Ramesh Aravind: ಯಲ್ಲಾಪುರದಲ್ಲಿ ಶಿವಾಜಿಯ ಚಾರಣ: ಹೊಸ ಫೋಟೋ ಹಂಚಿಕೊಂಡ ರಮೇಶ್

First Published | Feb 20, 2022, 8:56 PM IST

ಸ್ಯಾಂಡಲ್‌ವುಡ್‌ ನಟ ರಮೇಶ್‌ ಅರವಿಂದ್‌ ವೃತ್ತಿ ಬದುಕಿಗೆ ದೊಡ್ಡ ತಿರುವು ಕೊಟ್ಟ 'ಅಮೃತವರ್ಷಿಣಿ' ಸಿನಿಮಾ ಬಿಡುಗಡೆಯಾಗಿ 25 ವರ್ಷ ಕಳೆದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಸಂತಸವನ್ನು ಹಂಚಿಕೊಂಡಿದ್ದರು. ಇದೀಗ ಅವರ ನಟನೆಯ 'ಶಿವಾಜಿ ಸುರತ್ಕಲ್‌ 2' ಚಿತ್ರದ ಬಗ್ಗೆ ಹೊಸ ಫೋಟೋವೊಂದನ್ನು ರಮೇಶ್ ಶೇರ್ ಮಾಡಿಕೊಂಡಿದ್ದಾರೆ.

ರಮೇಶ್​ ಅರವಿಂದ್ (Ramesh Aravind) ಅಭಿನಯದ 'ಶಿವಾಜಿ ಸುರತ್ಕಲ್ 2' (Shivaji Surathkal 2) ಚಿತ್ರದ  ಮುಹೂರ್ತ ಇತ್ತೀಚೆಗಷ್ಟೇ ನಡೆದಿದ್ದು, ಚಿತ್ರದ ಚಿತ್ರೀಕರಣ ಕೂಡಾ ಪ್ರಾರಂಭವಾಗಿತ್ತು. 

'ಶಿವಾಜಿ ಸುರತ್ಕಲ್ 2' ಚಿತ್ರವು  'ಶಿವಾಜಿ ಸುರತ್ಕಲ್'ನ ಮುಂದುವರೆದ ಭಾಗವಾಗಿದ್ದು, 2020ರಲ್ಲಿ ಈ ಸಿನಿಮಾ ಬಿಡುಗಡೆಯಾಗಿ ಸಿನಿರಸಿಕರಿಂದ ಭರ್ಜರಿ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು. ರಮೇಶ್ ಈ ಚಿತ್ರದಲ್ಲಿ ಡಿಟೆಕ್ಟಿವ್ (Detective) ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 

Tap to resize

ಇದೀಗ ಮುಂದುವರಿದ ಭಾಗವಾಗಿ 'ಶಿವಾಜಿ ಸುರತ್ಕಲ್ 2' ಚಿತ್ರದಲ್ಲೂ ರಮೇಶ್‌ ಅರವಿಂದ್‌ ಅವರೊಂದಿಗೆ ರಾಧಿಕಾ ನಾರಾಯಣ್‌ (Radhika Narayan), ರಾಘು ರಾಮನಕೊಪ್ಪ, ವಿದ್ಯಾಮೂರ್ತಿ ಸೇರಿದಂತೆ ಮೊದಲ ಪಾರ್ಟ್​ನಲ್ಲಿ ಇದ್ದ ಕಲಾವಿದರೇ ಈ ಚಿತ್ರತಂಡದಲ್ಲಿದೆ. 

ಈ ಚಿತ್ರದಲ್ಲಿ ಡಿಸಿಪಿ ದೀಪಾ ಕಾಮತ್ ಎಂಬ ಪಾತ್ರವನ್ನು ಮೇಘನಾ ಗಾಂವ್ಕರ್ (Meghana Gaonkar)​ ನಿಭಾಯಿಸಲಿದ್ದು, ಬೆಂಗಳೂರು ಸೆಂಟ್ರಲ್ ಕ್ರೈಂ ಬ್ರಾಂಚ್ ಡಿಸಿಪಿಯಾಗಿ, ರಾಕೇಶ್ ಮಯ್ಯ (Rakesh Mayya) ಪೋಲೀಸ್ ಇನ್‌ಸ್ಪೆಕ್ಟರ್ ಪಾತ್ರದಲ್ಲಿ ಹಾಗೂ ಎಂ ನಾಸರ್‌ (Nasser M) ರಮೇಶ್‌ ಅರವಿಂದ್‌ ತಂದೆ, ನಿವೃತ್ತ ಐಜಿ ವಿಜಯೇಂದ್ರ ಸುರತ್ಕಲ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಸದ್ಯ 'ಶಿವಾಜಿ ಸುರತ್ಕಲ್ 2' ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಯಲ್ಲಾಪುರದಲ್ಲಿ ಶೂಟಿಂಗ್ ನಡೆಯುತ್ತಿದೆ. ಈ ಮಧ್ಯೆ ರಮೇಶ್ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹೊಸ ಫೋಟೋವೊಂದನ್ನು ಹಂಚಿಕೊಂಡಿದ್ದು, 'ಯಲ್ಲಾಪುರದಲ್ಲಿ ಶಿವಾಜಿಯ ಚಾರಣ' ಎಂದು ಬರೆದುಕೊಂಡಿದ್ದಾರೆ.

ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ಆಕಾಶ್ ಶ್ರಿವತ್ಸ (Akash Srivatsa) ಅವರು ನಿರ್ದೇಶನ ಮಾಡುತ್ತಿದ್ದಾರೆ. ರೇಖಾ ಕೆ.ಎನ್. ಮತ್ತು ಅನುಪ್ ಗೌಡ ನಿರ್ಮಾಣ ಮಾಡುತ್ತಿದ್ದಾರೆ. 'ಶಿವಾಜಿ ಸುರತ್ಕಲ್'ಗೆ 'ಕೇಸ್​ ಆಫ್​ ಮಾಯಾವಿ' (The Mysterious Case of Mayavi) ಎಂಬ ಟ್ಯಾಗ್​ಲೈನ್​ ಇದ್ದು, ಹಲವು ಗೆಟಪ್​ಗಳಲ್ಲಿ ರಮೇಶ್​ ಅರವಿಂದ್​ ಕಾಣಿಸಿಕೊಳ್ಳಲಿದ್ದಾರೆ. 

Latest Videos

click me!