ಕನ್ನಡ ಚಿತ್ರರಂಗದಲ್ಲಿ ಈ ವರ್ಷ ಪುಟ್ಟಿ ಮತ್ತು ಅವರ ಗಂಡನ ಹವಾ ಜೋರಾಗಿಯೇ ಇದೆ ಎನ್ನುವ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಅದು ನಿಜಾ ಕೂಡ ಹೌದು. ಯಾರು ಈ ಪುಟ್ಟಿ ಮತ್ತು ಅವರ ಗಂಡ? ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿದ್ದು ಹೇಗೆ ನೋಡಿ.
ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಪೇಜ್ ಗಳಲ್ಲಿ ಇವರದ್ದೇ ಸುದ್ದಿ. ಯಾಕಂದ್ರೆ ಕನ್ನಡ ಚಿತ್ರರಂಗದಲ್ಲಿ ಪುಟ್ಟಿ ಮತ್ತು ಅವರ ಗಂಡನ ಹವಾ ಭಾರಿ ಜೋರಾಗಿಯೇ ಇದೆ ಎನ್ನುತ್ತಿದ್ದಾರೆ ಜನರು. ಯಾಕಂದ್ರೆ ಈ ಜೋಡಿ ಭರ್ಜರಿ ಸೂಪರ್ ಹಿಟ್ ಸಿನಿಮಾ ನೀಡಿದೆ.
26
ಯಾರು ಈ ಪುಟ್ಟಿ ಮತ್ತು ಅವರ ಗಂಡ
ಸಪ್ತಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ಪುಟ್ಟಿಯಾಗಿ ರುಕ್ಮಿಣಿ ವಸಂತ್ ನಟಿಸಿದ್ದರು. ಮೊದಲ ಭಾಗದಲ್ಲಿ ರಕ್ಷಿತ್ ಶೆಟ್ಟಿ ಮತ್ತು ರುಕ್ಮಿಣಿ ವಸಂತ್ ಪ್ರೀತಿಯ ಬಗ್ಗೆ ತೋರಿಸಿದ್ರೆ, ಎರಡನೇ ಭಾಗದಲ್ಲಿ ರುಕ್ಮಿಣಿ ಅಂದ್ರೆ ಪುಟ್ಟಿ ಬೇರೆ ಮದುವೆಯಾಗಿರುತ್ತಾರೆ. ಪುಟ್ಟಿ ಗಂಡನ ಪಾತ್ರದಲ್ಲಿ ನಟಿಸಿದ್ದು ಜೆಪಿ ತುಮಿನಾಡು.
36
ಜೆ.ಪಿ ತುಮಿನಾಡು
ಕನ್ನಡದಲ್ಲಿ ಸಪ್ತ ಸಾಗರದಾಚೆ ಎಲ್ಲೋ ಸೇರಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದವರು ಜೆ.ಪಿ ತುಮಿನಾಡು. ಆದರೆ ಇವರನ್ನು ಜನರು ಗುರುತಿಸಿದ್ದು, ಇವರಿಗೆ ಹೆಸರಿನ ಜೊತೆಗೆ ಯಶಸ್ಸು ತಂದುಕೊಟ್ಟದ್ದು ಸು ಫ್ರಮ್ ಸೋ ಸಿನಿಮಾ. ಈ ಸಿನಿಮಾ ಜನರನ್ನು ನಕ್ಕು ನಗಿಸುವ ಮೂಲಕ ಚಿತ್ರಮಂದಿರ ತುಂಬುವಂತೆ ಮಾಡಿತ್ತು.
ಹಾರರ್ ಕಾಮಿಡಿ ಸಿನಿಮಾ ಸು ಫ್ರಮ್ ಸೋದಲ್ಲಿ ನಾಯಕ ಅಶೋಕನ ಪಾತ್ರದಲ್ಲಿ ಜೆ.ಪಿ. ತುಮಿನಾಡು ಮಿಂಚಿದ್ದರು. ಸಿನಿಮಾ ನಿರ್ದೇಶನ ಮಾಡಿದ್ದು ಸಹ ಇವರೇ. ಈ ಸಿನಿಮಾ ಎಷ್ಟರ ಮಟ್ಟಿಗೆ ಯಶಸ್ವಿಯಾಗಿತ್ತು ಅಂದ್ರೆ ಮಲಯಾಲಂ ಮತ್ತು ತೆಲುಗಿನಲ್ಲೂ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಗಳಿಸಿದ್ದು. ಕೇವಲ 6 ಕೋಟಿಗೆ ನಿರ್ಮಾಣವಾದ ಈ ಸಿನಿಮಾ ಗಳಿಸಿದ್ದು ಬರೋಬ್ಬರಿ 104 ಕೋಟಿ.
56
ರುಕ್ಮಿಣಿ ವಸಂತ್
ಇನ್ನು ರುಕ್ಮಿಣಿ ವಸಂತ್ ಬಗ್ಗೆ ಹೇಳಬೇಕೆ? ಎರಡನೇ ಸಿನಿಮಾ ಸಪ್ತ ಸಾಗರದಾಚೆ ಮೂಲಕವೇ ಕನ್ನಡಿಗರ ಹೃದಯ ಗೆದ್ದ ಚೆಲುವೆ ರುಕ್ಮಿಣಿ, ನಂತರ ಬಘೀರ, ಭೈರತಿ ರಣಗಲ್, ಬಾನ ದಾರಿಯಲ್ಲಿ ಸಿನಿಮಾದಲ್ಲಿ ಕೂಡ ನಟಿಸಿ ಸೈ ಎನಿಸಿಕೊಂಡಿದ್ದರು. ಇದೀಗ ಕಾಂತಾರ ಚಾಪ್ಟರ್ 1ರ ಮೂಲಕ ಈ ಬೆಡಗಿ ಮೋಡಿ ಮಾಡುತ್ತಿದ್ದಾರೆ. ಆಕೆಯ ಅಭಿನಯ ಸೌಂದರ್ಯಕ್ಕೆ ಜನ ಸೋತಿದ್ದಾರೆ. ಈ ಸಿನಿಮಾ ಈ ವರ್ಷದ ಬ್ಲಾಕ್ ಬಸ್ಟರ್ ಸಿನಿಮಾವಾಗಿದೆ.
66
ಈ ವರ್ಷದ ಎರಡು ಬ್ಲಾಕ್ ಬಸ್ಟರ್ ಸಿನಿಮಾಗಳು
ಕನ್ನಡ ಚಿತ್ರರಂಗದ ಈ ವರ್ಷದ ಎರಡು ಬ್ಲಾಕ್ ಬಸ್ಟರ್ ಸಿನಿಮಾಗಳು ಎಂದರೆ ಒಂದು ಸು ಫ್ರಮ್ ಸೋ ಮತ್ತೊಂದು ಕಾಂತಾರ ಚಾಪ್ಟರ್ 1. ಈ ಎರಡೂ ಸಿನಿಮಾಗಳು ರಾಜ್ಯದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿತ್ತು. ಚಿತ್ರರಂಗಗಳು ತುಂಬುವಂತೆ ಮಾಡಿದ ಸಿನಿಮಾಗಳಿವು. ಹಾಗಾಗಿ ಪುಟ್ಟಿ ಮತ್ತು ಆಕೆಯ ಗಂಡ ಅಂದರೆ ರುಕ್ಮಿಣಿ ಮತ್ತು ಜೆಪಿ ತುಮಿನಾಡು ಈ ವರ್ಷದ ಸೂಪರ್ ಸ್ಟಾರ್ ಗಳು ಏನಂತೀರಾ?