ಶಾರ್ಟ್ ಡ್ರೆಸ್ಸಲ್ಲಿ ಗ್ಲಾಮರಸ್ ಆಗಿ ಮಿಂಚಿದ ಬರ್ತ್ ಡೇ ಗರ್ಲ್ ಅಮೃತಾ ಪ್ರೇಮ್

Published : Jan 23, 2024, 05:35 PM IST

ಟಗರು ಪಲ್ಯ ಮೂಲಕ ಸ್ಯಾಂಡಲ್ ವುಡ್ ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಅಮೃತಾ ಪ್ರೇಮ್ ಇಂದು ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದು, ಸೋಶಿಯಲ್ ಮೀಡಿಯಾದಲ್ಲಿ ಗ್ಲಾಮರಸ್ ಫೋಟೋನೂ ಹಂಚಿಕೊಂಡಿದ್ದಾರೆ.   

PREV
18
ಶಾರ್ಟ್ ಡ್ರೆಸ್ಸಲ್ಲಿ ಗ್ಲಾಮರಸ್ ಆಗಿ ಮಿಂಚಿದ ಬರ್ತ್ ಡೇ ಗರ್ಲ್ ಅಮೃತಾ ಪ್ರೇಮ್

ಸ್ಯಾಂಡಲ್ ವುಡ್ ನ ಖ್ಯಾತ ನಟ ನೆನಪಿರಲಿ ಪ್ರೇಮ್ (Nenapirali Prem) ಪುತ್ರಿ ಅಮೃತಾ ಪ್ರೇಮ್ ಈಗಾಗಲೇ ತಮ್ಮ ಮೊದಲ ಚಿತ್ರ ಟಗರು ಪಲ್ಯ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟು ಪ್ರೇಕ್ಷಕರ ಮನ ಗೆದ್ದಿದ್ದಾರೆ. 
 

28

ಅಭಿಮಾನಿಗಳ ಪ್ರೀತಿಯ ಅಮ್ಮು ಅಮೃತಾ ಪ್ರೇಮ್ (Amrutha Prem) ಇಂದು ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದು, ಅಭಿಮಾನಿಗಳೆಲ್ಲಾ ಸೋಶಿಯಲ್ ಮೀಡಿಯಾ ತುಂಬಾ ಅಮೃತಾಗೆ ಹುಟ್ಟು ಹಬ್ಬದ ಶುಭ ಕೋರಿದ್ದಾರೆ. 
 

38

ಟಗರು ಪಲ್ಯ (Tagaru Palya) ಸಿನಿಮಾದಲ್ಲಿ ಪಕ್ಕಾ ಗ್ರಾಮೀಣ ಪ್ರತಿಭೆಯಾಗಿ ಮಿಂಚಿದ್ದ ಅಮೃತಾ ಇದೀಗ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. 
 

48

ಹೌದು, ಅಮೃತಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ (Social Media) ಸಖತ್ ಗ್ಲಾಮರಸ್ ಆಗಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಬ್ಲ್ಯಾಕ್ ಶಾರ್ಟ್ ಡ್ರೆಸಲ್ಲಿ ನಟಿ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. 
 

58

ತಮ್ಮ ಸೋಶಿಯಲ್ ಮೀಡಿಯಾದಲ್ಲೂ ಹೆಚ್ಚಾಗಿ ಸಿಂಪಲ್ ಆಗಿ ಕಾಣಿಸಿಕೊಳ್ಳುವ ಈ ಚೆಲುವೆ, ಇಂದು ಬರ್ತ್ ಡೇ ದಿನಾನೇ ವಿಶೇಷವಾಗಿ ಫೋಟೋಶೂಟ್ (Photoshoot) ಮಾಡಿಸಿಕೊಂಡಿದ್ದು, ಗ್ಲಾಮರಸ್ ಲುಕ್ ಕೂಡ ಅಮೃತಾಗೆ ಸಖತ್ತಾಗಿ ಕಾಣಿಸ್ತಿದೆ ಅಂತಿದ್ದಾರೆ ಅಭಿಮಾನಿಗಳು. 
 

68

ಮಾಹಿತಿ ಪ್ರಕಾರ ಅಮೃತಾ ಸದ್ಯ ಯಾವುದೇ ಹೊಸ ಚಿತ್ರಕ್ಕೆ ಸಹಿ ಹಾಕಿಲ್ಲ. ವಿಶೇಷ ಕತೆ ಹೊಂದಿರುವ ಸಿನಿಮಾಗಳಿಗಾಗಿ ಕಾಯ್ತಾ ಇದ್ದಾರೆ. ಸದ್ಯಕ್ಕಂತೂ ಟಗರು ಪಲ್ಯ ಸಿನಿಮಾದ ಸಕ್ಸಸ್ ಸಂಭ್ರಮದಲ್ಲಿದ್ದಾರೆ. 
 

78

ಇನ್ನು ಪ್ರೇಮ್ ಮಕ್ಕಳು ಇಬ್ಬರೂ ಸಹ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಪ್ರೇಮ್ ಪುತ್ರಿ ಟಗರು ಪಲ್ಯ ಸಿನಿಮಾ ಮೂಲಕ ಲಾಂಚ್ ಆದರೆ ಪುತ್ರ ಏಕಾಂತ್ 'ಗುರು ಶಿಷ್ಯರು' ಸಿನಿಮಾ ಮೂಲಕ ಲಾಂಚ್ ಆಗಿದ್ದು, ಇಬ್ಬರನ್ನೂ ಜನ ಮೆಚ್ಚಿಕೊಂಡಿದ್ದಾರೆ. 
 

88

ಸಿಂಪಲ್ ಸ್ಟಾರ್ ಪ್ರೇಮ್ ಅವರಂತೆ ಮಗಳು ಅಮೃತಾ ಸಹ ಕನ್ನಡ ಚಿತ್ರರಂಗದಲ್ಲಿ ಒಳ್ಳೊಳ್ಳೆ ಸಿನಿಮಾಗಳನ್ನು ನೀಡುವ ಭರವಸೆ ನೀಡಿದ್ದಾರೆ. ಚಂದನವನದ ಈ ಚೆಲುವೆಗೆ ನಮ್ ಕಡೆಯಿಂದಲೂ ಹ್ಯಾಪಿ ಬರ್ತ್ ಡೇ. 
 

Read more Photos on
click me!

Recommended Stories