ನೀ ಜೊತೆಗಿದ್ದರೆ ಜೀವನವೇ ಸುಂದರ, 'ದೇವತೆಯಂಥ' ಹೆಂಡ್ತಿಗೆ ಬರ್ತ್ ಡೇ ವಿಶ್ ಮಾಡಿದ ನಿಖಿಲ್ ಕುಮಾರಸ್ವಾಮಿ!

First Published | Jun 21, 2024, 2:40 PM IST

ನಟ ಮತ್ತು ರಾಜಕಾರಣಿ ಆಗಿರುವ ನಿಖಿಲ್ ಕುಮಾರಸ್ವಾಮಿ ಅವರ ಪತ್ನಿ ರೇವತಿ ಅವರು ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಹೆಂಡ್ತಿಗೆ ನಟ ಮುದ್ದಾಗಿ ವಿಶ್ ಮಾಡಿದ್ದಾರೆ. 
 

ಸ್ಯಾಂಡಲ್ ವುಡ್ ನಟ ಮತ್ತು ರಾಜಕೀಯದಲ್ಲಿ ಗುರುತಿಸಿಕೊಂಡಿರುವ ನಿಖಿಲ್ ಕುಮಾರಸ್ವಾಮಿ (Nikhil Kumaraswamy), ತಮ್ಮ ಸಾಂಸಾರಿಕ ವಿಷಯ ಬಂದಾಗ ಹೆಚ್ಚಾಗಿ ಮೀಡೀಯಾದಿಂದ ದೂರವೇ ಉಳಿಯುತ್ತಾರೆ, ಅವರ ಪತ್ನಿ ಹಾಗೂ ಮಗನನ್ನು ಸಹ ಪ್ರಚಾರ, ರಾಜಕೀಯದಿಂದ ದೂರವೇ ಇಟ್ಟಿದ್ದಾರೆ. ಆದರೆ ನಿಖಿಲ್ ಮತ್ತು ರೇವತಿ ಜೋಡಿ ಮಾತ್ರ ಕರ್ನಾಟದ ಜನತೆಯ ಮೆಚ್ಚಿನ ಜೋಡಿಗಳಲ್ಲಿ ಒಂದಾಗಿದೆ. 

ಸದಾ ಪತಿ ನಿಖಿಲ್ ಕುಮಾರಸ್ವಾಮಿಯವರ ಬೆನ್ನೆಲುಬಾಗಿ ನಿಂತು, ಆತನ ಪ್ರತಿಯೊಂದು ಕೆಲಸದಲ್ಲೂ ಸಾಥ್ ನೀಡುವ ಪತ್ನಿ ರೇವತಿ ನಿಖಿಲ್ (Revathi Nikhil), ಇವರಿಬ್ಬರ ಜೋಡಿ ನೋಡಿ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹೊಗಳುತ್ತಲೇ ಇರ್ತಾರೆ. ರೇವತಿಯಂತಹ ಹುಡುಗಿ ಎಲ್ಲರಿಗೂ ಸಿಗಲ್ಲ, ಅವರು ದೇವರಂತವರು ಎಂದು ಹಾಡಿ ಹೊಗಳುತ್ತಾರೆ. 

Tap to resize

ಇಂದು ರೇವತಿ ಹುಟ್ಟುಹಬ್ಬವಾಗಿದ್ದು (birthday), ನಿಖಿಲ್ ತಮ್ಮ ಮುದ್ದಿನ ಮಡದಿಗೆ ಸೋಶಿಯಲ್ ಮೀಡಿಯಾದಲ್ಲಿ ಜೊತೆಯಾಗಿರುವ ಫೊಟೋ ಶೇರ್ ಮಾಡುವ ಮೂಲಕ ವಿಶ್ ಮಾಡಿದ್ದಾರೆ. ಕಳೆದ ವರ್ಷ ಹೆಂಡ್ತಿ ಹುಟ್ಟು ಹಬ್ಬವನ್ನು ವಿಶೇಷವಾಗಿಸಲು ಮಾಲ್ಡೀವ್ಸ್ ಗೆ ತೆರಳಿದ್ದರು ಈ ಜೋಡಿ. ಈ ಬಾರಿ ರಾಜಕೀಯದಲ್ಲಿ ಬ್ಯುಸಿಯಾಗಿರೋದ್ರಿಂದ ಊರಲ್ಲೇ ಇರುವಂತಿದೆ. 

