777 ಚಾರ್ಲಿ ನಿರ್ದೇಶಕ ಕಿರಣ್ ರಾಜ್ ಮದುವೆ ಸಂಭ್ರಮ ಜೋರಾಗಿಯೇ ನಡೆಯುತ್ತಿದೆ. ಪ್ರೀತಿಸಿದ ಹುಡುಗಿ ಅನಯಾ ವಸುಧಾ ಜೊತೆ ಜನವರಿ ತಿಂಗಳಲ್ಲಿ ನಿಶ್ಚಿತಾರ್ಥ ನಡೆದಿತ್ತು. ಸದ್ಯದಲ್ಲೇ ಹಸೆಮಣೆ ಏರಲಿರುವ ಈ ಜೋಡಿ ಇದೀಗ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿದ್ದಾರೆ.
ಸಿನಿ ರಸಿಕರ ಕಣ್ಣಂಚನ್ನು ಒದ್ದೆ ಮಾಡಿದ ರಕ್ಷಿತ್ ಶೆಟ್ಟಿ ನಟಿಸಿರುವ ಕನ್ನಡ ಸೂಪರ್ ಹಿಟ್ ಚಿತ್ರ 777 ಚಾರ್ಲಿ ನಿರ್ದೇಶಕ ಕಿರಣ್ ರಾಜ್ ಅವರು ವೈವಾಹಿಕ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಈಗಾಗಲೇ ಮದುವೆ ಶಾಸ್ತ್ರಗಳು ಶುರುವಾಗಿದೆ.
210
ಶೀಘ್ರದಲ್ಲಿ ಮದುವೆ
ಕಳೆದ ಜನವರಿ 13,2025 ರಂದು ಮಂಗಳೂರಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ ನವಂಬರ್ ತಿಂಗಳ ಆರಂಭದಲ್ಲಿ ವೈವಾಹಿಕ ಜೀವನ ಆರಂಭಿಸಲಿದ್ದಾರೆ ಎನ್ನಲಾಗುತ್ತಿದೆ. ಇದೀಗ ಪ್ರಿ ವೆಡ್ಡಿಂಗ್ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದಿವೆ.
310
ಫೋಟೊಗಳು ವೈರಲ್
ಕಿರಣ್ ರಾಜ್ ಮದುವೆ ಮೊದಲಿನ ಸಂಭ್ರಮದ ಫೋಟೊಗಳು ಹಾಗೂ ಪ್ರೀ ವೆಡ್ಡಿಂಗ್ ಫೋಟೊ ಶೂಟ್ ಸಖತ್ ವೈರಲ್ ಆಗುತ್ತಿದ್ದು, ಈ ಜೋಡಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
ಕಿರಣ್ ರಾಜ್ ಮೂಲತಃ ಕಾಸರಗೋಡಿನವರೇ ಆಗಿದ್ದು, ಅನಯ ವಸುಧಾ ವೃತ್ತಿಯಲ್ಲಿ ನೃತ್ಯಗಾರ್ತಿ ಆಗಿದ್ದು , ಅವರು ಕೂಡ ಕಾಸರಗೋಡಿನವರು, ಸದ್ಯ ಯುಕೆಯಲ್ಲಿ ನೆಲೆಸಿದ್ದು, ಅಲ್ಲಿ ಭರತನಾಟ್ಯ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.
510
ಇವರಿಬ್ಬರ ಲವ್ ಸ್ಟೋರಿ ಶುರು ಆಗಿದ್ದು ಹೀಗೆ
ಈ ಜೋಡಿಯ ಲವ್ ಸ್ಟೋರಿ ಶುರುವಾಗಿದ್ದು ಯುಕೆನಲ್ಲಿಯೇ. ಕಿರಣ್ ರಾಜ್ ಯುಕೆಗೆ ಅನಿಮೇಷನ್ ಕಲಿಯಲು ಹೋಗಿದ್ದರು. ಈ ಕೋರ್ಸ್ ಸಮಯದಲ್ಲಿ ಅನಯಾ ವಸುಧಾ ಪರಿಚಯ ಆದರು, ಆ ಪರಿಚಯ ಸ್ನೇಹಕ್ಕೆ ತಿರುಗಿ ಬಳಿಕೆ ಪ್ರೀತಿ ಮಾಡಿತ್ತು ಈ ಜೋಡಿ.
