ಪವಿತ್ರಾ ಗೌಡ ಫೋಟೋವನ್ನು ಕೈಮೇಲೆ ಹಚ್ಚೆ ಹಾಕಿಸ್ಕೊಂಡ ಅಭಿಮಾನಿ!‌ ತಲೆ ತಲೆ ಚಚ್ಚಿಕೊಂಡ ನಟಿ, ಮಾಡೆಲ್!‌

Published : Aug 12, 2025, 03:08 PM ISTUpdated : Aug 12, 2025, 03:13 PM IST

ಸಿನಿಮಾದವರು ಅಥವಾ ಸಾಧಕರ ಹೆಸರನ್ನು ಅಭಿಮಾನಿಗಳು ಹಚ್ಚೆ ಹಾಕಿಸಿಕೊಂಡಿರೋದನ್ನು ನೋಡಿರ್ತೀರಿ, ಅಂತೆಯೇ ನಟಿ, ಮಾಡೆಲ್‌, ಉದ್ಯಮಿ ಪವಿತ್ರಾ ಗೌಡ ಅವರ ಫೋಟೋವನ್ನು ಅಭಿಮಾನಿಯೊಬ್ಬ ಕೈಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾನೆ. ಈ ವಿಡಿಯೋ ವೈರಲ್‌ ಆಗ್ತಿದೆ. 

PREV
15

ಹೌದು, ಸದ್ಯ ರೇಣುಕಾಸ್ವಾಮಿ ಕೊಲೆ ಆರೋಪ ಕೇಸ್‌ನಲ್ಲಿ ಕೇಳಿಬರುತ್ತಿರುವ ಪವಿತ್ರಾ ಗೌಡ ಅವರ ಅಭಿಮಾನಿ ಸಿದ್ದು ಎನ್ನುವವರು ಈ ರೀತಿ ಮಾಡಿದ್ದಾರಂತೆ. ಅಂದಹಾಗೆ ಇವರು ನಟ ದರ್ಶನ್‌ ತೂಗುದೀಪ ಅಭಿಮಾನಿಯಂತೆ.

25

ಪವಿತ್ರಾ ಗೌಡ ಅವರ ರೆಡ್‌ ಕಾರ್ಪೆಟ್‌ ಸ್ಟುಡಿಯೋಗೆ ಬಂದು ಹಚ್ಚೆ ಹಾಕಿಸಿಕೊಂಡಿರೋದನ್ನು ತೋರಿಸಿದ್ದಾರೆ. ಅದನ್ನು ನೋಡಿ ಪವಿತ್ರಾ ಅವರು ನಕ್ಕಿದ್ದಲ್ಲದೆ ತಲೆ ಚಚ್ಚಿಕೊಂಡಿದ್ದಾರೆ.

35

ಈ ವಿಡಿಯೋಕ್ಕೆ ವಿವಿಧ ರೀತಿಯ ಕಾಮೆಂಟ್‌ಗಳು ಬಂದಿದೆ. ಒಂದು ಕೈ ಮೇಲೆ ದರ್ಶನ ಟ್ಯಾಟೋ ಹಾಕಿಸ್ಕೋ, ನಾವು 2025 ರಲ್ಲಿ ಇದ್ದೇವೆ. ಇನ್ನು ನಮ್ಮ ಜನಗಳಿಗೆ ಯಾರನ್ನು ಆರಾಧಿಸಬೇಕು ಯಾರನ್ನು ಆರಾಧಿಸಬಾರದು ಅನ್ನೋದೇ ಗೊತ್ತಾಗ್ತ ಇಲ್ಲ ಎಂದು ಕೂಡ ಕೆಲವರು ಕಾಮೆಂಟ್‌ ಮಾಡಿದ್ದಾರೆ.

45

“ನೀವು ನನ್ನ ಮೇಲೆ ತೋರಿಸಿದ ಪ್ರೀತಿ, ವಾತ್ಸಲ್ಯವನ್ನು ನಾನು ನಿಜವಾಗಿಯೂ ಪ್ರಶಂಸಿಸುತ್ತೇನೆ. ನಿಮ್ಮ ಹಾವಭಾವ ನನ್ನ ಹೃದಯವನ್ನು ಮುಟ್ಟಿತು, ಆದರೆ ಪ್ರಾಮಾಣಿಕವಾಗಿ, ನಿಮ್ಮ ಪ್ರೀತಿಯನ್ನು ಸಾಬೀತುಪಡಿಸಲು ನೀವು ಹಚ್ಚೆ ಹಾಕಿಸಿಕೊಳ್ಳುವ ಮಟ್ಟಕ್ಕೆ ಹೋಗಬೇಕಾಗಿಲ್ಲ. ನಿಮ್ಮ ಬೆಂಬಲ ಮತ್ತು ದಯೆ ನನ್ನ ಮೇಲೆ ಇದ್ದರೆ ನನ್ನ ಜೀವನದ ಶಾಶ್ವತ ನೆನಪು. ಧನ್ಯವಾದಗಳು” ಎಂದು ಪವಿತ್ರಾ ಗೌಡ ಅವರು ಸೋಶಿಯಲ್‌ ಮೀಡಿಯಾ ಪೋಸ್ಟ್‌ ಮೂಲಕ ಹೇಳಿದ್ದಾರೆ.

55

ಅಂದಹಾಗೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪವಿತ್ರಾ ಗೌಡ ಅವರು ಸದ್ಯ ಜಾಮೀನಿನ ಮೇಲೆ ಹೊರಗಡೆ ಇದ್ದಾರೆ. ಮಗಳ ಪರೀಕ್ಷೆ ನಡೆಯುತ್ತಿದೆ, ಜಾಮೀನು ರದ್ದು ಮಾಡಬೇಡಿ ಎಂದು ಅವರು ಕೋರ್ಟ್‌ಗೆ ಮನವಿ ಮಾಡಿದ್ದರು. 

Read more Photos on
click me!

Recommended Stories