ತಮ್ಮ ಸೊಶಿಯಲ್ ಮೀಡೀಯಾದಲ್ಲಿ (social media) ಪತ್ನಿಯ ಕೈ ಹಿಡಿದು, ಕಣ್ಣುಗಳನ್ನು ನೋಡುತ್ತಾ ಪೋಸ್ ಕೊಟ್ಟಿರುವ ಫೋಟೋ ಶೇರ್ ಮಾಡಿರುವ ನಿಖಿಲ್  ಹುಟ್ಟುಹಬ್ಬದ ಶುಭಾಶಯಗಳು, ಈ ವರ್ಷವು ಶುಭವಾಗಲಿ. ನಾವು ಭೇಟಿಯಾದ ನಂತರ ಜೊತೆಯಾಗಿ ಆಚರಿಸುತ್ತಿರುವ 5ನೇ ಹುಟ್ಟುಹಬ್ಬ ಇದು. ನೀನು ಜೊತೆಯಾದ ಬಳಿಕ ಜೀವನ ವಿಶೇಷ ಮತ್ತು ಸ್ಮರಣೀಯವಾಗಿದೆ. ಮುಂದಿನ ಜೀವನವೂ ಹೀಗೆ ಇರಲಿ. ಯಾವಾಗಲೂ ಖುಷಿಯಾಗಿರು ಎಂದು ವಿಶ್ ಮಾಡಿದ್ದಾರೆ. 

ನಿಖಿಲ್ ಅಭಿಮಾನಿಗಳಿಂದಲೂ ಶುಭಾಶಯದ ಮಹಾಪೂರವೇ ಹರಿದು ಬರುತ್ತಿದೆ. ಜನರು ಹುಟ್ಟುಹಬ್ಬದ ಶುಭಾಶಯಗಳು ಅತ್ತಿಗೆ. ನಿಮ್ಮ ಜೋಡಿಗೆ ದೃಷ್ಟಿ ತೆಗೆಸುಕೊಳ್ಳಿ, ನಿಮ್ಮ ಸಿಂಪ್ಲಿಸಿಟಿಗೆ ನಾನು ಅಭಿಮಾನಿಯಾಗಿದ್ದೇನೆ, ನಿಮ್ಮಿಬ್ಬರ ಜೋಡಿ ಯಾವಾಗ್ಲೂ ಹೀಗೆ ಇರಲಿ ಅಂತ ಚಾಮುಂಡೇಶ್ವರಿ ತಾಯಿ ಹತ್ರ ಬೇಡಿಕೊಳ್ಳುತ್ತೇನೆ. ಉಳಿದ ಜನರು ನಿಮ್ಮ ಜೋಡಿ ನೋಡಿ ಕಲಿಯೋದು ಸಾಕಷ್ಟಿದೆ ಎಂದು ಬರೆದುಕೊಂಡಿದ್ದಾರೆ. 

ನಿಖಿಲ್ -ರೇವತಿ 2020ರಲ್ಲಿ ಕೋವಿಡ್ ಸಮಯದಲ್ಲಿ ವೈವಾಹಿಕ ಜೀವನಕ್ಕೆ (Married Life) ಕಾಲಿಟ್ಟಿದ್ದರು. ಇವರಿಬ್ಬರದು ಅರೇಂಜ್ ಮ್ಯಾರೇಜ್ ಆಗಿದ್ದು, ಮನೆಯವರೇ ನಿಶ್ಚಯಿಸಿ ಮದುವೆಯಾದ ಜೋಡಿಯಿದು. ರೇವತಿ ಆರ್ಕಿಟೆಕ್ಚರ್ ಇಂಜಿನಿಯರಿಂಗ್ ಮಾಡಿದ್ದು, ಜ್ಯುವೆಲ್ಲರಿ ಡಿಸೈನಿಂಗ್ ನಲ್ಲಿ ಡಿಪ್ಲೋಮಾ ಕೋರ್ಸ್ ಕೂಡ ಮಾಡಿದ್ದರು. 

ಈ ಮುದ್ದಾದ ಜೋಡಿಗೆ ಸೆಪ್ಟೆಂಬರ್ 24, 2021 ರಲ್ಲಿ ಗಂಡು ಮಗು ಜನಿಸಿದ್ದು, ಮಗುವಿಗೆ ಅವ್ಯಾನ್ ದೇವ್ ಎಂದು ಹೆಸರಿಟ್ಟಿದ್ದರು. ರೇವತಿ ಸೋಶಿಯಲ್ ಮೀಡಿಯಾದಲ್ಲಿ ಅಷ್ಟೊಂದು ಆಕ್ಟಿವ್ ಆಗಿಲ್ಲ, ಆದರೆ ನಿಖಿಲ್ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದು, ಇಬ್ಬರು ಜೊತೆಯಾಗಿ ಪ್ರವಾಸ ಮಾಡಿರೋ ಫೋಟೋಗಳನ್ನು, ಮುದ್ದಾದ ಕ್ಷಣಗಳ ಫೊಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. 
 

Latest Videos

click me!