ಕ್ಯಾನ್ಸರ್ ನಿಂದ ಬಳಲುತ್ತಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ (Dr Shivarajkumar) ಕಳೆದ ಡಿಸೆಂಬರ್ 18ರಂದು ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದರು. ಕ್ಯಾನ್ಸರ್ ನಿಂದ ಬಳಲುತ್ತಿದ್ದರೂ ಶಿವಣ್ಣ ಆ ಬಗ್ಗೆ ಎಲ್ಲೂ ಹೆಚ್ಚು ಮಾಹಿತಿಯನ್ನು ಬಿಟ್ಟು ಕೊಡದೇ, ತಮ್ಮ ಸಿನಿಮಾದ ಪ್ರೊಮೋಶನ್ ಗಳಲ್ಲಿ, ರಿಯಾಲಿಟಿ ಶೋಗಳಲ್ಲಿ ಸಖತ್ ಎನರ್ಜಿಯಿಂದಲೇ ಭಾಗಿಯಾಗಿದ್ದರು ಶಿವಣ್ಣ. ಅಮೆರಿಕಾಗೆ ತೆರಳುವ ಮುನ್ನ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿ, ನನಗೆ ಚಿಕಿತ್ಸೆ ಬಗ್ಗೆ ಭಯ ಇಲ್ಲ, ಆದರೆ ಮೂರು ತಿಂಗಳು ಮನೆಯನ್ನು, ಊರನ್ನು ಬಿಟ್ಟು ಇರಬೇಕು ಅನ್ನೋದು ಚಿಂತೆ ಎಂದು ಕಣ್ಣೀರಿಟ್ಟಿದ್ದರು.