'ಟಗರು' ನಟಿ ಭಾವನಾ ವಿವಾಹ ವಾರ್ಷಿಕೋತ್ಸವ; ಪತಿಗೆ ಲವ್ಯೂ ಹೇಳಿ ಮದುವೆ ಫೋಟೋ ಹಂಚಿಕೊಂಡ ಸುಂದರಿ

First Published | Jan 23, 2024, 11:55 AM IST

'ಟಗರು' ನಟಿ ಭಾವನಾ ಸೋಮವಾರ ತಮ್ಮ 6ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡರು. ಈ ಸಮಯದಲ್ಲಿ ತಮ್ಮ ವಿವಾಹದ ಕೆಲ ಸುಂದರ ಚಿತ್ರಗಳನ್ನವರು ಇನ್ಸ್ಟಾಗ್ರಾನಲ್ಲಿ ಹಂಚಿಕೊಂಡಿದ್ದಾರೆ.

'ಟಗರು' ನಟಿ ಭಾವನಾ ಸೋಮವಾರ ತಮ್ಮ 6ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡರು. ಈ ಸಮಯದಲ್ಲಿ ತಮ್ಮ ವಿವಾಹದ ಕೆಲ ಅದ್ಬುತ ಚಿತ್ರಗಳನ್ನವರು ಇನ್ಸ್ಟಾಗ್ರಾನಲ್ಲಿ ಹಂಚಿಕೊಂಡಿದ್ದಾರೆ.

ಸಿನಿಮಾ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿರುವ ಭಾವನಾ, ಕನ್ನಡ ಚಿತ್ರರಂಗದ ನಿರ್ಮಾಪಕ ನವೀನ್ ಅವರನ್ನು 2018ರಲ್ಲಿ ವರಿಸಿದ್ದರು.

Tap to resize

ಎರಡು ದಿನದ ಹಿಂದೆ ವಿವಾಹ ಪೂರ್ವದ ಮೆಹಂದಿ ಸಮಾರಂಭದ ಫೋಟೋಗಳನ್ನು ಕೂಡಾ ಭಾವನ ಹಂಚಿಕೊಂಡು, 'ಈ ಸುಂದರ ದಿನದ ನೆನಪು, ನನ್ನ ಕ್ರಶ್ ಪ್ರಿಯಾಂಕಾ ಛೋಪ್ರಾಗೆ ವಿಶ್ ಕಳುಹಿಸಿ ಈ ದಿನವನ್ನು ಎಕ್ಸ್ಟ್ರಾ ಸ್ಪೆಶಲ್ ಆಗಿಸಿದ್ದಕ್ಕಾಗಿ ಧನ್ಯವಾದಗಳು' ಎಂದಿದ್ದಾರೆ. ಈ ಸಂದರ್ಭದಲ್ಲಿ ಪ್ರಿಯಾಂಕಾ ಛೋಪ್ರಾ ಭಾವನಾಗೆ ವಿಶ್ ಮಾಡಿದ ವಿಡಿಯೋ ಕೂಡಾ ಹಂಚಿಕೊಂಡಿದ್ದಾರೆ.

ಇನ್ನು ಸೋಮವಾರ ವಿವಾಹದ ಫೋಟೋಗಳನ್ನು ಹಂಚಿಕೊಂಡು,'ಇದು ಕ್ಷಣವೂ ಹೌದು, ಜೀವನಪೂರ್ತಿಯೂ ಹೌದು ಎಂದು ಒಂದೇ ಸಮಯದಲ್ಲಿ ಎನಿಸುತ್ತಿದೆ, ಲವ್ಯೂ' ಎಂದು ಪತಿ ನವೀನ್‌ಗೆ ಹೇಳಿದ್ದಾರೆ.

ಮಲಯಾಳಂ, ತಮಿಳು, ಕನ್ನಡದಲ್ಲಿ ನಟಿಸಿರುವ ಭಾವನಾ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಹಲವರು ಈ ದಂಪತಿಗೆ ವಿಶ್ ಮಾಡಿದ್ದಾರೆ.

