ಪ್ಯಾನ್​ ಇಂಡಿಯಾ ಸ್ಟಾರ್ ಆದ ವಸಿಷ್ಠ ಸಿಂಹ: ಭೀಮನ ಮೊಮ್ಮಗನ ಕಥೆ 'ತ್ರಿಬಾಣ ಬಾರ್ಬರಿಕ'

First Published | Nov 13, 2024, 5:17 PM IST

ಜಗತ್ತು ಗಮನಿಸದ ಮಹಾವೀರ ಮೂರು ಬಾಣಗಳನ್ನು ಏಕಕಾಲಕ್ಕೆ ಹೂಡುವ ಬಾರ್ಬರಿಕನ ಅದ್ಭುತ ಪರಾಕ್ರಮದ ನಿರೂಪಣೆ ಚಿತ್ರದ ಹೈಲೈಟ್‌. ಸಿನಿಮಾ ಪೌರಾಣಿಕ ಕಥೆಯ ಜೊತೆಗೆ ಆಧುನಿಕ ಜಗತ್ತಿಗೂ ಕನೆಕ್ಟ್‌ ಆಗಲಿದೆ.

ವಸಿಷ್ಠ ಸಿಂಹ ನಟನೆಯ ಪ್ಯಾನ್‌ ಇಂಡಿಯಾ ಸಿನಿಮಾ ‘ತ್ರಿಬಾಣಧಾರಿ ಬಾರ್ಬರಿಕ’ದ ಮೋಷನ್‌ ಪೋಸ್ಟರ್‌ ಬಿಡುಗಡೆಯಾಗಿದೆ. ಮೋಹನ್‍ ಶ್ರೀವತ್ಸ ನಿರ್ದೇಶಕರು. ಭೀಮನ ಮೊಮ್ಮಗ ಅಂದರೆ ಘಟೋತ್ಕಚನ ಮಗ ಬಾರ್ಬರಿಕನ ಕಥೆ ಚಿತ್ರದಲ್ಲಿದೆ. 

ಜಗತ್ತು ಗಮನಿಸದ ಮಹಾವೀರ ಮೂರು ಬಾಣಗಳನ್ನು ಏಕಕಾಲಕ್ಕೆ ಹೂಡುವ ಬಾರ್ಬರಿಕನ ಅದ್ಭುತ ಪರಾಕ್ರಮದ ನಿರೂಪಣೆ ಚಿತ್ರದ ಹೈಲೈಟ್‌. ಸಿನಿಮಾ ಪೌರಾಣಿಕ ಕಥೆಯ ಜೊತೆಗೆ ಆಧುನಿಕ ಜಗತ್ತಿಗೂ ಕನೆಕ್ಟ್‌ ಆಗಲಿದೆ.

Tap to resize

ಗಮನಾರ್ಹ ಅಭಿನಯಕ್ಕಾಗಿ ಹೆಸರುವಾಸಿಯಾದ ವಸಿಷ್ಟ ಅವರು ತೀವ್ರ ಮತ್ತು ಸೂಕ್ಷ್ಮ ಪಾತ್ರಗಳ ನಡುವೆ ಸಲೀಸಾಗಿ ಪರಿವರ್ತನೆ ಮಾಡುವ ಸಾಮರ್ಥ್ಯಕ್ಕಾಗಿ ಮನ್ನಣೆಯನ್ನು ಗಳಿಸಿದ್ದಾರೆ.

ಈ ಸಿನಿಮಾದಲ್ಲಿ ವಶಿಷ್ಠ ಸಿಂಹ ಜೊತೆಗೆ ಸತ್ಯರಾಜ್‍, ಸಂಚಿ ರೈ, ಸತ್ಯಂ ರಾಜೇಶ್‍ ಪ್ರಮುಖ ಪಾತ್ರಗಳಲ್ಲಿದ್ದಾರೆ. ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಚಿತ್ರವನ್ನು ವಿಜಯಪಾಲ್‍ ರೆಡ್ಡಿ ಅಡಿಧಲ ನಿರ್ಮಿಸಿದರೆ, ಮೋಹನ್‍ ಶ್ರೀವತ್ಸ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಖ್ಯಾತ ನಿರ್ದೇಶಕ ಮಾರುತಿ ಚಿತ್ರವನ್ನು ಪ್ರೆಸೆಂಟ್​ ಮಾಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಚಿತ್ರದ ಮುಖ್ಯಪಾತ್ರದಲ್ಲಿ ವಸಿಷ್ಠ ಸಿಂಹ ಕಾಣಿಸಿಕೊಳ್ಳಲಿದ್ದಾರೆ.

Latest Videos

click me!