ಕಾಶ್ಮೀರದಲ್ಲಿ ಲೂಸ್‌ ಮಾದ ಯೋಗಿ, ಸೋನು ಗೌಡ: ಓನ್ಲಿ ಮೀನಿಂಗ್‌, ನೋ ಡಬಲ್‌ ಮೀನಿಂಗ್‌

Published : Nov 13, 2024, 04:41 PM IST

ನನ್ನ ಈ ಹಿಂದಿನ ಚಿತ್ರಗಳಂತೆ ಸಿದ್ಲಿಂಗು 2 ಸಿನಿಮಾದಲ್ಲಿ ಚೇಷ್ಟೆಗಳು ಇರುವುದಿಲ್ಲ. ಓನ್ಲಿ ಮೀನಿಂಗ್‌, ನೋ ಡಬಲ್‌ ಮೀನಿಂಗ್‌. ಇದನ್ನು 6 ವರ್ಷದವರಿಂದ 60 ವರ್ಷದವರೆಗಿನವರು ನೋಡಬಹುದು.

PREV
16
ಕಾಶ್ಮೀರದಲ್ಲಿ ಲೂಸ್‌ ಮಾದ ಯೋಗಿ, ಸೋನು ಗೌಡ: ಓನ್ಲಿ ಮೀನಿಂಗ್‌, ನೋ ಡಬಲ್‌ ಮೀನಿಂಗ್‌

ಕಾಶ್ಮೀರದಲ್ಲಿ ವಿಜಯಪ್ರಸಾದ್‌ ನಿರ್ದೇಶನದ ‘ಸಿದ್ಲಿಂಗು 2’ ಸಿನಿಮಾಕ್ಕೆ ಶೂಟಿಂಗ್‌ ನಡೆಯುತ್ತಿದೆ. ಕಾಶ್ಮೀರದ ಸೋನ ಮಾರ್ಗ್‌ನಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ನಾಯಕ ಯೋಗಿ, ನಾಯಕಿ ಸೋನು ಗೌಡ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ.

26

ಈಗಾಗಲೇ ಬೆಂಗಳೂರು, ಮೈಸೂರುಗಳಲ್ಲಿ ಚಿತ್ರೀಕರಣ ನಡೆದಿದೆ. ಸುಮನ್ ರಂಗನಾಥ್, ಪದ್ಮಜಾ ರಾವ್‌, ಆ್ಯಂಟೋನಿ ಕಮಲ್‌, ಮಹಾಂತೇಶ್ ಮುಖ್ಯ ಪಾತ್ರಗಳಲ್ಲಿದ್ದಾರೆ. ಅನೂಪ್‌ ಸೀಳಿನ್‌ ಸಂಗೀತ ಸಂಯೋಜಿಸಿದ್ದಾರೆ. ಶ್ರೀಹರಿ ರೆಡ್ಡಿ ನಿರ್ಮಾಪಕರು.

36

ಓನ್ಲಿ ಮೀನಿಂಗ್‌, ನೋ ಡಬಲ್‌ ಮೀನಿಂಗ್‌: ‘ನನ್ನ ಈ ಹಿಂದಿನ ಚಿತ್ರಗಳಂತೆ ಸಿದ್ಲಿಂಗು 2 ಸಿನಿಮಾದಲ್ಲಿ ಚೇಷ್ಟೆಗಳು ಇರುವುದಿಲ್ಲ. ಓನ್ಲಿ ಮೀನಿಂಗ್‌, ನೋ ಡಬಲ್‌ ಮೀನಿಂಗ್‌. ಇದನ್ನು 6 ವರ್ಷದವರಿಂದ 60 ವರ್ಷದವರೆಗಿನವರು ನೋಡಬಹುದು’ ಎಂದು ನಿರ್ದೇಶಕ ವಿಜಯ ಪ್ರಸಾದ್‌ ಹೇಳಿದ್ದಾರೆ.

46

‘ಸಿದ್ಲಿಂಗು ರಿಲೀಸ್‌ ಆದಾಗ ಥಿಯೇಟರ್‌ ಖಾಲಿ ಹೊಡೆಯುತ್ತಿತ್ತು. ಅದನ್ನು ನೋವಿನಿಂದ ನೋಡುತ್ತಿದ್ದೆ. ಸಿನಿಮಾ ಟಿವಿಗೆ ಬಂದ ಮೇಲೆ ಜನ ಚಿತ್ರದ ಬಗ್ಗೆ, ಇದರಲ್ಲಿ ಬರುವ ಚೇಷ್ಟೆಗಳ ಬಗ್ಗೆ ಮಾತನಾಡಿದರು. ಚೇಷ್ಟೆ ಹೆಚ್ಚು ಕ್ಲಿಕ್‌ ಆಗುತ್ತೆ ಅಂದುಕೊಂಡು ಮುಂದಿನ ಸಿನಿಮಾಗಳಲ್ಲಿ ಅವನ್ನು ಹೈಲೈಟ್‌ ಮಾಡತೊಡಗಿದೆ. ಆದರೆ ತೋತಾಪುರಿ ಸಿನಿಮಾದಲ್ಲಿ ಚೇಷ್ಟೆಗಳೇ ಹೆಚ್ಚಾಗಿ ತಲುಪಬೇಕಾದ ಅಂಶ ಜನರನ್ನು ತಲುಪಲಿಲ್ಲ. 

56

ಇದಕ್ಕೆ ಬೇಸರವಿದೆ. ಇದೆಲ್ಲದಕ್ಕೆ ನಾನು ಪ್ರೇಕ್ಷಕರಲ್ಲಿ ಕ್ಷಮೆ ಕೇಳುತ್ತೇನೆ. ನನ್ನಿಂದ ತಪ್ಪಾಗಿದೆ. ತಿದ್ದಿಕೊಳ್ಳಲು ಅವಕಾಶ ಕೊಡಿ. ಈ ಚಿತ್ರದಲ್ಲಿ ಯೋಗಿ, ಸುಮನ್‌ ರಂಗನಾಥ್‌, ಆಂಟೊನಿ ಕಮಲ್‌ ಪಾತ್ರಗಳ ಮುಂದುವರಿಕೆ ಇರುತ್ತದೆ’ ಎಂದು ಅವರು ಹೇಳಿದರು.
 

66

ನಾಯಕ ಲೂಸ್‌ ಮಾದ ಯೋಗಿ, ‘ಹನ್ನೆರಡು ವರ್ಷಗಳ ನಂತರ ಸಿದ್ಲಿಂಗು ಎರಡನೇ ಭಾಗ ಬರುತ್ತಿರುವುದಕ್ಕೆ ಖುಷಿ ಇದೆ. ಮಾರ್ಕೆಟ್ಟೇ ಇಲ್ಲದ ನನ್ನನ್ನೂ ನಿರ್ದೇಶಕ ವಿಜಯ ಪ್ರಸಾದ್‌ ಅವರನ್ನೂ ನಂಬಿ ದುಡ್ಡು ಹಾಕಿದ ನಿರ್ಮಾಪಕರ ಧೈರ್ಯಕ್ಕೆ ಖುಷಿ ಇದೆ. ಚಿತ್ರ ಈ ವರ್ಷವೇ ರಿಲೀಸ್‌ ಆಗುತ್ತೆ’ ಎಂದರು.

Read more Photos on
click me!

Recommended Stories