ರಮ್ಯಾ ಔಟ್ ಆಗುತ್ತಿದ್ದಂತೆ ಐಶ್ವರ್ಯ ರಾಜೇಶ್‌ ಎಂಟ್ರಿ; ಧನಂಜಯ್ ಜೋಡಿ ಸೂಪರ್ ಎಂದ ನೆಟ್ಟಿಗರು

Published : Apr 23, 2024, 04:37 PM IST

ಡಾಲಿ ಧನಂಜಯ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಐಶ್ವರ್ಯ ರಾಜೇಶ್.....  

PREV
18
ರಮ್ಯಾ ಔಟ್ ಆಗುತ್ತಿದ್ದಂತೆ ಐಶ್ವರ್ಯ ರಾಜೇಶ್‌ ಎಂಟ್ರಿ; ಧನಂಜಯ್ ಜೋಡಿ ಸೂಪರ್ ಎಂದ ನೆಟ್ಟಿಗರು

ನಟ ರಾಕ್ಷಸ ಡಾಲಿ ಧನಂಜಯ್ ನಟನೆಯ ಉತ್ತರಕಾಂಡ ಸಿನಿಮಾ ಸೌತ್‌ ಸಿನಿ ಜಗತ್ತಿನಲ್ಲಿ ಸೆನ್ಸೆಷನ್ ಕ್ರಿಯೇಟ್ ಮಾಡಿದೆ. ಧನಂಜಯ್‌ಗೆ ಜೋಡಿಯಾಗಿ ಮೋಹಕ ತಾರೆ ರಮ್ಯಾ ನಟಿಸುವುದಾಗಿ ಬಹಳ ಹಿಂದೆ ಸಹಿ ಮಾಡಿದ್ದರು, ಚಿತ್ರದ ಮುಹೂರ್ತ ಕೂಡ ಅದ್ಧೂರಿಯಾಗಿ ನಡೆದಿದೆ. 

28

ಸಿನಿಮಾ ಚಿತ್ರೀಕರಣ ಆರಂಭವಾಗಿದ್ದು ಡೇಟ್ಸ್‌ ಇಲ್ಲದ ಕಾರಣ ಚಿತ್ರದಿಂದ ಹೊರ ಬಂದಿರುವುದಾಗಿ ರಮ್ಯಾ ಹೇಳಿಕೆ ನೀಡಿದ್ದರು. ರಮ್ಯಾ ಔಟ್ ಎಂದು ತಿಳಿದು ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದರು. 

38

 ರಮ್ಯಾ ಸ್ಥಾನ ತುಂಬ ನಟಿ ಯಾರಿದ್ದಾರೆ ಎಂದು ಲೆಕ್ಕಾಚಾರ ಮಾಡುವಷ್ಟರಲ್ಲಿ ಕೆಆರ್‌ಜೆ ಸ್ಟುಡಿಯೋಸ್ ದಕ್ಷಿಣ ಭಾರತದ ಖ್ಯಾತ ನಟಿ ಐಶ್ವರ್ಯ ರಾಜೇಶ್‌ನ ಬರ ಮಾಡಿಕೊಂಡಿದ್ದಾರೆ.

48

ಧನಂಜಯ್‌ಗೆ ಐಶ್ವರ್ಯ ಜೋಡಿಯಾಗಲಿದ್ದು, ಶಿವರಾಜ್‌ಕುಮಾರ್‌ಗೆ ಭಾವನ ಮೆನನ್‌ ಜೋಡಿಯಾಗುತ್ತಿದ್ದಾರೆ. ಇಲ್ಲಿಂದ ವೀಕ್ಷಕರ ನಿರೀಕ್ಷೆ ಮತ್ತಷ್ಟು ಹೆಚ್ಚಾಗುತ್ತಿದೆ. 

58

ನಟಿ ಐಶ್ವರ್ಯ ಚಿತ್ರದಲ್ಲಿ ಧನಂಜಯ ಅವರ‌ ಜೋಡಿಯಾಗಿ "ದುರ್ಗಿ" ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಐಶ್ವರ್ಯ ಈ ಹಿಂದೆ ಮಾಡಿರುವ ಸಿನಿಮಾಗಳನ್ನು ಕೇಳಿದರೆ ಶಾಕ್ ಆಗ್ತೀರಾ.

68

ದಿ ಗ್ರೇಟ್ ಇಂಡಿಯನ್ ಕಿಚನ್, ದಿ ವರ್ಲ್ಡ್ ಫೇಮಸ್ ಲವರ್, ವಡಾ‌ ಚೆನ್ನೈ, ಕಾಕ ಮುತ್ತೈ, ಜೋಮೋಂಟೇ ಸುವಿಶೇಷಂಗಳ್ ,ಟಕ್ ಜಗದೀಶ್ , ವಾನಂ ಕೊಟ್ಟಾಟುಂ ಸೇರಿದಂತೆ ಹಲವಾರು ಯಶಸ್ವಿ ಚಿತ್ರಗಳಲ್ಲಿ ಐಶ್ವರ್ಯ ನಟಿಸಿದ್ದಾರೆ.

78

 ಪ್ರಸ್ತುತ ಚಿತ್ರದ ಪ್ರಥಮ ಶೆಡ್ಯೂಲ್ ಚಿತ್ರೀಕರಣ ವಿಜಯಪುರದಲ್ಲಿ ನಡೆಯುತ್ತಿದ್ದು, ಈ ಆಕ್ಷನ್ ಡ್ರಾಮಾಗೆ ರೋಹಿತ್ ಪದಕಿ ಆಕ್ಷನ್ ಕಟ್ ಹೇಳಿದ್ದಾರೆ.

88

ಚಿತ್ರವನ್ನು ಕಾರ್ತಿಕ್ ಗೌಡ ಮತ್ತು ಯೋಗಿ‌ ಜಿ ರಾಜ್ ಕೆ.ಆರ್.ಜಿ.ಸ್ಟೂಡಿಯೋಸ್‌ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಿದ್ದಾರೆ. ಮಲಯಾಳಂ ನಟ ವಿಜಯ್ ಬಾಬು, ರಂಗಾಯಣ ರಘು, ಚೈತ್ರ ಜೆ ಆಚಾರ್, ಉಮಾಶ್ರೀ, ಯೋಗರಾಜ್ ಭಟ್, ದಿಗಂತ್ ಮಂಚಾಲೆ, ಗೋಪಾಲಕೃಷ್ಣ ದೇಶಪಾಂಡೆ ಸೇರಿದಂತೆ ಬಹು ದೊಡ್ಡ ತಾರಾಬಳಗವನ್ನು ಚಿತ್ರ ಹೊಂದಿದೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories