ಹೊಸ ಮನೆ ಗೃಹಪ್ರವೇಶ ಮಾಡಿದ ಮೇಘನಾ ರಾಜ್; ಮನೆಗಿಟ್ಟ ಹೆಸರಲ್ಲಿ ಚಿರುನೇ ಇಲ್ಲ ಎಂದು ಫ್ಯಾನ್ಸ್ ಬೇಸರ

Published : Nov 13, 2024, 04:29 PM IST

ಬೆಂಗಳೂರಿನಲ್ಲಿ ಹೊಸ ಮನೆ ಖರೀದಿಸಿದ ಮೇಘನಾ ರಾಜ್. ಗೇಟ್‌ನ ಬಳಿ ಇರುವ ಮನೆ ಹೆಸರು ನೋಡಿ ಎಲ್ಲರೂ ಶಾಕ್....

PREV
16
ಹೊಸ ಮನೆ ಗೃಹಪ್ರವೇಶ ಮಾಡಿದ ಮೇಘನಾ ರಾಜ್; ಮನೆಗಿಟ್ಟ ಹೆಸರಲ್ಲಿ ಚಿರುನೇ ಇಲ್ಲ ಎಂದು ಫ್ಯಾನ್ಸ್ ಬೇಸರ

ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಮೇಘನಾ ರಾಜ್‌ ಇದೀಗ ಬೆಂಗಳೂರಿನ ಜನಪ್ರಿಯ ಜಾಗದಲ್ಲಿ ಹೊಸ ಮನೆ ಕಟ್ಟಿಸಿ, ಗೃಹಪ್ರವೇಶ ಮಾಡಿದ್ದಾರೆ.
 

26

ಬಹಳ ಅದ್ಧೂರಿಯಾಗಿ ಮೇಘನಾ ರಾಜ್ ತಮ್ಮ ಮನೆಯ ಗೃಹ ಪ್ರವೇಶ ಮಾಡಿದ್ದಾರೆ. ಮನೆಯ ವಿಳಾಸ ಮತ್ತು ಯಾವುದೇ ಮಾಹಿತಿ ಸೋಷಿಯಲ್ ಮೀಡಿಯಾದಲ್ಲಿ ರಿವೀಲ್ ಆಗಿಲ್ಲ.
 

36

ಮನೆಯ ಹೊರ ಭಾಗದ ಫೋಟೋ ವೈರಲ್ ಆಗುತ್ತಿದೆ. ನೋಡಲು ಡ್ಯೂಪ್ಲೆಕ್ಸ್‌ ಮನೆಯಂತೆ ಕಾಣುತ್ತಿದ್ದು ವೈಟ್ ಮತ್ತು ಚಾಕೋಲೇಟ್‌ ಬ್ರೌನ್‌ ಬಣ್ಣದಲ್ಲಿ ಪೇಯಿಂಟ್ ಮಾಡಿದ್ದಾರೆ.

46

ಇನ್ನು ಮನೆಯ ನಂಬರ್ 42 ಆಗಿದ್ದು, ಮೇಘನಾ ರಾಜ್‌ ಸರ್ಜಾ ರಾಯನ್ ರಾಜ್ ಎಂದು ಮನೆಗೆ ಹೆಸರಿಟ್ಟಿದ್ದಾರೆ. ಪ್ರವೇಶಿಸುತ್ತಿದ್ದಂತೆ ಕಾರ್ ಪಾರ್ಕಿಂಗ್ ಸಿಗುತ್ತದೆ.

56

ಮನೆಯ ಹೆಸರು ಬಹಳ ಮುಖ್ಯವಾಗುತ್ತದೆ ಆದರೆ ಇಲ್ಲಿ ಚಿರು ಹೆಸರನ್ನು ಮರೆತು ನೀವು ಅಮ್ಮ-ಮಗನ ಹೆಸರು ಹಾಕಿರುವುದು ತಪ್ಪು ಎಂದು ನೆಟ್ಟಿಗರು ಬೇಸರ ವ್ಯಕ್ತ ಪಡಿಸುತ್ತಿದ್ದಾರೆ.

66

ಇನ್ನು ಮೇಘನಾ ರಾಜ್ ಮನೆಯ ಗೃಹಪ್ರವೇಶದಲ್ಲಿ ಕನ್ನಡ ಚಿತ್ರರಂಗದ ಆಪ್ತರು ಮತ್ತು ಕನ್ನಡ ಕಿರುತೆರೆಯ ಆಪ್ತರು ಭಾಗಿಯಾಗಿದ್ದರು. ನೀಲಿ ಬಣ್ಣದ ಸೀರೆಯಲ್ಲಿ ಮೇಘನಾ ಮಿಂಚಿದ್ದಾರೆ. 

Read more Photos on
click me!

Recommended Stories