ಪ್ರೇಮವಿವಾಹವಾಗಿರುವ ಭಾವನಾ, ತನಗೆ ನವೀನ್‌ರನ್ನು ಕೊಟ್ಟಿದ್ದು ‘ರೋಮಿಯೋ’ ಚಿತ್ರ ಎನ್ನುತ್ತಾರೆ. 2012ರಲ್ಲಿ ಬಿಡುಗಡೆಯಾದ, ಶೇಖರ್ ನಿರ್ದೇಶನದ ಕನ್ನಡ ಚಲನಚಿತ್ರ 'ರೋಮಿಯೋ'ದಲ್ಲಿ ಭಾವನಾ ಗಣೇಶ್‌ಗೆ ನಾಯಕಿಯರಾಗಿದ್ದರು. ಈ ಚಿತ್ರವನ್ನು ನವೀನ್ ಮತ್ತು ರಮೇಶ್ ಕುಮಾರ್ ನಿರ್ಮಾಣ ಮಾಡಿದ್ದರು. ಈ ಸಂದರ್ಭದಲ್ಲಿ ಪ್ರೇಮ ಅರಳಿದ್ದಾಗಿ ತಿಳಿಸಿದ್ದಾರೆ.

ಭಾವನಾ ಸದ್ಯ ಪತಿಯೊಂದಿಗೆ ಬೆಂಗಳೂರಿನಲ್ಲಿದ್ದಾರೆ. ಭಾವನಾ ಮತ್ತು ನವೀನ್ ಐದು ವರ್ಷಗಳ ಸುದೀರ್ಘ ಪ್ರೀತಿಯ ನಂತರ ವಿವಾಹವಾದರು. 

ಮದುವೆಯ ನಂತರ ಸ್ವಲ್ಪ ಕಾಲ ಸಿನಿಮಾದಿಂದ ದೂರ ಉಳಿದಿದ್ದ ಅವರು ನಂತರ '96' ಚಿತ್ರದ ಕನ್ನಡ ರಿಮೇಕ್ ನಲ್ಲಿ ನಾಯಕಿಯಾಗಿ ಚಿತ್ರರಂಗಕ್ಕೆ ಮರುಎಂಟ್ರಿ ನೀಡಿದರು. 

ಭಾವನಾ ಜಯರಾಜ್ ನಿರ್ದೇಶನದ ‘ದೈವಾನಾಮ’ ಚಿತ್ರದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟಿ ರಾಜ್ಯ ಪ್ರಶಸ್ತಿಯನ್ನೂ ಪಡೆದಿದ್ದಾರೆ.  

ನಿರ್ದೇಶಕ ಶಾಜಿ ಕೈಲಾಸ್ ಅವರ ಮಲಯಾಳಂ ಚಿತ್ರ ‘ಹಂಟ್’, ಕನ್ನಡದ ‘ಪಿಂಕ್ ನೋಟ್’ ಮತ್ತು ‘ಕೇಸ್ ಆಫ್ ಕೊಂಡನಾ ’- ಭಾವನಾ ಅವರ ಬಿಡುಗಡೆಯಾಗಬೇಕಿರುವ ಚಿತ್ರಗಳು. ತಮಿಳಿನಲ್ಲಿ ನವೀನ್ ನಿರ್ಮಿಸಿರುವ ‘ದಿ ಡೋರ್’ ಚಿತ್ರದಲ್ಲಿ ಭಾವನಾ ನಾಯಕಿಯಾಗಿ ನಟಿಸಲಿದ್ದಾರೆ.

ಮೂವತ್ತೇಳು ವರ್ಷದ ಭಾವನಾ ತನ್ನ ತಂದೆಯ ಮರಣದ ಸಮಯದಲ್ಲಿ ನವೀನ್ ಎಷ್ಟೊಂದು ಬೆಂಬಲವಾಗಿ ನಿಂತಿದ್ದರು ಎಂಬುದನ್ನು ಸದಾ ಸ್ಮರಿಸುತ್ತಾರೆ. 

Latest Videos

click me!