RRನಗರದಲ್ಲಿ ಸಿನಿಮಾ-ಸೀರಿಯಲ್‌ನವರು ಇದ್ದಾರೆ, ಇಲ್ಲಿ ತಾಯಿ ಆಶೀರ್ವಾದವಿದೆ ಪಾಸಿಟಿವ್ ಫೀಲ್‌ ಸಿಗುತ್ತದೆ: ಪವಿತ್ರಾ ಗೌಡ

Published : Jun 22, 2024, 06:13 PM IST

ಆರ್‌ಆರ್‌ ನಗರದಲ್ಲಿ ಆ ತಾಯಿ ಶಕ್ತಿ ಇದೆ ಇಲ್ಲಿ ಪಾಸಿಟಿವ್ ವೈಬ್‌ ಇದೆ ಎಂದು ಅಂಗಡಿ ಓಪನ್ ಮಾಡಿದ ಪವಿತ್ರಾ ಗೌಡ...ಹಳೆ ವಿಡಿಯೋ ವೈರಲ್.....  

PREV
19
RRನಗರದಲ್ಲಿ ಸಿನಿಮಾ-ಸೀರಿಯಲ್‌ನವರು ಇದ್ದಾರೆ, ಇಲ್ಲಿ ತಾಯಿ ಆಶೀರ್ವಾದವಿದೆ ಪಾಸಿಟಿವ್ ಫೀಲ್‌ ಸಿಗುತ್ತದೆ: ಪವಿತ್ರಾ ಗೌಡ

ನಟಿ ಹಾಗೂ ಮಾಡಲ್ ಆಗಿದ್ದ ಪವಿತ್ರಾ ಗೌಡ ಹಲವು ವರ್ಷಗಳ ಹಿಂದೆ ರಾಜರಾಜೇಶ್ವರಿ ನಗರದಲ್ಲಿ ತಮ್ಮದೇ ಫ್ಯಾಷನ್ ಬೋಟಿಕ್ ಸ್ಟುಡಿಯೋ ಓಪನ್ ಮಾಡಿದ್ದರು. ಸಿನಿಮಾ ಸ್ಟಾರ್‌ಗಳು ಸಪೋರ್ಟ್‌ ಆಗಿ ಬಂತು ಓಪನ್ ಮಾಡಿದ್ದರು.

29

ಓಪನಿಂಗ್ ಸಮಯದಲ್ಲಿ ಈ ಫ್ಯಾಷನ್ ಸ್ಟುಡಿಯೋ ಬಗ್ಗೆ ಪವಿತ್ರಾ ಗೌಡ ಮಾತನಾಡಿರುವ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ನಂತರ ಹಲವು ಹಳೆ ವಿಡಿಯೋಗಳು ವೈರಲ್ ಆಗುತ್ತಿದೆ.

39

ಡ್ರೆಸಿಂಗ್ ಮಾಡುವುದು ನನ್ನ ಪ್ಯಾಷನ್, ಇವತ್ತು ಒಂಡು ರೀತಿ ರೆಡಿಯಾಗಿದ್ದರೆ ನಾಳೆ ಮತ್ತೊಂದು ರೀತಿ ರೆಡಿಯಾಗಿರುತ್ತೀನಿ. ಒಂದೇ ಪ್ಯಾಟರನ್‌ನಲ್ಲಿ ರೆಡಿಯಾಗುವುದಕ್ಕೆ ಇಷ್ಟವಿಲ್ಲ.

49


ನನ್ನ ಬಳಿ ಬಂದು ಪವಿತ್ರಾ ನಾನು ಡಿಫರೆಂಟ್ ಆಗಿ ಕಾಣಿಸಬೇಕು ಎಂದು ಹೇಳಿದರೆ ನಿಮ್ಮ ಬಾಡಿ, ನಿಮ್ಮ ಫೇಮ್‌ ನಿಮ್ಮ ಕಲರ್‌ ನೋಡಿಕೊಂಡು ಸೂಕ್ತವಾಗಿ ಡಿಸೈನ್ ಮಾಡುತ್ತೀನಿ. 

