ್ದಾರೆ. ಪತಿ ದರ್ಶನ್ ಬಿಡುಗಡೆ ಭಾಗ್ಯ ಸಿಗದೆ ಮತ್ತೆ ಒಂದು ವರ್ಷ ಜೈಲಿನಲ್ಲಿ ಇರಬೇಕಾಗಿದೆ. ಇದು ವಿಜಯಲಕ್ಷ್ಮಿ ಹೋರಾಟಕ್ಕೆ ತೀವ್ರ ಹಿನ್ನಡೆ ನೀಡಿದೆ. ಇದರಿಂದ ಕುಗ್ಗಿರುವ ವಿಜಯಲಕ್ಷ್ಮಿ ಸೋಶಿಯಲ್ ಮೀಡಿಯಾ ಮೂಲಕ ನೋವು ತೋಡಿಕೊಂಡಿದ್ದಾರೆ.
ದರ್ಶನ್ ಬಿಡುಗಡೆಗಾಗಿ ಪತ್ನಿ ವಿಜಯಲಕ್ಷ್ಮಿ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಒಂದೆಡೆ ವಕೀಲರ ಜೊತೆ ಚರ್ಚಿಸಿ ಕಾನೂನು ಹೋರಾಟ ತೀವ್ರಗೊಳಿಸಿದ್ದರೆ, ಇತ್ತ ದೇವಸ್ಥಾನ ದರ್ಶನ ಮಾಡಿ ಪತಿ ಬಿಡುಗಡೆಗೆ ಪ್ರಾರ್ಥಿಸಿದ್ದರು. ಆದರೂ ಸುಪ್ರೀಂ ಕೋರ್ಟ್ ಬೇಲ್ ನಿರಾಕರಿಸಿರುವುದು ಪತ್ನಿ ವಿಜಯಲಕ್ಷ್ಮಿಗೆ ತೀವ್ರ ಹಿನ್ನಡೆ ನೀಡಿದೆ.
56
ಜೈಲಿನಲ್ಲಿ ಯಾರೊಂದಿಗೆ ಮಾತನಾಡದ ದರ್ಶನ್
ಬೇಲ್ ನಿರಾಕರಣೆ ಬಳಿ ನಟ ದರ್ಶನ್ ಯಾರ ಬಳಿ ಮಾತನಾಡದೇ ಜೈಲಿನಲ್ಲಿ ಮೌನಿಯಾಗಿದ್ದಾರೆ. ಕ್ಯಾರಂಟೈನ್ ಜೈಲಿನ ಬ್ಯಾರಕ್ ನಲ್ಲಿ ಏಕಾಂಗಿಯಾಗಿ ಕುಳಿತು ದಿನ ದೂಡುತ್ತಿದ್ದಾರೆ. ಇತ್ತ ದರ್ಶನ್ ಕೂಡ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಬಿಡುಗಡೆ ನಿರೀಕ್ಷಿಸಿದ್ದ ದರ್ಶನ್‌ಗೆ ತೀವ್ರ ಬೇಸರ ತರಿಸಿದೆ.
66
ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್
ಜೈಲಿನಲ್ಲಿ ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್ ಜೈಲು ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ಜೈಲು ವೈದ್ಯರ ತಂಡ ದರ್ಶನ್ ಆರೋಗ್ಯದ ಮೇಲೆ ನಿಗಾ ಇಟ್ಟಿದೆ. ಅತ್ತ ಜೈಲು ಊಟ ಸೇರುತ್ತಿಲ್ಲ. ಇತ್ತ ಮಾನಸಿಕವಾಗಿ, ದೈಹಿಕವಾಗಿಯೂ ಕುಗ್ಗಿ ಹೋಗಿರುವ ದರ್ಶನ್ ಬೇರೆ ದಾರಿಯಿಲ್ಲದೆ ಜೈಲಿನಲ್ಲಿ ಕಳೆಯುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.