Actor Shiva Rajkumar Son in Law Dileep: ನಟ ಶಿವರಾಜ್‌ಕುಮಾರ್ ಅವರ ಮೊದಲ ಮಗಳು ನಿರುಪಮಾ ಕೂಡ ಟಾಕ್ಟರ್, ಅವರ ಪತಿ ದಿಲೀಪ್ ಕೂಡ ಡಾಕ್ಟರ್. ರ್ಯಾಪಿಡ್ ರಶ್ಮಿ ಯುಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ದಿಲೀಪ್ ಅವರು ಪತ್ನಿ, ಮಾವ ಶಿವರಾಜ್‌ಕುಮಾರ್ ಬಗ್ಗೆ ಮಾತನಾಡಿದ್ದಾರೆ.
ದಿಲೀಪ್ ತಂದೆ ಮಂಜೇಗೌಡ. ಬೆಂಗಳೂರು ಬಿಡಿಎಯಲ್ಲಿ ತಂದೆ ಕೆಲಸ ಮಾಡುತ್ತಿದ್ದರು, ಇವರ ಅಣ್ಣನ ಮಾನಸಿಕ ಆರೋಗ್ಯ ಚೆನ್ನಾಗಿಲ್ಲ. ಹೀಗಾಗಿ ಕುಟುಂಬದಲ್ಲಿ ದಿಲೀಪ್ ಅವರನ್ನು ಡಾಕ್ಟರ್ ಮಾಡಬೇಕು ಎಂದುಕೊಂಡಿದ್ದರು. ಇವರು ಮೈಸೂರಿನವರು.
25
ನಿರುಪಮಾ, ದಿಲೀಪ್ ಪರಿಚಯ ಹೇಗಾಯ್ತು?
ಬೆಂಗಳೂರಿನ ವೈದೇಹಿ ಕಾಲೇಜಿನಲ್ಲಿ ದಿಲೀಪ್ ಓದಿದ್ದರು, ಅಲ್ಲಿಯೇ ನಿರುಪಮಾ ಕೂಡ ಓದುತ್ತಿದ್ದರು. ಅಲ್ಲೇ ಇವರಿಬ್ಬರ ಪರಿಚಯ ಆಗಿತ್ತು. ಇವರಿಬ್ಬರು ಎಂಟು ವರ್ಷಗಳ ಕಾಲ ಪ್ರೀತಿ ಮಾಡಿದ್ದರು.
ನಿರುಪಮಾ ಉತ್ತಮ ವಿದ್ಯಾರ್ಥಿನಿಯಾಗಿದ್ದರು, ನಾನು ಎವರೇಜ್ ವಿದ್ಯಾರ್ಥಿ. ಓದಿನ ವಿಚಾರದಲ್ಲಿ ನಿರುಪಮಾ ತುಂಬ ಸಹಾಯ ಮಾಡಿದ್ದರು. ನಿರುಪಮಾ ನೋಟ್ಸ್ ಓದಿ ನಾನು ಪಾಸ್ ಆದೆ ಎಂದು ದಿಲೀಪ್ ಹೇಳಿದ್ದಾರೆ.
35
ನಿರುಪಮಾರನ್ನು ಲವ್ ಮಾಡಿದ್ದಕ್ಕೆ ಭಯ ಇತ್ತು
ಶಿವರಾಜ್‌ಕುಮಾರ್ ಅವರ ಮಗಳು ಎನ್ನೋದು ಭಯ ಇತ್ತು, ಆಮೇಲೆ ಅವಳನ್ನು ನಾನು ಖುಷಿಯಾಗಿ ಇಟ್ಟುಕೊಳ್ಳಬಹುದಾ ಎಂಬ ಭಯ ಇತ್ತು. ಈ ಭಯ ಈಗಲೂ ಆಗಿದೆ. ಎಂಎಸ್ ಎರಡನೇ ವರ್ಷ ನಾವು ಎಂಗೇಜ್ ಆದೆವು. ಶಿವರಾಜ್‌ಕುಮಾರ್ ಅವರ ಮನೆಯಲ್ಲಿ ಹೇಳೋದು, ಅವರು ಒಪ್ಪಿಕೊಳ್ಳೋದು ಕಷ್ಟ ಎಂದು ಭಾವಿಸಿದ್ದೆವು, ಆದರೆ ಅಷ್ಟು ಕಷ್ಟ ಆಗಿರಲಿಲ್ಲ. ಮೈಸೂರಿನಲ್ಲಿ ನಾವು ಓದುತ್ತಿರುವಾಗಲೇ ಅವರು ಓಕೆ ಮಾಡಿದರು, ಆಮೇಲೆ ಆರು ತಿಂಗಳಿಗೆ ಎಂಗೇಜ್ ಆದೆವು ಎಂದು ದಿಲೀಪ್ ಹೇಳಿದ್ದಾರೆ.
