ಸಿಂಪಲ್ ಲುಕ್‌ನಲ್ಲಿ ಮಿಂಚಿದ ಅಮೃತಾ ಪ್ರೇಮ್; ಐಬ್ರೋ ಎಷ್ಟು ದಪ್ಪಗಿದೆ ಎಂದು ಕಣ್ಣಾಕಿದ ನೆಟ್ಟಿಗರು!

First Published | Aug 21, 2024, 10:44 AM IST

ಅಮೃತಾ ಪ್ರೇಮ್ ಮತ್ತೊಂದು ಫೋಟೋಶೂಟ್ ವೈರಲ್. ಅಮ್ಮ ಮಗಳು ಇಬ್ರೂ ಸೂಪರ್ ಎಂದ ನೆಟ್ಟಿಗರು....

ಕನ್ನಡ ಚಿತ್ರರಂಗದ ಲವ್ಲಿ ಸ್ಟಾರ್ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಸದ್ಯ ಚಿತ್ರರಂಗದ ಬಹು ಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ. 

ಡಾಲಿ ಧನಂಜಯ್ ನಿರ್ಮಾಣದ ಟಗರು ಪಲ್ಯ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಬೆಸ್ಟ್‌ ನಟಿ ಎನಿಸಿಕೊಂಡಿದ್ದಾರೆ.

Tap to resize

ಬ್ಯಾಕ್ ಟು ಬ್ಯಾಕ್ ದೊಡ್ಡ ಪ್ರಾಜೆಕ್ಟ್‌ಗಳ ಆಫರ್‌ ಬರುತ್ತಿದ್ದರೂ ಅಮೃತಾ ಸಮಯ ತೆಗೆದುಕೊಂಡು ಪೋಷಕರ ಜೊತೆ ಒಳ್ಳೆ ಸ್ಕ್ರಿಪ್ಟ್ ಆಯ್ಕೆ ಮಾಡುತ್ತಿದ್ದಾರೆ.

ಈ ನಡುವೆ ಸಾಕಷ್ಟು ಫೋಟೋಶೂಟ್‌ಗಳಲ್ಲಿ ಅಮೃತಾ ಪ್ರೇಮ್ ಭಾಗಿಯಾಗುತ್ತಿದ್ದಾರೆ. ಇತ್ತೀಚಿಗೆ ಮಾಡಿಸಿರುವ ಸಿಂಪಲ್ ಲುಕ್ ಶೂಟ್ ವೈರಲ್ ಆಗುತ್ತಿದೆ.

ಹೌದು! ಕಪ್ಪು ಬಣ್ಣದ ಬ್ಲೌಸ್‌ಗೆ ಕ್ರೀಂ ಬಣ್ಣದ ಸ್ಕರ್ಟ್‌ ಧರಿಸಿ ಅಮೃತಾ ಫೋಟೋಶೂಟ್ ಮಾಡಿಸಿದ್ದಾರೆ. ಹೈ ಹೀಲ್ಸ್‌ ಧರಿಸಿ ಫೋಸ್ ಕೊಟ್ಟಿದ್ದಾರೆ.

ಸಖತ್ ಸಿಂಪಲ್ ಮೇಕಪ್ ಮಾಡಿಕೊಂಡಿರುವ ಅಮೃತಾಳನ್ನು ನೋಡಿ 'ನೀವು ಸರಳ ಸುಂದರಿ ಆದರೆ ನಿಮ್ಮ ಐಬ್ರೂ ಮಾತ್ರ ಇಷ್ಟು ದಪ್ಪಗಿ ಬರಲು ಕಾರಣ ತಿಳಿಸಿ' ಎಂದು ಮಹಿಳಾ ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. 

Latest Videos

click me!