ಇದು ಪಕ್ಕಾ ದರ್ಶನ್ ಅಭಿಮಾನಿಗಳ ಸಾಂಗ್.. ಆ.15ಕ್ಕೆ ದಿ ಡೆವಿಲ್ ಚಿತ್ರದ ಹಾಡು ಬಿಡುಗಡೆ

Published : Aug 11, 2025, 12:18 PM IST

ತಮ್ಮ ನೆಚ್ಚಿನ ನಟನ ಚಿತ್ರದ ಹೊಸ ಸುದ್ದಿ ತಿಳಿದು ದರ್ಶನ್‌ ಅವರ ಅಭಿಮಾನಿಗಳು ಫುಲ್‌ ಖುಷಿಯಾಗಿದ್ದಾರೆ. ವಿಶೇಷ ಎಂದರೆ ಆಗಸ್ಟ್‌ 15ರಂದು ಈ ಹಾಡು ಬಿಡುಗಡೆ ಆಗಲಿದೆ.

PREV
15

ನಟ ದರ್ಶನ್‌ ನಟನೆಯ ‘ದಿ ಡೆವಿಲ್’ ಚಿತ್ರದ ಮೊದಲ ಹಾಡು ಆಗಸ್ಟ್‌ 15ಕ್ಕೆ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿದೆ.

25

ತಮ್ಮ ನೆಚ್ಚಿನ ನಟನ ಚಿತ್ರದ ಹೊಸ ಸುದ್ದಿ ತಿಳಿದು ದರ್ಶನ್‌ ಅವರ ಅಭಿಮಾನಿಗಳು ಫುಲ್‌ ಖುಷಿಯಾಗಿದ್ದಾರೆ. ವಿಶೇಷ ಎಂದರೆ ‘ಇದ್ರೇ ನೆಮ್ದಿಯಾಗ್‌ ಇರ್ಬೇಕ್‌’ಎಂದು ಎನ್ನುವ ಸಾಲಿನೊಂದಿಗೆ ಹಾಡಿನ ಬಿಡುಗಡೆ ದಿನಾಂಕ ಪ್ರಕಟಿಸಲಾಗಿದೆ.

35

‘ಇದ್ರೇ ನೆಮ್ದಿಯಾಗ್‌ ಇರ್ಬೇಕ್‌’ ಎನ್ನುವ ಮಾತು ನಟ ದರ್ಶನ್‌ ಅವರೇ ಬೇರೊಂದು ಸಂದರ್ಭದಲ್ಲಿ ಮಾತನಾಡಿದ ಬೈಗುಳ ಜೊತೆಗೆ ಕೇಳಿ ಬಂದ ಮಾತು. ಇದೇ ಬೈಗುಳ ಸಾಲಿನ ಹೆಸರಿನೊಂದಿಗೆ ಹಲವು ಕಡೆ ಹೋಟೆಲ್‌ಗಳು ಕೂಡ ಶುರುವಾಗಿದೆ.

45

ಅಲ್ಲದೇ ಹಲವು ಟ್ರೋಲ್ ಪೇಜ್‌ಗಳು, ಮೀಮ್ಸ್‌ಗಳಿಗೂ ಈ ಸಾಲು ಬಳಕೆಯಾಗಿದೆ. ಈಗ ಚಿತ್ರದ ಹಾಡಿನ ಸಾಲು ಕೂಡ ಅದೇ ಬೈಗುಳದಿಂದ ಶುರುವಾಗುವ ಸೂಚನೆ ಸಿಕ್ಕಿದೆ.

55

ಆ ಮೂಲಕ ಇದು ಪಕ್ಕಾ ಅಭಿಮಾನಿಗಳ ಸಾಂಗ್ ಆಗಿಸುವ ನಿಟ್ಟಿನಲ್ಲಿ ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕ ಮಿಲನ ಪ್ರಕಾಶ್‌ ಅವರು ಪ್ಲಾನ್‌ ಮಾಡಿದಂತಿದೆ. ‘ಇದ್ರೇ ನೆಮ್ದಿಯಾಗ್‌ ಇರ್ಬೇಕ್‌’ ಎನ್ನುವ ಹಾಡು ಆಗಸ್ಟ್‌ 15ರಂದು ಬೆಳಗ್ಗೆ 10 ಗಂಟೆಗೆ ಸರೆಗಮ ಯೂಟ್ಯೂಬ್‌ ಚಾನಲ್‌ನಲ್ಲಿ ಬಿಡುಗಡೆ ಆಗಲಿದೆ.

Read more Photos on
click me!

Recommended Stories