ನಿನ್ನಿಂದಾಗಿ ನಾನು ರಾಣಿಯಾದೆ…. ಮಗುವಿನ ನಿರೀಕ್ಷೆಯಲ್ಲಿರೋ ತುಂಬುಗರ್ಭಿಣಿ ಮಿಲನಾ ಮುದ್ದಾದ ಫೋಟೊಗಳು

ಸ್ಯಾಂಡಲ್’ವುಡ್ ನಟಿ , ತುಂಬು ಗರ್ಭಿಣಿ ಮಿಲನಾ ನಾಗರಾಜ್ ಪ್ರೆಗ್ನೆನ್ಸಿ ಫೋಟೊ ಶೂಟ್ ಮಾಡಿಸಿಕೊಂಡಿದ್ದು, ತುಂಬಾನೆ ಸುಂದರವಾಗಿ ಕಾಣಿಸುತ್ತಿದ್ದಾರೆ. 
 

ಸ್ಯಾಂಡಲ್ ವುಡ್ ಸೆಲೆಬ್ರಿಟಿ ಜೋಡಿಗಳಾದ ಡಾರ್ಲಿಂಗ್ ಕೃಷ್ಣ (Darling Krishna) ಮತ್ತು ಮಿಲನಾ ನಾಗರಾಜ್ ಮನೆಯಲ್ಲಿ ಸದ್ಯಕ್ಕಂತೂ ಸಂಭ್ರಮ ಮನೆ ಮಾಡಿದೆ. ಸೆಪ್ಟೆಂಬರ್ ತಿಂಗಳಲ್ಲಿ ಮಗುವಿನ ನಿರೀಕ್ಷೆಯಲ್ಲಿರುವ ಈ ಜೋಡಿ, ಸಂತೋಷದ ಕಡಲಲ್ಲಿ ತೇಲುತ್ತಿದ್ದಾರೆ. 
 

ಇತ್ತೀಚೆಗಷ್ಟೇ ಮಿಲನಾ ನಾಗರಾಜ್ (Milana Nagaraj) ಸೀಮಂತೋತ್ಸವ ಅದ್ಧೂರಿಯಾಗಿ ಕೃಷ್ಣ -ಮಿಲನಾ ಮನೆಯಲ್ಲಿಯೇ ನಡೆದಿತ್ತು. ತಾಯ್ತನದ ಸಂಭ್ರಮವನ್ನು ಹೆಚ್ಚಿಸುವ ಸೀಮಂತದ ಮುದ್ದಾದ ಫೋಟೋಗಳನ್ನು ಮಿಲನಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಸಂತೋಷವನ್ನು ಹೊರ ಹಾಕಿದ್ದರು. 
 


ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ತುಂಬು ಗರ್ಭಿಣಿ (pregnant) ಮತ್ತು ಸ್ಯಾಂಡಲ್ ವುಡ್ ನಟಿ ಮಿಲನಾ ನಾಗರಾಜ್ ಇದೀಗ ಹೊಸದಾಗಿ ಪ್ರೆಗ್ನೆನ್ಸಿ ಫೋಟೊ ಶೂಟ್ ಮಾಡಿಸಿಕೊಂಡಿದ್ದು, ಫೋಟೋಗಳಲ್ಲಿ ನಟಿ ತುಂಬಾನೆ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. 
 

ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಮಿಲನಾ, ತಮ್ಮ ಇನ್’ಸ್ಟಾಗ್ರಾಂ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ರೋಸ್ ಬಣ್ಣದ ಆಫ್ ಶೋಲ್ಡರ್ ಗೌನ್ ಧರಿಸಿರುವ ಮಿಲನಾ, ಕುತ್ತಿಗೆಗೆ ಮುತ್ತಿನ ಮಾಲೆ ಧರಿಸಿದ್ದು, ತುಂಬಾನೆ ಕ್ಯೂಟ್ ಆಗಿ ಕಾಣಿಸುತ್ತಿದ್ದಾರೆ. 
 

ತಮ್ಮ ಫೋಟೋಗಳ ಜೊತೆಗೆ ಮಿಲನಾ ಕ್ಯಾಪ್ಶನ್ ಕೂಡ ಬರೆದುಕೊಂಡಿದ್ದು, “Someday I’ll look back and say, I blinked and you were out” ನೀನು ಹುಟ್ಟೋದಕ್ಕೂ ಮುಂಚೆಯೇ ನಾನು ರಾಣಿಯಂತೆ ಫೀಲ್ ಮಾಡ್ತಿದ್ದೇನೆ ಎನ್ನುತ್ತಾ ಮಗುವಿನ ಬರುವಿಕೆಯ ಕಾತುರತೆಯನ್ನು ಈ ರೀತಿಯಾಗಿ ವ್ಯಕ್ತಪಡಿಸಿದ್ದಾರೆ ಮಿಲನಾ. 
 

ಮಿಲನಾ ಬೇಬಿ ಬಂಪ್ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಫೋಟೊ ನೋಡಿ ನಟಿಯರಾದ ಅಮೃತಾ ಅಯ್ಯಂಗಾರ್ ಏಂಜಲ್ ಅಂದ್ರೆ, ದಿಶಾ ಮದನ್ ಬ್ಯೂಟಿಫುಲ್ ಎಂದಿದ್ದಾರೆ, ಹಲವು ಸೆಲೆಬ್ರಿಟಿಗಳು ಕಾಮೆಂಟ್ ಮಾಡಿ, ಶುಭ ಹಾರೈಸಿದ್ದಾರೆ. 
 

ಮಿಲನಾ ಬೇಬಿ ಬಂಪ್ ಫೋಟೋಸ್ ನೋಡಿ ಅಭಿಮಾನಿಗಳು (social media) ಸಹ ಥ್ರಿಲ್ ಆಗಿದ್ದು, ಸುರಕ್ಷಿತ ಮತ್ತು ಆರೋಗ್ಯಕರ ಬೇಬಿ ಜನ್ಮನೀಡಿ, ಇಷ್ಟಾರ್ಥ ಪ್ರಾಪ್ತಿರಸ್ತು, ಶುಭವಾಗಲಿ, ದೃಷ್ಟಿಯಾಗದಿರಲಿ, ನಿಮಗೆ ಅವಳಿ ಮಕ್ಕಳಾಗಲಿ, ನಿಧಿಮಾ 2 ಬೇಗ ಬರಲಿ ಎಂದೆಲ್ಲಾ ಹಾರೈಸಿದ್ದಾರೆ ಅಭಿಮಾನಿಗಳು. 
 

Latest Videos

click me!