Actress Amulya: ಚಂದನವನದ ಗೋಲ್ಡನ್ ಗರ್ಲ್ ಅಮೂಲ್ಯ ತಮ್ಮ ಪತಿ ಹಾಗೂ ಮುದ್ದಾದ ಅವಳಿ ಮಕ್ಕಳಾದ ಆಥರ್ವ್ ಮತ್ತು ಆದವ್ ಜೊತೆ ಪೋಸ್ ಕೊಟ್ಟಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸುಂದರವಾದ ಫ್ಯಾಮಿಲಿ ಫೋಟೊ ಪೋಸ್ಟ್ ಮಾಡಿದ್ದಾರೆ. ಯಾವ ದೃಷ್ಟಿ ಬೀಳದಿರಲಿ ಎಂದು ಶುಭ ಹಾರೈಸಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಚೆಲುವಿನ ಚಿತ್ತಾರ ಸಿನಿಮಾದಲ್ಲಿ ನಟಿಸಿ, ಗೋಲ್ಡನ್ ಗರ್ಲ್ ಆಗಿ ಸಿನಿಮಾಗಳಲ್ಲಿ ಮಿಂಚಿದ ನಟಿ ಅಮೂಲ್ಯ ಈಗ ಸಂಪೂರ್ಣವಾಗಿ ಫ್ಯಾಮಿಲಿ ವುಮನ್ ಆಗಿಬಿಟ್ಟಿದ್ದಾರೆ. ನಟನೆಯಿಂದ ದೂರ ಉಳಿದು ತಮ್ಮ ಕುಟುಂಬಕ್ಕೆ ಸಮಯ ಕೊಡುತ್ತಿದ್ದಾರೆ ನಟಿ.
27
ಫ್ಯಾಮಿಲಿ ಜೊತೆ ಅಮೂಲ್ಯ
ಇದೀಗ ನಟಿ ಅಮೂಲ್ಯ ತಮ್ಮ ಕುಟುಂಬದ ಜೊತೆಗಿನ ಮುದ್ದಾದ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ತಮ್ಮ ಗಂಡ ಜಗದೀಶ್, ಇಬ್ಬರು ಮುದ್ದು ಮಕ್ಕಳಾದ ಅಥರ್ವ್ ಮತ್ತು ಅದವ್ ಜೊತೆಗೆ ಒಂದೇ ರೀತಿಯಲ್ಲಿ ಕಪ್ಪು ಬಣ್ಣದ ಬಟ್ಟೆ ಧರಿಸಿ ಪೋಸ್ ಕೊಟ್ಟಿದ್ದಾರೆ.
37
ಕುಟುಂಬಕ್ಕೆ ಆದ್ಯತೆ
ಅಮೂಲ್ಯ ಮದುವೆಯಾಗಿ ಮಕ್ಕಳಾದ ಮೇಲಂತೂ ತಮ್ಮ ಕುಟುಂಬಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುತ್ತಾರೆ. ತಮ್ಮ ಫ್ಯಾಮಿಲಿ ಟೈಮ್, ಫ್ಯಾಮಿಲಿ ಟ್ರಾವೆಲ್, ಫ್ಯಾಮಿಲಿ ಫಂಕ್ಷನ್ ಫೋಟೊಗಳನ್ನು ಶೇರ್ ಮಾಡುತ್ತಿರುತ್ತಾರೆ. ಇದೀಗ ಎಂಟು ವರ್ಷಗಳ ಬಳಿಕ ಮತ್ತೆ ಸಿನಿಮಾಗೆ ಎಂಟ್ರಿ ಕೊಡಲು ನಟಿ ಸಿದ್ಧವಾಗಿದ್ದಾರೆ.
ಅಮೂಲ್ಯ ಇದೀಗ ಬರೋಬ್ಬರಿ ಎಂಟು ವರ್ಷಗಳ ಬಳಿಕ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡುತ್ತಿದ್ದಾರೆ. ಮಂಜು ಸ್ವರಾಜ್ ನಿರ್ದೇಶನ ಮಾಡಿರುವ ‘ಪಿಕಾಬೂ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಶ್ರೀ ಕೆಂಚಾಂಬ ಫಿಲಂ ಸಿನಿಮಾ ನಿರ್ಮಾಣ ಮಾಡುತ್ತಿದೆ. ಈಗಾಗಲೇ ಅಮೂಲ್ಯ ಅವರ ಹುಟ್ಟುಹಬ್ಬಕ್ಕೆ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಅಭಿಮಾನಿಗಳಂತೂ ಥ್ರಿಲ್ ಆಗಿದ್ದಾರೆ.
57
ರಿಯಾಲಿಟಿ ಶೋನಲ್ಲಿ ಅಮೂಲ್ಯ
ಅಮೂಲ್ಯ ಕೊನೆಯದಾಗಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ನಾವು ನಮ್ಮವರು’ ರಿಯಾಲಿಟಿ ಶೋನಲ್ಲಿ ಮೂವರು ಜಡ್ಜಸ್ ಗಳಲ್ಲಿ ಒಬ್ಬರಾಗಿ ಭಾಗವಹಿಸಿದ್ದರು.ಇವರ ಜೊತೆಗೆ ತಾರಾ ಅನುರಾಧ ಹಾಗೂ ಶರಣ್ ಅವರುತೀರ್ಪುಗಾರರಾಗಿದ್ದರು.
67
ಅಮೂಲ್ಯ ಕರಿಯರ್
ಬಾಲನಟಿಯಾಗಿ ಸುಮಾರು ಹತ್ತು ಸಿನಿಮಾಗಳಲ್ಲಿ ನಟಿಸಿದ್ದ ಅಮೂಲ್ಯ ಚೆಲುವಿನ ಚಿತ್ತಾರದ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟರು. ಬಳಿಕ ಚೈತ್ರದ ಚಂದ್ರಮ, ಪ್ರೇಮಿಸಂ, ನಾನು ನನ್ನ ಕನಸು, ಶ್ರಾವಣಿ ಸುಬ್ರಹ್ಮಣ್ಯ, ಗಜಕೇಸರಿ, ಕೃಷ್ಣ ರುಕ್ಕು ಮತ್ತು ಮಾಸ್ತಿ ಗುಡಿ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. .
77
ಕೊನೆಯ ಸಿನಿಮಾ
ಅಮೂಲ್ಯ ಕೊನೆಯದಾಗಿ ಮುಗುಳು ನಗೆ ಸಿನಿಮಾದಲ್ಲಿ ಗಣೇಶ್ ಜೊತೆ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದರು. 2017ರಲ್ಲಿ ಉದ್ಯಮಿ ಜಗದೀಶ್ ಚಂದ್ರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ನಟನೆಯಿಂದ ದೂರವೇ ಉಳಿದಿದ್ದರು. ಇದೀಗ ಶೀಘ್ರದಲ್ಲೇ ಕಂಬ್ಯಾಕ್ ಮಾಡುವ ಖುಷಿಯಲ್ಲಿದ್ದಾರೆ ನಟಿ.