ಚಂದನವನದ ಮುದ್ದು ಬೆಡಗಿ ನಿಶ್ವಿಕಾ ನಾಯ್ಡು (Nishvika Naidu) ಸೋಶಿಯಲ್ ಮೀಡೀಯಾದಲ್ಲಿ ಕ್ರಿಸ್ಮಸ್ ಮುಗಿಯಿತು, ನಾನು ಮತ್ತೆ ಮೊದಲಿನಂತೆ ತುಂಟಿಯಾಗಲೇ ಎಂದು ಪ್ರಶ್ನೆ ಕೇಳಿದ್ದಾರೆ. ಅಷ್ಟೇ ಅಲ್ಲ ಅದರ ಜೊತೆಗೆ ಒಂದಿಷ್ಟು ಫೋಟೊಗಳನ್ನು ಶೇರ್ ಮಾಡಿದ್ದಾರೆ.
ಹೌದು, ಸ್ಯಾಂಡಲ್ ವುಡ್ ಭರವಸೆಯ ನಟಿ, ಡ್ಯಾನ್ಸಿಂಗ್ ಬ್ಯೂಟಿ ನಿಶ್ವಿಕಾ ತಮ್ಮ ನಾಟಿ ನಾಟಿ ಫೋಟೊಗಳನ್ನು ಶೇರ್ ಮಾಡುತ್ತಲೇ, ನಾನು ಮತ್ತೆ ತುಂಟಿಯಾಗಲೇ ಎಂದು ಕೇಳಿದ್ದಾರೆ. ನಿಶ್ವಿಕಾ ತಮ್ಮ ಇನ್’ಸ್ಟಾಗ್ರಾಂನಲ್ಲಿ 9 ಫೋಟೋಗಳನ್ನು ಶೇರ್ ಮಾಡಿದ್ದು, ಪ್ರತಿಯೊಂದು ಫೋಟೊಗಳಲ್ಲೂ ನಟಿಯ ತುಂಟತನ ಎದ್ದು ಕಾಣುತ್ತೆ.
ನಿಶ್ವಿಕಾ ತಮ್ಮ ಹೊಸ ಫೋಟೊ ಶೂಟಲ್ಲಿ ಬ್ಲ್ಯಾಕ್ ಆಂಡ್ ವೈಟ್ ಲುಕ್ ಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಬಿಳಿ ಬಣ್ಣದ ಶರ್ಟ್, ಅದರ ಮೇಲೆ ಕಪ್ಪು ಬಣ್ಣದ ಕೋಟ್ ಹಾಗೂ ಕೆಳಗಡೆ ಕಪ್ಪು ಬಣ್ಣದ ಸ್ಕರ್ಟ್ ಧರಿಸಿದ್ದು, ಶೂ ಮತ್ತು ಸಾಕ್ಸ್, ಜೊತೆಗೆ ತಲೆಯ ಮೇಲೊಂದು ಹೆಡ್ ಕೂಡ ಇದೆ.
ನಿಶ್ವಿಕಾದ ಈ ಲುಕ್ ಸಖತ್ ಇಂಟ್ರೆಸ್ಟಿಂಗ್ ಆಗಿದೆ. ಈ ಫೋಟೊಗಳನ್ನು ನೋಡಿದ್ರೆ, ತುಂಟ ಮಗುವೊಂದು, ಏನೆಲ್ಲಾ ತುಂಟತನ ಮಾಡೋಕೆ ಸಾಧ್ಯವೋ ಅದನ್ನೆಲ್ಲಾ ಮಾಡುತ್ತಾ, ಕುಳಿತಿರುವಂತೆ ಕಾಣಿಸುತ್ತಿದೆ. ಹಾಗಾಗಿ ಫೋಟೊ ನೋಡೋದಕ್ಕೂ ಮುದ್ದಾಗಿದೆ.
ಈ ಫೋಟೊಗಳಲ್ಲಿ ನಿಶ್ವಿಕಾ ನೀಡಿರುವ ಒಂದೊಂದು ಲುಕ್ ಕೂಡ ವಿಭಿನ್ನವಾಗಿವೆ, ಒಂದರಲ್ಲ ತುಂಟಿಯಂತೆ ಕಂಡರೆ, ಮತ್ತೊಂದರಲ್ಲಿ ಮಾದಕತೆ ಎದ್ದು ಕಾಣುತ್ತೆ, ಆ ಒದ್ದೆ ಕೂದಲು, ಆ ಬೋಲ್ಡ್ ಲುಕ್, ಆಕೆಯ ಕಣ್ಸನ್ನೆ ಎಲ್ಲವೂ ಸಖತ್ ಬೋಲ್ಡ್ ಆಗಿವೆ.
ನಿಶ್ವಿಕಾ ನಾಯ್ಡು ಫೋಟೋಗಳಿಗೆ ನಟಿಯರಾದ ಅಮೃತಾ ಅಯ್ಯಂಗಾರ್, ಶಾನ್ವಿ ಶ್ರೀವಾಸ್ತವ್, ರೋಶ್ನಿ ಪ್ರಕಾಶ್, ಕೃಷಿ ತಾಪಂಡ ಹಾಗೂ ಪ್ರಣಮ್ ದೇವರಾಜ್ ಫೈರ್ ಇಮೋಜಿ ಮೂಲಕ ಕಾಮೆಂಟ್ ಮಾಡಿದ್ದಾರೆ. ಅಂದ್ರೆ ನಿಶ್ವಿಕಾ ನಾಯ್ಡು ಲುಕ್ ಫೈರ್ ಥರ ಇದೆ ಅಂತಾನೆ ಅರ್ಥ.
ಇನ್ನು ಅಭಿಮಾನಿಗಳು ಸಹ ಕಾಮೆಂಟ್ ಮಾಡಿದ್ದು, ತುಂಬಾನೆ ಹಾಟ್ ಆಗಿ ಕಾಣಿಸ್ತೀರಿ, ತುಂಟಿ ಅಲ್ಲ ನೀವು ನಾಟಿ ಎಂದಿದ್ದಾರೆ. ಇನ್ನೂ ಕೆಲವರು ಪ್ರೆಟಿ, ಬೆಂಕಿ, ಬ್ಯೂಟಿ, ನಿಮ್ಮಷ್ಟು ಹಾಟ್ ಯಾರೂ ಇಲ್ಲ ಬಿಡಿ ಎಂದು ಕಾಮೆಂಟ್ ಮಾಡಿ ನಟಿಯ ಹೊಸ ಲುಕ್ ನೋಡಿ ಹೊಗಳಿದ್ದಾರೆ.
ಅಮ್ಮ ಐ ಲವ್ ಯೂ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಿಶ್ವಿಕಾ ನಾಯ್ಡು, ನಟಿಸಿದ್ದು 11 ಚಿತ್ರಗಳಲ್ಲಾದರೂ ಸಿಕ್ಕಾಪಟ್ಟೆ ಅಭಿಮಾನಿಗಳನ್ನು ಪಡೆದಿರುವ ನಟಿ ಇವರು. ಇವರ ಒಂದೆರಡು ಸ್ಪೆಷಲ್ ಹಾಡುಗಳಲ್ಲೂ ಕಾಣಿಸಿಕೊಂಡಿದ್ದು, ಈ ಹಾಡುಗಳು ಪಡ್ಡೆ ಹುಡುಗರ ಎದೆಯಲ್ಲಿ ಕಚಗುಳಿ ಇಟ್ಟಿದ್ದವು.