59


ನಾನು ಸೀರೆ ಧರಿಸಿದರು ಕೂಡ ಏನಾದರೂ ಡಿಫರೆಂಟ್ ಡಿಸೈನ್ ಟ್ರೈ ಮಾಡುತ್ತೀನಿ. 7ನೇ ಕ್ಲಾಸ್‌ನಲ್ಲಿ ಇದ್ದಾಗಿನಿಂದಲೂ ನನಗೆ ಡ್ರೆಸಿಂಗ್ ಅಂದ್ರೆ ತುಂಬಾನೇ ಇಷ್ಟವಾಗುತ್ತದೆ ಎಂದು ಖಾಸಗಿ ಸಂದರ್ಶನದಲ್ಲಿ ಪವಿತ್ರಾ ಗೌಡ ಮಾತನಾಡಿದ್ದರು.

69

ಬಾಲ್ಯದಲ್ಲಿ ಅಮ್ಮನ ಸೀರೆಯಿಂದ ಡ್ರೆಸ್ ಮಾಡಿಕೊಳ್ಳುವುದು...ಹೀಗೆ ಏನಾದರೂ ಒಂದು ಟ್ರೈ ಮಾಡುತ್ತಲೇ ಇರುತ್ತೀನಿ. ಒಂದು ದುಪಟಾದಲ್ಲಿ ಏನ್ ಏನೋ ಸ್ಟೈಲ್ ಮಾಡುತ್ತಿದ್ದೆ.

79

ಆರ್‌ಆರ್‌ ನಗರದಲ್ಲಿ ಯಾಕೆ ನನ್ನ ಅಂಗಡಿ ಓಪನ್ ಮಾಡಿದ್ದು ಅಂದ್ರೆ ಇಲ್ಲ ಸಿನಿಮಾ ತಾರೆಯರಿದ್ದಾರೆ, ಸೀರಿಯಲ್ ಆರ್ಟಿಸ್ಟ್‌ಗಳು ಇಲ್ಲದಾರೆ ಹಾಗೂ ಎಲ್ಲಾ ವರ್ಗಕ್ಕೂ ಸೇರಿದ ಜನರಿದ್ದಾರೆ ಎಂದು ಈ ಜಾಗದಲ್ಲಿ ಓಪನ್ ಮಾಡಿದ್ದು.

89

 ನನ್ನ ಮನೆಗೆ ತುಂಬಾನೇ ಹತ್ತಿರವಿದೆ, ನನ್ನ ಮೊದಲ ವೆಂಚರ್‌ನ ನನ್ನ ಏರಿಯಾದಲ್ಲಿ ಶುರು ಮಾಡಬೇಕು ಅನ್ನೋದು ನನ್ನ ಆಸೆ ಆಗಿತ್ತು. ಇಲ್ಲಿ ಆ ತಾಯಿ ದೇವಸ್ಥಾನವಿದೆ ಒಂದು ದೊಡ್ಡ ಶಕ್ತಿ ಇದೆ ಒಂದು ಪಾಸಿಟಿವ್ ಫೀಲ್ ಇದೆ.

99

ಒಂದು ಕುಟುಂಬದವರು ಮದುವೆಗೆ ಬಟ್ಟೆ ತೆಗೆಯಬೇಕು ಅಂದ್ರೆ ಅವರಿಗೆ ಇಲ್ಲಿ ಸಂಪೂರ್ಣವಾಗಿ ಪ್ರತಿಯೊಂದು ಸಿಗುತ್ತದೆ. ಬಂದು ಒಮ್ಮೆ ನೋಡಿದರೂ ಅವರಿಗೆ ಇಷ್ಟ ಆಗುವ ರೀತಿಯಲ್ಲಿ ಡಿಸೈನ್ ಮಾಡಿದ್ದೀನಿ ಎಂದು ಪವಿತ್ರಾ ಹೇಳಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories