ಚಿರಂಜೀವಿ ಸರ್ಜಾ ಸಮಾಧಿ ಬಳಿ ಹನುಮ ಮೂರ್ತಿ ಪ್ರತಿಷ್ಠಾಪಿಸಿದ ಧ್ರುವ, ಹಳೇ ಫೋಟೋಸ್ ವೈರಲ್

Published : Apr 23, 2024, 01:13 PM IST

ಎರಡೂ ಮಕ್ಕಳಿಗೆ ಒಟ್ಟೊಟ್ಟಿಗೆ ನಾಮಕರಣ ಮಾಡಿದ ಧ್ರುವ ಸರ್ಜಾ, ಅಯೋಧ್ಯೆಯ ರಾಮ ಮಂದಿರ ಪ್ರತಿಷ್ಠಾಪನೆಯಾದ ದಿನವೇ ತಮ್ಮ ಮನೆಯಲ್ಲಿ ದೊಡ್ಡದಾದ ಕಂಚಿನ ಹನುಮನ ಪ್ರತಿಮೆಯಲ್ಲಿ ಸ್ಥಾಪಿಸಿದ್ದಾರೆ. ಚಿರಂಜೀವಿ ಸರ್ಜಾ ಸಮಾಧಿ ಬಳಿ ಕುಟುಂಬದೊಂದಿಗೆ ಕಳೆದ ಕ್ಷಣಗಳ ಪೋಟೋಗಳು ಇದೀಗ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. 

PREV
18
ಚಿರಂಜೀವಿ ಸರ್ಜಾ ಸಮಾಧಿ ಬಳಿ ಹನುಮ ಮೂರ್ತಿ ಪ್ರತಿಷ್ಠಾಪಿಸಿದ ಧ್ರುವ, ಹಳೇ ಫೋಟೋಸ್ ವೈರಲ್

ಸ್ಯಾಂಡಲ್‌ವುಡ್ ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಅವರು ತಮ್ಮ ಇಬ್ಬರು ಮಕ್ಕಳ ನಾಮಕರಣ ಸಮಾರಂಭವನ್ನು ಇದೇ ಜನವರಿಯಲ್ಲಿಯೇ ಅದ್ಧೂರಿಯಾಗಿ ನಡೆಸಿದ್ದರ. 
 

28

ಅಯೋಧ್ಯೆಯಲ್ಲಿ ರಾಮಮಂದಿರದಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠೆಯ ದಿನವೇ ಹನುಮಭಕ್ತ ಧ್ರುವ ಸರ್ಜಾ, ತಮ್ಮ ಮನೆಯಲ್ಲೂ ಹನುಮನ ಪ್ರತಿಷ್ಠೆ ಮಾಡಿ ಬಳಿಕ ಮಕ್ಕಳಿಗೆ ದೇವರ ಹೆಸರನ್ನೇ ನಾಮಕರಣ ಮಾಡಿದ್ದರು. 
 

38

ಧ್ರುವ ಸರ್ಜಾ ತಮ್ಮ ಹಿರಿಯ ಮಗಳಿಗೆ ರುದ್ರಾಕ್ಷಿ ಎಂದು ನಾಮಕರಣ ಮಾಡಿದ್ದು, ಮಗನಿಗೆ ಹಯಗ್ರಿವ ಎಂದು ನಾಮಕರಣ ಮಾಡಿದ್ದರು. ಈ ಅದ್ಧೂರಿ ಸಮಾರಂಭದ ಸುಂದರ ಫೋಟೋಗಳು ಇದೀಗ ವೈರಲ್ ಆಗುತ್ತಿವೆ. 
 

48

ಈ ಕಾರ್ಯಕ್ರಮಕ್ಕೆ ಚಿತ್ರರಂಗದ ಗಣ್ಯರು ಆಗಮಿಸಿದ್ದರು, ಜೊತೆಗೆ ಬಾಲಿವುಡ್ ನಟ ಸಂಜಯ್ ದತ್ ಕೂಡ ಆಗಮಿಸಿ, ಮಕ್ಕಳಿಗೆ ಆಶೀರ್ವಾದ ಮಾಡಿದ್ದರು. 
 

58

ಆಫ್ ವೈಟ್ ಪಂಚೆ, ಶರ್ಟ್ ಮತ್ತು ಸೂಟ್ ನಲ್ಲಿ ಮಿಂಚಿದ ಧ್ರುವ ಸರ್ಜಾ, ಮೊದಲಿಗೆ ಆಂಜನೇಯನ ಮೂರ್ತಿಯನ್ನು ಸ್ಥಾಪಿಸಿ, ಅದಕ್ಕೆ ಪೂಜೆ. ಹೂವಿನ ಅರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಆರಂಭಿಸಿದ್ದರು. ಧ್ರುವ ಸರ್ಜಾ ಮಗನಿಗೂ ಅಪ್ಪನಂತೆ ಡ್ರೆಸ್ ಮಾಡಲಾಗಿತ್ತು. 
 

68

ಇನ್ನು ಧ್ರುವ ಸರ್ಜಾ ಪ್ರೇರಣ ಶಂಕರ್ (Prerana Shankar) ಗ್ರೇ ಬಾರ್ಡರ್ ಬಂದ, ಪಿಂಕ್ ಬಣ್ಣದ ಜರತಾರಿ ಸೀರೆಯಲ್ಲಿ ಮಿಂಚಿದ್ರೆ, ಮಗಳು ರುದ್ರಾಕ್ಷಿ ಕೂಡ ಅಮ್ಮನಿಗೆ ಮ್ಯಾಚ್ ಆಗುವಂತ ಪಿಂಕ್, ಗ್ರೇ ಬಣ್ಣದ ಲಂಗ ರವಿಕೆಯಲ್ಲಿ ಮುದ್ದಾಗಿ ಕಾಣಿಸುತ್ತಿದ್ದಳು. 
 

78

ಮೇಘನಾ ರಾಜ್ (Meghana Raj) ಮತ್ತು ಮಗ ರಾಯನ್ ಸರ್ಜಾ (Rayan Sarja) ಕೂಡ ಕಾರ್ಯಕ್ರಮಕ್ಕೆ ಆಗಮಿಸಿದ್ದು, ಪಂಚೆ, ಶರ್ಟ್ ನಲ್ಲಿ ಮಿಂಚಿದ ರಾಯನ್ ಆಂಜನೇಯ ಸ್ವಾಮಿಗೆ ಹೂಮಳೆ ಸುರಿಸುವ ಮೂಲಕ ಸಂಭ್ರಮಿಸಿದ್ದಾರೆ. 
 

88

ಚಿರು ಸರ್ಜಾ ಸಮಾಧಿ ಇರುವ ಜಾಗದಲ್ಲೇ ನಾಮಕರಣ ಸಮಾರಂಭ ನಡೆದಿದ್ದು, ಅರ್ಜುನ್ ಸರ್ಜಾ (Arjun Sarja), ಪತ್ನಿ ಮತ್ತು ಮಕ್ಕಳು ಸಹ ಹಾಜರಿದ್ದರು. ಅರ್ಜುನ್ ಸರ್ಜಾ ತಮ್ಮ ಪ್ರೀತಿಯ ಅಳಿಯ ಚಿರು ಸಮಾಧಿಗೆ ತೆರಳಿ ಭಾವುಕರಾಗಿರುವ ಫೋಟೋಗಳನ್ನು ಕಾಣಬಹುದು. 
 

Read more Photos on
click me!

Recommended Stories