ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮತ್ತು ಸಂಗೀತಾ ಶೃಂಗೇರಿ ಜೋಡಿಯಾಗಿ ನಟಿಸಿದ 777 ಚಾರ್ಲಿ ಸಿನಿಮಾ 2022ರಲ್ಲಿ ತೆರೆ ಕಂಡಿತ್ತು. ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದವರೇ ಕಿರಣ್ ರಾಜ್ ಕೆ.
ಸಿಂಪಲ್ ಆಂಡ್ ಹಂಬಲ್ ಡೈರೆಕ್ಟರ್ ಕಿರಣ್ ರಾಜ್ ಇದೀಗ ಮಂಗಳೂರಿನಲ್ಲಿ ಸೈಲೆಂಟ್ ಆಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮಹಿಳಾ ಅಭಿಮಾನಿಗಳಿಗೆ ಹಾರ್ಟ್ ಬ್ರೇಕ್ ಆಗಿದೆ.
ಹೌದು! ಜನವರಿ 12ರಂದು ಮಂಗಳೂರಿನಲ್ಲಿ ಕಿರಣ್ ರಾಜ್ ಮತ್ತು ಅನಯ ವಸುಧಾ ನಿಶ್ಚಿತಾರ್ಥ ನಡೆದಿದೆ. ಅನಯ ಮೂಲತಃ ಕಾಸರಗೋಡು ಚೆಲುವೆ.
ಅನಯ ವಸುಧಾ ವೃತ್ತಿಯಲ್ಲಿ ನೃತ್ಯಗಾರ್ತಿ ಆಗಿದ್ದು ವಿದೇಶದಲ್ಲಿ ವ್ಯಾಸಂಗ ಮಾಡಿದ್ದಾರೆ. ಆರ್ಟ್ ಆರ್ಟ್ ಮೀಟ್ಸ್ ಟು ಮೇಕ್ ವಂಡರ್ ಅಂತ ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.
ಕ್ರೀಮ್ ಬಣ್ಣದ ರೇಷ್ಮಾ ಪಂಚೆಯಲ್ಲಿ ಕಿರಣ್ ರಾಜ್ ಕಾಣಿಸಿಕೊಂಡಿದ್ದಾರೆ. ಗೋಲ್ಡ್ ಬಣ್ಣದ ಲಂಗಾ ದಾವಣಿಯಲ್ಲಿ ಹಾಗೂ ಗೋಲ್ಡ್ ಆಂಡ್ ಆರೇಂಜ್ ಕಾಂಬಿನೇಷನ್ ಸೀರೆಯಲ್ಲಿ ಅನಯ ಮಿಂಚಿದ್ದಾರೆ.
ಈಗಷ್ಟೇ ನಿಶ್ಚಿತಾರ್ಥ ಆಗಿದ್ದು ಮದುವೆ ದಿನಾಂಕ ರಿವೀಲ್ ಮಾಡಿಲ್ಲ. ಸ್ನೇಹಿತರು ಮತ್ತು ಕುಟುಂಬಸ್ಥರು ನಿಶ್ಚಿತಾರ್ಥದಲ್ಲಿ ಭಾಗಿಯಾಗಿದ್ದು ಹಂಚಿಕೊಂಡಿರುವ ಫೋಟೋವನ್ನು ಕಿರಣ್ ರೀ-ಶೇರ್ ಮಾಡಿದ್ದಾರೆ.