PHOTOS: ವಿವಾಹ ವಾರ್ಷಿಕೋತ್ಸವದಂದು ಪತಿ ಚಿರಂಜೀವಿ ಸರ್ಜಾ ಕನಸು ಈಡೇರಿಸಿದ ನಟಿ ಮೇಘನಾ ರಾಜ್‌ ಸರ್ಜಾ!

Published : May 02, 2026, 05:25 PM IST

Actress Meghana Raj Sarja: ನಟಿ ಮೇಘನಾ ಸರ್ಜಾಗೆ ಇಂದು ವಿವಾಹ ವಾರ್ಷಿಕೋತ್ಸವದ ಸಂಭ್ರಮ. ಇಂದು ಅವರು ಪತಿ ಚಿರಂಜೀವಿ ಸರ್ಜಾರನ್ನು ನೆನೆದು, ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಭಾವುಕರಾಗಿ ಬರೆದುಕೊಂಡಿದ್ದಾರೆ.  

PREV
17
ನಾವಿಬ್ಬರೂ ಒಂದೇ

ಈ ವಾರ್ಷಿಕೋತ್ಸವ ಕೇವಲ ಒಂದು ದಿನಾಂಕವಲ್ಲ ಚಿರು... ಇದೊಂದು ಭಾವನೆ. ನಿನ್ನ ಕನಸುಗಳು ಮತ್ತು ನನ್ನ ಕನಸುಗಳು ಇನ್ನು ಮುಂದೆ ಬೇರೆ ಬೇರೆಯಲ್ಲ—ನಾವಿಬ್ಬರೂ ಒಂದೇ ಎಂದು ನಾವು ನಿರ್ಧರಿಸಿದ ದಿನವಿದು ಎಂದು ಅವರು ಹೇಳಿದ್ದಾರೆ.

27
ಪದಗಳಲ್ಲಿ ವಿವರಿಸಲಾಗದ ರೀತಿಯಲ್ಲಿ ನೀನು ನಾನಾಗುತ್ತಿದ್ದೀಯಾ

ನಾನು ಇಡುವ ಪ್ರತಿ ಹೆಜ್ಜೆಯಲ್ಲೂ ನಿನ್ನ ಇರುವಿಕೆಯನ್ನು ಅನುಭವಿಸುತ್ತಿದ್ದೇನೆ... ನೀನು ದೇವರಿಗೆ ಹತ್ತಿರವಾಗಿದ್ದರೂ, ನನಗಿಂತಲೂ ಹೆಚ್ಚು ಹತ್ತಿರವಿದ್ದೀಯಾ—ನನ್ನ ಮೂಲಕವೇ ಬದುಕುತ್ತಿದ್ದೀಯಾ, ಪದಗಳಲ್ಲಿ ವಿವರಿಸಲಾಗದ ರೀತಿಯಲ್ಲಿ ನೀನು ನಾನಾಗುತ್ತಿದ್ದೀಯಾ ಎಂದು ಮೇಘನಾ ಹೇಳಿದ್ದಾರೆ.

37
ರಜನಿಕಾಂತ್ ಭೇಟಿ ಆಯ್ತು

ನೀನು ಅವರನ್ನು ಆರಾಧಿಸುತ್ತಿದ್ದೆ! ಭಾರತೀಯ ಚಿತ್ರರಂಗದ ಆ ಮಹಾನ್ ದೇವನನ್ನು ನಾನು ಕನಸಿನಲ್ಲೂ ಯೋಚಿಸದ ರೀತಿಯಲ್ಲಿ ನೀನು ನನಗೆ ಭೇಟಿ ಮಾಡಿಸಿದೆ! ಅದು ಕೂಡ ಒಬ್ಬರೇ ಒಬ್ಬರಾದ, ರಜಿನಿ ಸರ್ ಜೊತೆಗಿನ ಸಿನಿಮಾ ಮೂಲಕ! ನಾವು ಸಾಧಿಸಿ ತೋರಿಸಿದೆವು! ಎಂದು ಅವರು ಹೇಳಿದ್ದಾರೆ.

47
ಈ ಸಿನಿಮಾ ನಿನಗೆ ಸೇರಿದ್ದು

ಇಂದು, ನಾವು ಜೊತೆಯಾಗಿ ಕಂಡ ಕನಸಿಗೆ ನಾನು ಜೀವ ತುಂಬಿದ್ದೇನೆ ಎಂದು ನಂಬಿದ್ದೇನೆ. ಯಾಕೆಂದರೆ ಈ ಯಶಸ್ಸು, ಈ ಮೈಲಿಗಲ್ಲು, ಈ ಸಿನಿಮಾ... ಸಂಪೂರ್ಣವಾಗಿ ನಿನಗೆ ಸೇರಿದ್ದು ಎಂದು ಮೇಘನಾ ಸರ್ಜಾ ಹೇಳಿದ್ದಾರೆ.

57
ಜೈಲರ್‌ 2 ಸಿನಿಮಾದಲ್ಲಿ ಮೇಘನಾ ರಾಜ್

ಮೇಘನಾ ರಾಜ್‌ ಅವರು ಜೈಲರ್‌ 2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಬಗ್ಗೆ ಅವರು ವಿಶೇಷವಾದ ಮಾಹಿತಿ ಹಂಚಿಕೊಂಡಿಲ್ಲ. 

67
ಮಗ ರಾಯನ್‌ ಕೂಡ ಭೇಟಿ

ಮೇಘನಾ ರಾಜ್‌ ಸರ್ಜಾ ಅವರ ಮಗ ರಾಯನ್‌ ಕೂಡ ರಜನಿಕಾಂತ್‌ ಅವರನ್ನು ಭೇಟಿ ಆಗಿದ್ದಾರೆ. 

77
ತಂದೆ ಕೂಡ ಇದ್ದರು!

ಮೇಘನಾ ರಾಜ್‌ ಸರ್ಜಾ ಅವರ ತಂದೆ ಕೂಡ ರಜನಿಕಾಂತ್‌ ಅವರನ್ನು ಭೇಟಿ ಆಗಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories