ಬೆಂಗಳೂರು ಬಿಸಿಲು ಕಾಟ ಸಾಕು ಅಂತ ಮಂಜಿನ ಕಡೆ ಹೊರಟ ನಟಿ ಅಮೂಲ್ಯ; ಫೋಟೋ ವೈರಲ್

ಜಾಲಿ ಮೂಡ್‌ನಲ್ಲಿದ್ದಾರೆ ನಟಿ ಅಮೂಲ್ಯ. ಚಿಕ್ಕ ಹುಡುಗಿ ರೀತಿ ರೆಡಿಯಾಗಿರುವುದು ನೋಡಿ ಎಲ್ಲರೂ ಶಾಕ್...
 

ಕನ್ನಡ ಚಿತ್ರರಂಗದ ಗೋಲ್ಡನ್ ಕ್ವೀನ್ ಅಮೂಲ್ಯ ಇದೀಗ ಜಾಲಿ ಮೂಡ್‌ನಲ್ಲಿದ್ದಾರೆ. ಹೀಗಾಗಿ ತಮ್ಮ ಸ್ನೇಹಿತೆ ಜೊತೆ ಪ್ರಯಾಣ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಬಿಸಿಲು ಜಾಸ್ತಿ ಆಗುತ್ತಿದೆ ತಡೆಯೋದಕ್ಕೆ ಆಗುತ್ತಿಲ್ಲ ಅಂತ ಜನ ಎಪಿ ಫ್ಯಾನ್ ಹಾಕೊಂಡು ಕೂತಿದ್ದಾರೆ ಆದರೆ ನಟಿ ಅಮೂಲ್ಯ ಚಿಲ್ ಮಾಡಲು ಟ್ರಿಪ್ ಹೊರಟಿದ್ದಾರೆ.


ಹಳದಿ ಮತ್ತು ಕಪ್ಪು ಬಣ್ಣದ ಔಟ್‌ಫಿಟ್‌ ಧರಿಸಿ ಸಖತ್ ಕೂಲ್ ಆಗಿ ಮಿಂಚಿದ್ದಾರೆ. ಸ್ನೇಹಿತೆ ವೈಡ್ ಆಂಡ್ ಬ್ಲಾಕ್ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡಿದ್ದಾಳೆ.

ಯಾವ ಭಾಗದಲ್ಲಿ ಮಂಜು ಎಂಜಾಯ್ ಮಾಡುತ್ತಿದ್ದಾರೆ ಎಂದು ರಿವೀಲ್ ಮಾಡಿಲ್ಲ ಆದರೆ ಫೋಟೋಗಳು ಮಾತ್ರ ಸಖತ್ ವೈರಲ್ ಆಗುತ್ತಿದೆ.

ಕಳೆದ ತಿಂಗಳೂ ಪತಿ ಜಗದೀಶ್, ಅವಳಿ ಮಕ್ಕಳಾದ ಅಥರ್ವ್ ಮತ್ತು ಆಧವ್‌ ಜೊತೆ ಮಾಲ್ಡೀವ್ಸ್ ಕಡೆ ಮುಖ ಮಾಡಿದ್ದರು. ಅಲ್ಲಿನ ಸ್ಪೆಷಲ್‌ ಕ್ಷಣಗಳನ್ನು ಹಂಚಿಕೊಂಡಿದ್ದರು.

ವೈವಾಹಿಕ ಜೀವನಕ್ಕೆ ಕಾಲಿಟ್ಟ ಮೇಲೆ ನಟಿ ಅಮೂಲ್ಯ ಸಿನಿಮಾರಂಗದಿಂದ ದೂರ ಉಳಿದುಬಿಟ್ಟರು. ಸಿನಿಮಾ ಪ್ರಜೆಕ್ಟ್‌ಗಳು ಒಪ್ಪಿಕೊಳ್ಳುತ್ತಿರಲ್ಲ ಆದರೆ ಸಿನಿಮಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದರು.

ಅವಳಿ ಮಕ್ಕಳ ಮಮ್ಮಿ ಆದ ಮೇಲೂ ನಟಿ ಅಮೂಲ್ಯ ಇಷ್ಟೋಂದು ಫಿಟ್ ಆಂಡ್ ಫೈನ್ ಆಗರಲು ಕಾರಣ ಏನು ಎಂದು ಇದುವರೆಗೂ ರಿವೀಲ್ ಮಾಡಿಲ್ಲ. 

Latest Videos

click me!