ಧ್ರುವ ಸರ್ಜಾ ಮಕ್ಕಳ ನಾಮಕರಣ, ಮೊದಲ ಬಾರಿಗೆ ಮಗನ ಫೋಟೋ ರಿವಿಲ್!

Published : Jan 22, 2024, 10:15 PM IST

ಅಂಜನೇಯನ ಪರಮ ಭಕ್ತನಾಗಿರುವ ಧ್ರುವ ಸರ್ಜಾ ಮಕ್ಕಳಿಗೆ ಏನು ಹೆಸರಿಡಬಹುದು ಎಂಬ ಕುತೂಹಲ ಎಲ್ಲರಿಗೂ ಇತ್ತು. ಆದರೆ ಈ ಕುತೂಹಲಕ್ಕೆ ತೆರೆ ಬಿದ್ದಿದೆ. ಇದರ ಜೊತೆಗೆ ಮೊದಲ ಬಾರಿಗೆ ಧ್ರುವ ಮಗನ ಫೋಟೋ ರಿವೀಲ್ ಆಗಿದೆ.

PREV
16
ಧ್ರುವ ಸರ್ಜಾ ಮಕ್ಕಳ ನಾಮಕರಣ, ಮೊದಲ ಬಾರಿಗೆ ಮಗನ ಫೋಟೋ ರಿವಿಲ್!

ಅಯೋಧ್ಯೆಯಲ್ಲಿ ರಾಮಲಲ್ಲನಾ ಪ್ರತಿಷ್ಠಾಪನೆ ದಿನವೇ ಮಕ್ಕಳಿಗೆ ದೇವರ ಹೆಸರನ್ನು ಇಟ್ಟಿದ್ದಾರೆ. ಇವೆರಡೂ ಕೂಡ ಶಿವನಿಗೆ ಪ್ರಿಯವಾಗಿದ್ದೇ ಆಗಿದೆ.

26

ಆಕ್ಷನ್ ಪ್ರಿನ್ಸ್ ಇಬ್ಬರು ಮಕ್ಕಳಿಗೂ ಒಂದೇ ದಿನ ನಾಮಕರಣ ಮಾಡಿದ್ದು, ಮಗಳಿಗೆ ರುದ್ರಾಕ್ಷಿ ಮತ್ತು ಮಗನಿಗೆ ಹಯಗ್ರಿವ ಎಂಬ ಹೆಸರಿಟ್ಟಿದ್ದಾರೆ.

36

ಶಿವನಿಗೆ ಬಹಳ ಪ್ರಿಯವಾದುದು ರುದ್ರಾಕ್ಷಿ, ಮಹಿರಾವಣನನ್ನ ಸಂಹಾರ ಮಾಡುವ ಸಲುವಾಗಿ ವಾಯುಪುತ್ರ ಹನುಮಂತನು ಪಂಚಮುಖಿ ಆಂಜನೇಯಸ್ವಾಮಿಯಾಗಿ ಅವತಾರ ತಾಳುತ್ತಾನೆ. ಪಂಚಮುಖಿ ಎಂದರೆ ಐದು ಮುಖಗಳು ಎಂದರ್ಥ. ಇದರಲ್ಲಿ ಹನುಮಂತನ ಮುಖ ಸೇರಿದಂತೆ ನರಸಿಂಹ, ವರಾಹ, ಹಯಗ್ರೀವ ಹಾಗೂ ಗರುಡ ಸೇರಿದಂತೆ ಐದು ಮುಖಗಳಾಗಿವೆ.

46

ಧ್ರುವ ಸರ್ಜಾ ಮತ್ತು ಪ್ರೇರಣಾ ದಂಪತಿಯ ಮಕ್ಕಳ ನಾಮಕರಣಕ್ಕೆ ಬಾಲಿವುಡ್‌ ನಟ ಸಂಜಯ್‌ ದತ್‌ ಮುಖ್ಯ ಅತಿಥಿಯಾಗಿ ಬಂದಿದ್ದರು. ಅರ್ಜುನ್ ಸರ್ಜಾ ನಾಮಕರಣ ಸಮಾರಂಭದಲ್ಲಿ  ಭಾಗಿಯಾಗಿ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ.

56

ಅಕ್ಟೋಬರ್2 ರ 2022 ರಲ್ಲಿ ಧ್ರುವ ದಂಪತಿಗೆ ಮೊದಲ ಮಗಳ ಜನನವಾಗಿತ್ತು. 2023 ರ ಸೆಪ್ಟೆಂಬರ್‌ನಲ್ಲಿ ಗಂಡು ಮಗುವಿನ ಜನನವಾಗಿತ್ತು. ಅಯೋಧ್ಯೆಯ ರಾಮ ಮಂದಿರದಲ್ಲಿ (Rama Mandir) ರಾಮನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದ ದಿನವೇ ಸರ್ಜಾ ಕುಟುಂಬದ ಕುಡಿಗಳಿಗೆ ಹೆಸರಿಡಲಾಗಿದೆ.

66

ಇನ್ನು ಇದೇ ಮೊದಲ ಬಾರಿಗೆ ಧ್ರುವಾ ಸರ್ಜಾ ಅವರ ಮಗ ಹಯಗ್ರಿವ ಅವರ ಫೋಟೋ ರಿವೀಲ್ ಆಗಿದೆ. ಮಗನ ಫೋಟೋವನ್ನು ಸ್ಟಾರ್‌ ನಟ ಇಲ್ಲಿಯವರೆಗೆ ಎಲ್ಲೂ ಹಂಚಿಕೊಂಡಿರಲಿಲ್ಲ. ಆದರೆ ನಾಮಕರಣ ದಿನ ಬೆಳ್ಳಿಯ ತೊಟ್ಟಿಲಲ್ಲ ಮಲಗಿರುವ ಫೋಟೋ ವೈರಲ್ ಆಗಿದೆ.

Read more Photos on
click me!

Recommended Stories