ಪವಿತ್ರಾ ಗೌಡಗೆ ಮೊದಲ ಸಿನಿಮಾ ಆಫರ್ ಸಿಕ್ಕಿದ್ದು ಹೇಗೆ? ಸಂಭಾವನೆ ಕುರಿತು ನಿರ್ದೇಶಕ ಬಿಚ್ಚಿಟ್ಟ ರಹಸ್ಯ!

Published : Jun 21, 2024, 03:27 PM IST

ನಟ ದರ್ಶನ್ ಗ್ಯಾಂಗ್ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಕುರಿತು ಕೆಲ ರೋಚಕ ಮಾಹಿತಿಗಳನ್ನು ನಿರ್ದೇಶಕ ವಿಶಾಲ್ ಬಹಿರಂಗಪಡಿಸಿದ್ದಾರೆ. ಪವಿತ್ರಾಗೆ ಸಿನಿಮಾ ಆಫರ್ ಸಿಕ್ಕಿದ್ದೇ ಒಂದು ರೋಚಕ ಘಟನೆ. ಇಷ್ಟೇ ಅಲ್ಲ ಆಕೆ ಮೊದಲ ಸಿನಿಮಾಗೆ ಪಡೆದ ಸಂಭಾವನೆ ಕೂಡ ಬಹಿರಂಗಪಡಿಸಿದ್ದಾರೆ.

PREV
18
ಪವಿತ್ರಾ ಗೌಡಗೆ ಮೊದಲ ಸಿನಿಮಾ ಆಫರ್ ಸಿಕ್ಕಿದ್ದು ಹೇಗೆ? ಸಂಭಾವನೆ ಕುರಿತು ನಿರ್ದೇಶಕ ಬಿಚ್ಚಿಟ್ಟ ರಹಸ್ಯ!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ನಟ ದರ್ಶನ್ ಹಾಗೂ ಗ್ಯಾಂಗ್‌ನ ಕ್ರೂರ ಕೃತ್ಯಗಳು ಒಂದೊಂದಾಗಿ ಹೊರಬರುತ್ತಿದೆ. ಎ1 ಆರೋಪಿ ಪವಿತ್ರಾ ಗೌಡ ಆಸ್ತಿ ನೋಡಿ ಹಲವರು ಹೌಹಾರಿದ್ದಾರೆ. ಚಿತ್ರರಂಗದಲ್ಲಿ ಪವಿತ್ರಾ ಗೌಡ ಆರಂಭಿಕ ದಿನಗಳ ಕುರಿತು ನಿರ್ದೇಶಕ ವಿಶಾಲ್(ಉಮೇಶ್ ಗೌಡ) ಸ್ಫೋಟಕ ಮಾಹಿತಿ ತೆರೆದಿಟ್ಟಿದ್ದಾರೆ. 

28

2013ರಲ್ಲಿ ವಿಶಾಲ್ ನಿರ್ದೇಶನದ ಅಗಮ್ಯ ಚಿತ್ರ ತೆರೆಕಂಡಿತ್ತು. ಇದು ಪವಿತ್ರಾ ಗೌಡ ಅಭಿನಯಿಸಿದ ಮೊದಲ ಚಿತ್ರ. ಈ ಚಿತ್ರದ ನಾಯಕಿ ಹುಡುಕಾಟ, ಆಯ್ಕೆಯಲ್ಲಿ ಪವಿತ್ರಾ ಗೌಡ ಹೆಸರೇ ಇರಲಿಲ್ಲ. 
 

38

ವಿಶಾಲ್ ಹಲವು ನಟಿಯರನ್ನು ಸಂಪರ್ಕಿಸಿದ್ದರು. ಆದರೆ ಎಲ್ಲರ ಬಜೆಟ್ ಹೆಚ್ಚಾಗಿತ್ತು. ಕಡಿಮೆ ಬಂಡವಾಳದ ಚಿತ್ರವಾಗಿರುವ ಕಾರಣ ಯಾರೂ ಒಪ್ಪಿಲ್ಲ. ಕೆಲವರು ಬಜೆಟ್ ಕೊಂಚ ಜಾಸ್ತಿ ಕೇಳಿದರೂ ಅವರಿಗೆ ಡೇಟ್ ಇರಲಿಲ್ಲ. ಹೀಗಾಗಿ ಕೊನೆಗೆ ಪವಿತ್ರಾ ಗೌಡಗೆ ಆಫರ್ ನೀಡಲಾಯಿತು