610
ಇಬ್ಬರ ದೃಷ್ಟಿಕೋನ ಒಂದೇ
ಅನಯಾ ವಸುಧಾ ಮತ್ತು ಕಿರಣ್ ರಾಜ್ ಜೀವನದ ಬಗ್ಗೆ ಇರೋ ದೃಷ್ಟಿಕೋನ ಒಂದೇ ಆಗಿದೆ. ಇಬ್ಬರ ಊರು ಒಂದೇ ಆಗಿದೆ. ಹಾಗಾಗಿಯೇ ನಮ್ಮ ನಡುವೆ ಒಂದು ವಿಶೇಷ ಬಾಂಡಿಂಗ್ ಬೆಳೆಯಿತು ಎಂದು ಕಿರಣ್ ರಾಜ್ ಈ ಹಿಂದೆ ಹೇಳಿದ್ದರು.
710
ಸಂಭ್ರಮ ಜೋರಾಗಿದೆ
ಸದ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿರುವ ಫೋಟೊಗಳಲ್ಲಿ ನೃತ್ಯ, ಸಂಗೀತ, ಮೋಜು, ಮಸ್ತಿ ಎಲ್ಲವನ್ನೂ ಕಾಣಬಹುದು. ಆದರೆ ಇದು ಯಾವ ಕಾರ್ಯಕ್ರಮ ಎನ್ನುವ ಕುರಿತು ಮಾಹಿತಿ ಲಭ್ಯವಿಲ್ಲ.
810
ಪತ್ನಿ ಜೊತೆ ಹೆಜ್ಜೆ ಹಾಕಿದ ಕಿರಣ್ ರಾಜ್
ಕಿರಣ್ ರಾಜ್ ಕೂಡ ಪತ್ನಿ ಅನಯಾ ಜೊತೆ ನೃತ್ಯ ಮಾಡಿ ಸಂಭ್ರಮಿಸಿದ್ದು, ಇದೊಂದು ಮೋಜು, ಮನರಂಜನೆಯಿಂದ ತುಂಬಿದ ಕಾರ್ಯಕ್ರಮವಾಗಿತ್ತು. ಕುಟುಂಬದ ಸದಸ್ಯರು ಕೂಡ ಸಂಭ್ರಮಿಸಿದ್ದಾರೆ.
910
ಚಾರ್ಲಿ ಸಿನಿಮಾಗೆ ರಾಜ್ಯ ಪ್ರಶಸ್ತಿ
ಮದುವೆಯ ಸಂಭ್ರಮದಲ್ಲಿರುವ ಕಿರಣ್ ರಾಜ್ ಗೆ ಮತ್ತೊಂದು ಗೆಲುವು ಸಿಕ್ಕಿದ್ದು, ಈ ಹಿಂದೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದ 777 ಚಾರ್ಲಿ ಸಿನಿಮಾಗೆ ಇದೀಗ ಮೂರು ಕೆಟಗರಿಗಳಲ್ಲಿ ರಾಜ್ಯ ಪ್ರಶಸ್ತಿ ಕೂಡ ಒಲಿದು ಬಂದಿದೆ.
1010
ನಾಯಿ ಮೇಲೆ ಮತ್ತೊಂದು ಸಿನಿಮಾ
ಕಿರಣ್ ರಾಜ್ ಮತ್ತೆ ನಾಯಿ ಮೇಲೆ ಕತೆ ಬರೆಯೋದಕ್ಕೆ ಶುರು ಮಾಡಿದ್ದು, ಶೀಘ್ರದಂತೆ ಚಾರ್ಲಿಯಂತೆ ಮತ್ತೊಂದು ಶ್ವಾನ ಪ್ರೇಮ ತೋರಿಸುವ ಸಿನಿಮಾ ರಿಲೀಸ್ ಆಗಲಿದೆ ಎನ್ನಲಾಗುತ್ತಿದೆ. ಆದರೆ ಅದು ಯಾವಾಗ ಎನ್ನುವ ಮಾಹಿತಿ ಲಭ್ಯವಾಗಿಲ್ಲ.