Dhananjaya Baby: ತಂದೆ ಆಸೆ ಈಡೇರಿತು; ಸಿಂಹದ ಮರಿಯಂಥ ಮಗು ಪಡೆದ ಡಾಲಿ ಧನಂಜಯ; ಧನ್ಯತಾ ಈಗ ತಾಯಿ!

Published : May 02, 2026, 08:46 AM IST

Actor Dhananjaya: ನಟ ಡಾಲಿ ಧನಂಜಯ ಅವರು ತಂದೆ ಆಗಿದ್ದಾರೆ, ಬೆಳ್ಳಂಬೆಳಿಗ್ಗೆ ಅವರು ಈ ಸಿಹಿ ಸುದ್ದಿಯನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಧನ್ಯತಾ ಈಗ ತಾಯ್ತನದ ಖುಷಿಯಲ್ಲಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

PREV
15
ಬೇಬಿ ಬಂಪ್‌ ಫೋಟೋಶೂಟ್‌

ಕೆಲವು ತಿಂಗಳುಗಳ ಹಿಂದೆ ನಾವು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ನಟ ಡಾಲಿ ಧನಂಜಯ ಅವರು ಹೇಳಿದ್ದರು. ಅಷ್ಟೇ ಅಲ್ಲದೆ ಪತ್ನಿ ಧನ್ಯತಾ ಜೊತೆಗೆ ಅವರು ಬೇಬಿ ಬಂಪ್‌ ಫೋಟೋಶೂಟ್‌ ಮಾಡಿಸಿಕೊಂಡಿದ್ದರು.

25
ಗೈನಕಾಲಜಿಸ್ಟ್‌ ಆಗಿರೋ ಧನ್ಯತಾ

2025 ಫೆಬ್ರವರಿ 16ರಂದು ಧನಂಜಯ ಹಾಗೂ ಧನ್ಯತಾ ಅವರು ಮದುವೆಯಾಗಿದ್ದರು. ಧನ್ಯತಾ ಅವರು ಗೈನಕಾಲಜಿಸ್ಟ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಅವರು ಸಾಕಷ್ಟು ಗರ್ಭಿಣಿಯರ ಹೆರಿಗೆ ಮಾಡಿಸಿದ್ದಾರೆ.

35
ಗ್ರ್ಯಾಂಡ್‌ ಆಗಿ ಮದುವೆ

ವರ್ಷಗಳಿಂದ ಇವರಿಬ್ಬರು ಪ್ರೀತಿ ಮಾಡುತ್ತಿದ್ದರು, ಆ ಬಳಿಕ ಕುಟುಂಬದ ಒಪ್ಪಿಗೆ ಮೇರೆಗೆ ಗ್ರ್ಯಾಂಡ್‌ ಆಗಿ ಮದುವೆ ಆಗಿದ್ದಾರೆ. ಮೈಸೂರಿನಲ್ಲಿ ಈ ಜೋಡಿ ಮದುವೆ ಆಗಿತ್ತು. ಧನ್ಯತಾ ಅವರು ಚಿತ್ರದುರ್ಗದವರು.

45
ಅಂದೇ ಡಾಲಿ ಅಪ್ಪ ಹೇಳಿದ್ರು

ಮದುವೆಯಾಗುವ ಟೈಮ್‌ನಲ್ಲಿ ಧನಂಜಯ ಅವರು ಬ್ಯಾಚುಲರ್‌ ಲೈಫ್‌ಗೆ ಗುಡ್‌ಬೈ ಎಂದು ವಿಡಿಯೋ ಮಾಡಿದ್ದರು. ಈ ಆಲ್ಬಮ್‌ನಲ್ಲಿ ಸಿಂಹದ ಮರಿಯಂತ ಮೊಮ್ಮಗು ಬೇಕು ಎಂದು ಅಪ್ಪ ಸವಾಲು ಹಾಕಿದ ಸಾಲು ಕೂಡ ಇತ್ತು. ಇದೀಗ ನಿಜವಾಗಿದೆ.

55
ಗಂಡು ಮಗುವಿನ ಪಾಲಕರು

ಧನಂಜಯ ಹಾಗೂ ಧನ್ಯತಾ ಅವರು ಗಂಡು ಮಗುವಿನ ಪಾಲಕರಾಗಿ ಬಡ್ತಿ ಪಡೆದಿದ್ದಾರೆ. ತಾಯಿ, ಮಗು ಇಬ್ಬರೂ ಆರೋಗ್ಯದಿಂದ ಇದ್ದಾರೆ. ಅಂದಹಾಗೆ ಅವರ ಅಭಿಮಾನಿಗಳು ಈ ಜೋಡಿಗೆ ಶುಭ ಹಾರೈಸುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories