ತಂಗಿಗೆ ಕಾಲ್ಗೆಜ್ಜೆ ಕೊಟ್ಟಿದ ರಣ್ವಿತ್; ರಿಷಬ್ ಶೆಟ್ಟಿ ಮಕ್ಕಳ ರಕ್ಷಾ ಬಂಧನ ಫೋಟೋ ವೈರಲ್

First Published | Aug 20, 2024, 5:12 PM IST

ಮನೆಯ ಆವರಣದಲ್ಲಿ ರಕ್ಷಾ ಬಂಧನ್ ಆಚರಿಸಿದ ರಣ್ವಿತ್ ರಾಧ್ಯಾ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್....

ಕಾಂತಾರ ನಟ, ಪ್ಯಾನ್ ಇಂಡಿಯಾ ಸ್ಟಾರ್ ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ಅವರ ಮುದ್ದಾದ ಮಕ್ಕಳು ಮನೆಯ ಆವರಣದಲ್ಲಿ ರಕ್ಷಾ ಬಂಧನ್ ಆಚರಿಸಿದ್ದಾರೆ.

 ಪುತ್ರಿ ರಣ್ವಿತ್ ಮತ್ತು ರಾಧ್ಯಾ ರಾಖಿ ಕಟ್ಟಿ ಸಂಭ್ರಮಿಸುತ್ತಿರುವ ಫೋಟೋವನ್ನು ರಿಷಬ್ ಶೆಟ್ಟಿ ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ.

Tap to resize

'ರಕ್ಷಾ ಬಂಧನದ ಹಾರ್ದಿಕ ಶುಭಾಶಯಗಳು' ಎಂದು ರಿಷಬ್ ಶೆಟ್ಟಿ ಬರೆದುಕೊಂಡಿದ್ದಾರೆ. ಮನೆಯ ಆವರಣದಲ್ಲಿ ಇರುವ ತುಳಸಿ ಕಟ್ಟಿ ಮುಂದೆ ರಾಖಿ ಕಟ್ಟಿದ್ದಾರೆ.

ತುಳಸಿ ಕಟ್ಟೆಗೆ ಕೈ ಮುಗಿದು ನಿಂತಿರುವ ರಣ್ವಿತ್ ಮತ್ತು ರಾಧ್ಯಾ ಫೋಟೋ ಮುದ್ದಾಗಿದೆ. ಅಣ್ಣನಿಗೆ ರಾಖಿ ಕಟ್ಟಿ ಕಾಲಿಗೆ ನಮಸ್ಕಾರ ಮಾಡಿಕೊಂಡಿದ್ದಾರೆ ರಾಧ್ಯಾ.

ಅಣ್ಣ ಏನಾದರೂ ಗಿಫ್ಟ್ ಕೊಡಬೇಕು ಅಲ್ವಾ? ರಾಖಿ  ಕಟ್ಟಿದ ತಕ್ಷಣವೇ ತಂಗಿ ಕಾಲಿಗೆ ರಣ್ವಿತ್ ಗೆಜ್ಜೆ ಕಟ್ಟುತ್ತಿರುವ ಫೋಟೋವನ್ನು ನೆಟ್ಟಿಗರು ಗಮನಿಸಿದ್ದಾರೆ.

ನೀವು ಎಷ್ಟೇ ದೊಡ್ಡ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದರೂ ಮಾಡರ್ನ್‌ ಸ್ಕೂಲ್‌ನಲ್ಲಿ ಮಕ್ಕಳು ಓದುತ್ತಿದ್ದರು ಸಂಸ್ಕಾರ ಹೇಳಿಕೊಟ್ಟಿದ್ದೀರಿ ಎಂದು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. 

Latest Videos

click me!