2015ರಲ್ಲಿ ಅದ್ದೂರಿಯಾಗಿ ಮದುವೆ ನಡೆಯಿತು. ಅಂದಹಾಗೆ ನಿರುಪಮಾ ಅವರ ಆರೋಗ್ಯಕ್ಕೆ ಏನಾಗಿತ್ತು ಎಂದು ದಿಲೀಪ್ ಅವರು ಹೇಳಿಲ್ಲ. ಇನ್ನು ಕಳೆದ ಐದು ವರ್ಷದಿಂದ ಶಿವರಾಜ್‌ಕುಮಾರ್ ಮನೆಯಲ್ಲಿಯೇ ದಿಲೀಪ್, ನಿರುಪಮಾ ಕೂಡ ವಾಸವಿದ್ದಾರಂತೆ.
ಮೈಸೂರಿನಲ್ಲಿ ಪ್ರಾಕ್ಟೀಸ್ ಮಾಡೋಣ ಎಂದುಕೊಂಡೆವು. ಆದರೆ ನಾವು ಅಂದುಕೊಂಡಂತೆ ಆಗಲಿಲ್ಲ. ಕೆಲವು ಕಾರಣಗಳಿಗೆ ನಾವು ಬೆಂಗಳೂರಿನಲ್ಲಿ ಉಳಿದುಕೊಳ್ಳುವ ಹಾಗೆ ಆಯ್ತು. ಆಗ ನಾನು ಸರ್ಜನ್ ಆದರೆ ಸಾಕು ಅನಿಸ್ತಿತ್ತು, ನ್ಯೂರೋಲಜಿ ಮಾಡಬೇಕು ಅನಿಸಿತು, ಉತ್ತಮ ಜೀವನ ಇದ್ದರೆ ಸಾಕು ಅಂತೆಲ್ಲ ಅನಿಸ್ತಿತ್ತು. ಪತ್ನಿ ಆರೋಗ್ಯ ಹಾಳಾಗಿದ್ದಕ್ಕೆ ಒಂದೂವರೆ ವರ್ಷ ನಾನು ಪ್ರಾಕ್ಟೀಸ್ ನಿಲ್ಲಿಸಿದ್ದೆ, ಆಗ ನನಗೆ ಪತ್ನಿ ಆರೋಗ್ಯ ಚೆನ್ನಾಗಿರಲಿ ಎಂದುಕೊಂಡೆ. ಪತ್ನಿ ಆರೋಗ್ಯ ಹಾಳಾದಾಗ, ದಿನ ಕಳೆಯೋದು ಕಷ್ಟ ಆಗುತ್ತಿತ್ತು, ಯಾರಿಗೂ ಏನೂ ಹೇಳೋಕೆ ಆಗುತ್ತಿರಲಿಲ್ಲ, ಸ್ನೇಹಿತರಿಂದ ದೂರ ಆಗಿದ್ದೆ ಎಂದು ದಿಲೀಪ್ ಹೇಳಿದ್ದಾರೆ.
55
ಮಾವನಾಗಿ ಶಿವರಾಜ್‌ಕುಮಾರ್
ಶಿವರಾಜ್‌ಕುಮಾರ್ ಅವರು ನನಗೆ ಮಾವ, ಕಂಫರ್ಟ್ ಲೆವೆಲ್ ನೀಡಿದ್ದಾರೆ. ಏನು ಬೇಕಿದ್ರೂ ಹೇಳಿಕೊಳ್ಳಬಹುದು, ನಾನು ಅವರನ್ನು ಅಂಕಲ್ ಎಂದು ಕರೆಯುತ್ತೇನೆ. ನಾವು ಕುಟುಂಬದ ವಿಷಯ ಬಿಟ್ಟು ಬೇರೆ ವಿಷಯಗಳನ್ನು ಚರ್ಚೆ ಮಾಡೋದಿಲ್ಲ. ನನಗೆ ಗೊತ್ತಿಲ್ಲದ ವಿಷಯವನ್ನು ನಾನು ಮಾತನಾಡೋದಿಲ್ಲ ಎಂದು ದಿಲೀಪ್ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.