48

ಪವಿತ್ರಾ ಗೌಡಗೆ ನಟನೆ ಬರುತ್ತಿರಲಿಲ್ಲ. ಆದರೆ ನಮ್ಮ ನಾಯಕಿ ಬಜೆಟ್ ಕೇವಲ 20 ಸಾವಿರ. ಪವಿತ್ರಾ ನಟನೆಗೆ ನಾನು ರೋಸಿ ಹೋಗಿದ್ದೆ. ಹಲವು ಬಾರಿ ಗದರಿದ್ದೇನೆ. ಬೇರೆ ನಾಯಕಿ ಇಲ್ಲದ ಕಾರಣ ಪವಿತ್ರಾ ಗೌಡ ನಟಿಸಿದರು. 20,000 ರೂಪಾಯಿ ಸಂಭಾವನೆ ನೀಡಿದ್ದೇನೆ ಎಂದು ವಿಶಾಲ್ ಹೇಳಿದ್ದಾರೆ.
 

58

2011ರಲ್ಲಿ ಶೂಟಿಂಗ್ ಶುರು ಮಾಡಿದ್ದೇವು. ಕೋಣನಕುಂಟೆಯಲ್ಲಿ 1ಬಿಹೆಚ್‌ಕೆ ಬಾಡಿಗೆ ಮನೆಯಲ್ಲಿದ್ದ ಪವಿತ್ರಾ ಆಟೋ, ಬಸ್ ಮೂಲಕ ಶೂಟಿಂಗ್‌ಗೆ ಆಗಮಿಸುತ್ತಿದ್ದರು ಎಂದು ವಿಶಾಲ್ ಹೇಳಿದ್ದಾರೆ.

68

ಸಿನಿಮಾ ಸದ್ದು ಮಾಡಲಿಲ್ಲ. ಆದರೆ ಒಂದೇ ಸಿನಿಮಾ ಪವಿತ್ರಾ ಗೌಡ ಬದುಕನ್ನೇ ಬದಲಾಯಿಸಿತು. ಯಾವಾಗ ದರ್ಶನ್ ಸಂಪರ್ಕ ಬೆಳೆಯಿತೋ ಗೊತ್ತಿಲ್ಲ. ಕೆಲ ದಿನಗಳಲ್ಲೇ ಪವಿತ್ರಾ ಮಿನಿ ಕೂಪರ್ ಕಾರಿನಲ್ಲಿ ಓಡಾಡಲು ಆರಂಭಿಸಿದ್ದಳು. ಜೆಪಿ ನಗರದಲ್ಲಿ ಮನೆ ಮಾಡಿದ್ದಳು ಎಂದು ವಿಶಾಲ್ ಹೇಳಿದ್ದಾರೆ.

78

ಆರ್‌ಆರ್ ನಗರದಲ್ಲಿ ಪವಿತ್ರಾ ಗೌಡ ಮೂರು ಅಂತಸ್ತಿನ ಮನೆ ಹೊಂದಿದ್ದಾರೆ. ರೇಂಜ್ ರೋವರ್ ಸೇರಿದಂತೆ ಹಲವು ಕಾರುಗಳನ್ನು ಹೊಂದಿದ್ದಾರೆ ಎಂದು ವಿಶಾಲ್ ಗೌಡ ಹೇಳಿದ್ದಾರೆ.
 

88

ದರ್ಶನ್ ಬಾಳಲ್ಲಿ ಪವಿತ್ರಾ ಗೌಡ ಯಾಕೆ ಎಂಟ್ರಿ ಕೊಟ್ಟರು ಗೊತ್ತಿಲ್ಲ. ಆದರೆ ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು. ಇಂತಹ ಘಟನೆಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ವಿಶಾಲ್ ಗೌಡ ಹೇಳಿದ್ದಾರೆ.
 

Read more Photos on
click me!

Recommended Stories