Karnataka Ratna Award ಅಶ್ವಿನಿ ಪುನೀತ್ -ರಾಘವೇಂದ್ರ ರಾಜ್‌ಕುಮಾರ್‌ಗೆ ಸರ್ಕಾರದಿಂದ ಅಧಿಕೃತ ಅಹ್ವಾನ

Published : Oct 31, 2022, 04:23 PM IST

ನವೆಂಬರ್ 1 ನಡೆಯುವ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕೆ ಅಶ್ವಿನಿ ಮತ್ತು ರಾಘವೇಂದ್ರ ರಾಜ್‌ಕುಮಾರ್ ಕುಟುಂಬನ್ನು ಸರ್ಕಾರದ ಪರವಾಗಿ ಸಚಿವರು ಆಹ್ವಾನಿಸಿದ್ದಾರೆ. 

PREV
16
Karnataka Ratna Award ಅಶ್ವಿನಿ ಪುನೀತ್ -ರಾಘವೇಂದ್ರ ರಾಜ್‌ಕುಮಾರ್‌ಗೆ ಸರ್ಕಾರದಿಂದ ಅಧಿಕೃತ ಅಹ್ವಾನ

ನವೆಂಬರ್ 1 ಸಂಜೆ 4 ಗಂಟೆಗೆ ವಿಧಾನ ಸೌಧದ ಮುಂಭಾಗದಲ್ಲಿ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ  ಸಮಾರಂಭ  ನಡೆಯುತ್ತಿದೆ.. ಬಳಿಕ 5.30ರಿಂದ 6.30ರವರೆಗೆ ಸಾಂಸ್ಕೃತಿ ಕಾರ್ಯಕ್ರಮಗಳು ನಡೆಯಲಿದೆ. ಈಗಾಗಲೇ ಕಾರ್ಯಕ್ರಮಕ್ಕೆ ಬಿಗಿ ಪೋಲೀಸ್ ಬಂದೋಬಸ್ತ್ ಮಾಡಲಾಗಿದೆ.

26

ನವೆಂಬರ್‌ 1 ರಂದು ರಾಜ್ಯದ ಜನತೆಯ ಪ್ರೀತಿಯ ಅಪ್ಪುವಿಗೆ ನವೆಂಬರ್‌ 1 ರಂದು ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟರಾದ ಜೂನಿಯರ್‌ ಎನ್‌ಟಿಆರ್‌ ಹಾಗೂ ರಜನಿಕಾಂತ್‌ ಅವರಿಗೆ ಆಹ್ವಾನ ನೀಡಲಾಗಿದ್ದು, ಅವರು ಮುಖ್ಯ ಅತಿಥಿಗಳಾಗಿ ಬರುತ್ತಿದ್ದಾರೆ. 

36

ಸರ್ಕಾರದ ಪರವಾಗಿ ಡಾ.ಪುನೀತ್ ರಾಜ್‌ಕುಮಾರ್ ಕುಟುಂಬಕ್ಕೆ ಅಧಿಕೃತ ಆಹ್ವಾನವನ್ನು ಕನ್ನಡ ಸಂಸ್ಕೃತಿ ಇಲಾಖೆ ಸಚುವ ಸುನಿಲ್ ಕುಮಾರ್, ಕಂದಾಯ ಸಚಿವ  ಆರ್ ಅಶೋಕ್ ನೀಡಿದ್ದಾರೆ.

46

'ಇವತ್ತು ಪುನೀತ್ ರಾಜ್‌ಕುಮಾರ್‌ ನಮ್ಮ ಜೊತೆಗಿಲ್ಲ. ಸರ್ಕಾರದಿಂದ ಅವರಿಗೆ ನೀಡಲಾಗುವ ಕರ್ನಾಟಕ ರತ್ನ ಪ್ರಶಸ್ತಿಯನ್ನು ಅವರ ಪತ್ನಿ ಆಶ್ವಿನಿ ಸ್ವೀಕಾರ ಮಾಡಲಿದ್ದಾರೆ' ಎಂದು ಆರ್‌ ಅಶೋಕ್ ಮಾತನಾಡಿದ್ದಾರೆ.

56

 'ರಾಜ್‌ಕುಮಾರ್ ಕುಟುಂಬ ಒಟ್ಟು ಐವತ್ತು ಜನ ವೇದಿಕೆ ಮೇಲೆ ಇರಲಿದ್ದಾರೆ. ಸರ್ಕಾರದ ಪರವಾಗಿ ಆಹ್ವಾನ ನೀಡಲು ನಾನು ಮತ್ತು ಸುನೀಲ್ ಕುಮಾರ್ ಬಂದಿದ್ದೇವೆ'

66

'ಕಾರ್ಯಕ್ರಮಕ್ಕೆ ರಜನಿಕಾಂತ್ ಮತ್ತು ಜ್ಯೂನಿಯರ್ ಎನ್‌ಟಿಆರ್‌ ಅವರಿಗೆ ಆಹ್ವಾನ ಮಾಡಿದ್ದೇವೆ. ನವೆಂಬರ್ 1ರಂದು ನಾಲ್ಕು ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ' ಎಂದಿದ್ದಾರೆ.

Read more Photos on
click me!

Recommended Stories