ಜೈಲಿನಿಂದ Darshan Thoogudeepa ರಿಲೀಸ್‌ ಆಗೋ ವಿಷಯ; ಮಹತ್ವದ ಹೇಳಿಕೆ ಕೊಟ್ಟ ಹೊಸ CM ಡಿಕೆ ಶಿವಕುಮಾರ್!

Published : Jun 08, 2026, 03:58 PM IST

Actor Darshan Thoogudeepa: ನಟ ದರ್ಶನ್‌ ತೂಗುದೀಪ ಅವರು ಜೈಲಿನಲ್ಲಿದ್ದಾರೆ. ಈಗ ಕನಕಪುರದ ಕುರುಬರಹಳ್ಳಿಗೆ ಸಿಎಂ ಡಿಕೆ ಶಿವಕುಮಾರ್‌ ಭೇಟಿ ನೀಡಿದ್ದರು. ಆ ವೇಣೆ ದರ್ಶನ್‌ ಅಭಿಮಾನಿಗಳು ‘ಡಿ ಬಾಸ್’‌, ‘ಡಿ ಬಾಸ್’‌ ಎಂದು ಕೂಗಿ, ಮನವಿ ಮಾಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.  

PREV
13
ಕನಕಪುರಕ್ಕೆ ಹೋಗಿದ್ರು

ಹೌದು, ಸಿಎಂ ಆದ್ಮೇಲೆ ಡಿಕೆ ಶಿವಕುಮಾರ್‌ ಅವರು ಜೀರೋ ಟ್ರಾಫಿಕ್‌ ಬಿಟ್ಟು, ಮೆಟ್ರೋದಲ್ಲಿ ಒಂದಿಷ್ಟು ಕಿಮೀ ಹೋಗಿ, ಆ ಬಳಿಕ ಕನಕಪುರಕ್ಕೆ ಹೋಗಿದ್ದರು. ಆ ವೇಳೆ ಅವರಿಗೆ ಮೆಣಸು, ಬೆಳ್ಳುಳ್ಳಿ, ಸೇಬು ಹಣ್ಣಿನ ಹಾರ ಕೂಡ ಹಾಕಲಾಗಿತ್ತು.

23
ಮನವಿ ಮಾಡಿದ್ರು

ತಮ್ಮ ಸ್ವಕ್ಷೇತ್ರ ಕನಕಪುರದಲ್ಲಿ ಅವರು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದರು, ಒಂದಿಷ್ಟು ಯೋಜನೆಗಳ ಬಗ್ಗೆ ಕೂಡ ಹೇಳಿಕೊಂಡರು. ಆಗ ಅಲ್ಲಿದ್ದ ದರ್ಶನ್‌ ಅಭಿಮಾನಿಗಳು “ಜೈ ಡಿ ಬಾಸ್”‌, “ಜೈ ಡಿ ಬಾಸ್” ಎಂದು ಹೇಳಿದ್ದಾರೆ. “ದರ್ಶನ್‌ ಅವರನ್ನು ಬಿಡಿಸಿ” ಎಂದು ಅವರು ಮನವಿ ಮಾಡಿದ್ದಾರೆ.

33
ಡಿಕೆ ಶಿವಕುಮಾರ್‌ ರಿಯಾಕ್ಷನ್‌ ಏನು?

ದರ್ಶನ್‌ ಅಭಿಮಾನಿಗಳ ಮಾತು ಕೇಳಿ ಡಿಕೆಶಿ ಅವರು, “ಯಾವ್ ಬಾಸೂ ಇಲ್ಲ, ಸುಮ್ನಿರಯ್ಯ” ಎಂದು ಹೇಳಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. ಒಮ್ಮೆ ಜಾಮೀನು ಪಡೆದು, ದರ್ಶನ್‌ ಮತ್ತೆ ಜೈಲಿಗೆ ಬಂದು ಒಂದು ವರ್ಷವಾಗಿದೆ. ಅವರು ಯಾವಾಗ ಹೊರಗಡೆ ಬರ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories